ಮಂಗಳೂರು: ಉಳಾಯಿಬೆಟ್ಟು ಸಮೀಪದ ಪರಾರಿ ತಿರುವೈಲು ಗ್ರಾಮದ ಟೈಲ್ಸ್ ಫ್ಯಾಕ್ಟರಿ ಸಮೀಪ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದವರನ್ನು ಪೊಲೀಸರು ಎನ್‌ಕೌಂಟರ್ ಮಾಡಬೇಕು’ ಎಂದು ಕೆಪಿಸಿಸಿ ಸಂಚಾಲಕಿ ಪ್ರತಿಭಾ ಕುಳಾಯಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಪೊಲೀಸರು ಅತ್ಯಾಚಾರ ಆರೋಪಿಗಳನ್ನು ಕೂಡಲೇ ಬಂಧಿಸಿದ್ದು, ಅದಕ್ಕಾಗಿ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಲಾಗುತ್ತದೆ. ಹೊರ ರಾಜ್ಯಗಳಿಂದ ಕೆಲಸಕ್ಕೆ ಬರುವ ಕಾರ್ಮಿಕರು ಇಂತಹ ಕೃತ್ಯ ಮಾಡುತ್ತಿರುವುದರಿಂದ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ. ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಹೊರ ರಾಜ್ಯದಿಂದ ಜಿಲ್ಲೆಗೆ ಬರುವ ಕಾರ್ಮಿಕರ ಮೇಲೆ ತೀವ್ರವಾದ ನಿಗಾ ಇಡುವುದ ಜತೆಗೆ ಅವರ ಮಾಹಿತಿ ಸಂಗ್ರಹಿಸಬೇಕು ಎಂದು ಒತ್ತಾಯಿಸಿದರು.
ಆರೋಪಿಗಳ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಾಗಿದೆ. ಆದರೆ ಇಂತಹವರ ವಿರುದ್ಧ ಕೂಡಲೇ ಕ್ರಮವಹಿಸಬೇಕು. ಇವರಿಗೆ ಜೀವಿಸುವ ಯಾವುದೇ ಅಧಿಕಾರ ಇಲ್ಲ. ಇಂತಹವರನ್ನು ಗುಂಡಿಕ್ಕಿ ಸಾಯಿಸಬೇಕು. ಇಂತಹ ಪ್ರಕರಣಗಳು ಮತ್ತೆ ನಡೆಯಬಾರದು. ಹೈದರಾಬಾದ್‌ನಲ್ಲಿ ಡಾ. ದೀಶಾ ಅವರ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ ಹಾಗೇ ಇಲ್ಲಿ ಕೂಡ ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು. ವಕೀಲರು ಕೂಡ ಇಂತಹ ಕೃತ್ಯದ ಆರೋಪಿಗಳ ಪರ ವಾದ ಮಂಡಿಸಬಾರದು, ಎಲ್ಲರೂ ಕೂಡ ಈ ಕೃತ್ಯದ ವಿರುದ್ಧ ಹೋರಾಟ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಡಳಿತ ಜವಾಬ್ದಾರಿ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಹಲವಾರು ಸಂಘಟನೆಗಳ ಇವೆ, ಮಹಿಳೆಯರ ರಕ್ಷಣೆಗೆ ಇದ್ದೆವೆ ಎಂದು ಹೇಳಿ, ಮಹಿಳೆಯರನ್ನು ಹಿಡಿದು ಹಲ್ಲೆ ಮಾಡಿರುವ ಪ್ರಕರಣಗಳು ನಡೆಯುತ್ತವೆ. ದಕ್ಷಿಣ ಜಿಲ್ಲೆಯಲ್ಲಿ ಒಂದೇ ಧರ್ಮೀಯರಿಂದ ಕೊಲೆ, ಅತ್ಯಾಚಾರದಂತಹ ಘಟನೆ ನಡೆದರೆ ಯಾರೂ ಕೂಡ ಮುಂದೆ ಬಂದು ಪ್ರತಿಭಟಿಸಲ್ಲ. ಅನ್ಯ ಧರ್ಮೀಯರಿಂದ ಅತ್ಯಾಚಾರ, ಕೊಲೆ ನಡೆದರೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾರೆ, ಇದೊಂದು ರಾಜಕೀಯ ತಂತ್ರದ ಭಾಗ ಎಂದು ಆರೋಪಿಸಿದರು.
ದೇಶದ ಕಾನೂನು ಮಹಿಳೆಯರ ಪರವಾಗಿ ಇಲ್ಲ. ಅತ್ಯಾಚಾರ ಆರೋಪಿಗಳಿಗೆ ಕಠಿಣವಾದ ಶಿಕ್ಷೆ ನೀಡಬೇಕು. ಅತ್ಯಾಚಾರದಲ್ಲಿ ಮೃತಪಟ್ಟ ಮಗುವಿಗೆ ನ್ಯಾಯ ಕೊಡಿ ಎಂದು ಕೇಳುವ ಬದಲು ಇರುವಂತ ಮಹಿಳೆಯರ ಹಾಗೂ ಮಕ್ಕಳ ಪರ ನ್ಯಾಯ ಕೊಡಿ ಎಂದು ನಾವೆಲ್ಲರೂ ಕೇಳುವ ಸಮಯ ಬಂದಿದೆ. ಎಲ್ಲ ಸಂಘಟನೆಗಳು ಸೇರಿಕೊಂಡು ಈ ಕೃತ್ಯವನ್ನು ಖಂಡಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.
Discussion about this post