ಮಂಗಳೂರು, ನ.25: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳವಾಗಿದ್ದ ವಸ್ತುಗಳು, ಮನೆಗಳ್ಳತನ, ಸರಗಳ್ಳತನ, ದರೋಡೆಗೆ ಒಳಗಾಗಿದ್ದ ಚಿನ್ನಾಭರಣ, ದ್ವಿಚಕ್ರ ವಾಹನ, ಕಾರು, ಮೊಬೈಲ್ ಫೋನ್ ಇನ್ನಿತರ ಬೆಲೆಬಾಳುವ ವಸ್ತು ಸೇರಿದಂತೆ ಒಟ್ಟು 2.90 ಕೋಟಿ ಮೌಲ್ಯದ ಸಾಮಗ್ರಿಗಳನ್ನು ಪೊಲೀಸರು ವಾರೀಸುದಾರರಿಗೆ ನ್ಯಾಯಾಲಯದ ಅನುಮತಿ ಪಡೆದು ಮಾಲೀಕರಿಗೆ ಗುರುವಾರ ಹಸ್ತಾಂತರ ಮಾಡಲಾಯಿತು.
ಒಂದು ವರ್ಷದಲ್ಲಿ ಮಂಗಳೂರು ವ್ಯಾಪ್ತಿಯ 12 ಠಾಣೆಗಳಲ್ಲಿ 105 ದ್ವಿಚಕ್ರ ವಾಹನಗಳು, 20 ನಾಲ್ಕು ಚಕ್ರದ ವಾಹನಗಳು, ಒಂದು ಲಾರಿ, 135 ಮೊಬೈಲ್ ಫೋನ್, 20.490 ಕೆ.ಜಿ ಬೆಳ್ಳಿ ಆಭರಣ ಇನ್ನಿತರ ವಸ್ತುಗಳು, 3 ಕೆ.ಜಿ 598 ಗ್ರಾಮ್ ಚಿನ್ನಾಭರಣ, 38,67,791 ರೂಪಾಯಿ ನಗದು ವಶಕ್ಕೆ ಪಡೆದಿದ್ದು, ಸದ್ರಿ ಪ್ರಕರಣಗಳಲ್ಲಿ ಭಾಗಿಯಾದ 726 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮುಖ್ಯ ಅತಿಥಿಯಾಗಿದ್ದರು. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಬಿ.ಪಿ.ದಿನೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡ ನೂರಾರು ಮಂದಿ ಆಗಮಿಸಿ ತಮ್ಮ ವಸ್ತುಗಳನ್ನು ಪಡೆದುಕೊಂಡು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post