ಮಂಗಳೂರು: ಮಂಗಳೂರಿನ ಆಯುಷ್ಮಾನ್ ನೋಡಲ್ ಅಧಿಕಾರಿಯೊಬ್ಬರು ಮಹಿಳಾ ಸಿಬ್ಬಂದಿಗಳೊಂದಿಗೆ ಚೆಲ್ಲಾಟವಾಡುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ದ.ಕ ಜಿಲ್ಲೆಯ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ, ಆಯುಷ್ಮಾನ್ ನೋಡಲ್ ಆಫೀಸರ್, ಕಚೇರಿ ಮಹಿಳಾ ಸಿಬ್ಬಂದಿ ಜತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವರದಿ ಆಗಿದೆ. ಚೆಲ್ಲಾಟವಾಡುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ.
ಇತರ ಸಿಬ್ಬಂದಿಗಳ ಸಮ್ಮುಖದಲ್ಲಿ ಮಹಿಳಾ ಸಿಬ್ಬಂದಿ ಜತೆಗೆ ಈ ಅಧಿಕಾರಿ ಅಸಭ್ಯ ವರ್ತನೆ ಮಾಡಿದ್ದಾರೆ. ಹಾಡಹಗಲೇ ಕಚೇರಿಯಲ್ಲಿ ಚೆಲ್ಲಾಟವಾಡುತ್ತಿರುವ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ.
ಮಹಿಳಾ ಸಿಬ್ಬಂದಿಗಳ ಜತೆಗೆ ಚೆಲ್ಲಾಟವಾಡುತ್ತಿದ್ದ ಡಾ.ರತ್ನಾಕರ್ ಸಹಕರಿಸದ ಮಹಿಳಾ ಸಿಬ್ಬಂದಿಗಳಿಗೆ ಟಾರ್ಚರ್ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ನಗರದ ಸರಕಾರಿ ಆಸ್ಪತ್ರೆಯ ಕುಷ್ಠ ರೋಗ ವಿಭಾಗದ ವೈದ್ಯ, ಆಯುಷ್ಮಾನ್ ನೋಡೆಲ್ ಆಫೀಸರ್ ಕೂಡ ಆಗಿರುವ ಡಾ. ರತ್ನಾಕರ್ʼನ ವೈವಿಧ್ಯಮಯ ಕಾಮ ಪ್ರಪಂಚ ನ .26 ರಂದು ಟಿವಿ ವಾಹಿನಿಗಳಲ್ಲಿ ಸುರುಳಿ ಸುರುಳಿಯಾಗಿ ಬಿಚ್ಚಿಕೊಂಡಿದೆ. ತಾನೂ ಉದ್ಯೋಗ ಮಾಡುತ್ತಿರುವ ಜಾಗದಲ್ಲಿ ತನ್ನ ಸಹದ್ಯೋಗಿಯಾಗಿರುವ 13 ಜನ ಯುವತಿಯರ ಪೈಕಿ 9 ಜನರ ಜತೆ ಈತ ಖುಲ್ಲಾಂ ಖುಲ್ಲಾ ಆಗಿ ಸರಸ ಸಲ್ಲಾಪ ನಡೆಸಿದ್ದಾನೆ ಎನ್ನುವದನ್ನು ಪುಷ್ಟಿಕರಿಸುವ ವಿಡಿಯೋ ಹಾಗೂ ಪೋಟೋಗಳಿಂದ ಬಹುತೇಕರ ಮೊಬೈಲ್ ತುಂಬಿಕೊಂಡಿದೆ.
ಈ ವಿಚಾರದ ಬಗ್ಗೆ ವೆನ್‌ಲಾಕ್ ಆಸ್ಪತ್ರೆ ಅಧೀಕ್ಷಕರು ಪ್ರಕಟನೆ ಹೊರಡಿಸಿದ್ದು ಅದು ಇಂತಿದೆ :
“ ಇಂದು ಟಿವಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಡಾ. ರತ್ನಾಕರ್, ಜಿಲ್ಲಾ ಕಾರ್ಯಕ್ರಮಾಧಿಕಾರಿ ಇವರ ಕುರಿತು ವರದಿಗಳು ಪ್ರಚಾರವಾಗುತ್ತಿದ್ದು, ಸದ್ರಿ ಅಧಿಕಾರಿ ಹಾಗೂ ಮಹಿಳಾ ಸಿಬ್ಬಂದಿಗಳು, ವೆನ್‌ಲಾಕ್ ಆಸ್ಪತ್ರೆಯ ಸಿಬ್ಬಂದಿಗಳೆಂದು ವರದಿಯಾಗುತ್ತಿದೆ.
ಸದ್ರಿ ಅಧಿಕಾರಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಅಡಿಯಲ್ಲಿ ಕಾರ್ಯನಿರ್ವಹಿಸುವ ಓರ್ವ ಜಿಲ್ಲಾ ಕಾರ್ಯಕ್ರಮಾಧಿಕಾರಿಯಾಗಿದ್ದು, ಹಾಗೂ ಸದ್ರಿ ವರದಿಯಲ್ಲಿ ಹೇಳುತ್ತಿರುವ ಮಹಿಳಾ ಸಿಬ್ಬಂದಿಗಳು ಸದ್ರಿ ಅಧಿಕಾರಿಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಾಗಿರುತ್ತಾರೆ.
ಸದ್ರಿ ಅಧಿಕಾರಿ ಮತ್ತು ಸಿಬ್ಬಂದಿಗಳು ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಅಧಿಕಾರಿ ಸಿಬ್ಬಂದಿಗಳಲ್ಲ. ಸದ್ರಿ ಅಧಿಕಾರಿ ಹಾಗೂ ಮಹಿಳಾ ಸಿಬ್ಬಂದಿಗಳಲ್ಲ. ಸದ್ರಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಅಧೀನದ ಸಿಬ್ಬಂದಿಗಳಾಗಿದ್ದು, ದೃಶ್ಯ ಮಾಧ್ಯಮಗಳಲ್ಲಿ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಮಹಿಳಾ ಸಿಬ್ಬಂದಿಗಳೆಂದು ತಪ್ಪು ಮಾಹಿತಿ ಪ್ರಚಾರವಾಗುತ್ತಿದ್ದು, ವರದಿಯನ್ನು ಸರಿಪಡಿಸುವಂತೆ ಮಾಧ್ಯಮಗಳಿಗೆ ಸೂಚಿಸುವಂತೆ ಕೋರಲಾಗಿದೆ. ಅಲ್ಲದೆ ಈ ಬಗ್ಗೆ ಸೃಷ್ಟಿಕರಣವನ್ನು ಕೂಡ ಮಾಧ್ಯಮಗಳು ನೀಡುವಂತೆ ಕೋರಲಾಗಿದೆ ಎಂದು ವೆನ್‌ಲಾಕ್ ಆಸ್ಪತ್ರೆ ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post