ಮಂಗಳೂರು, ಮಾ. 26: ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಿಂದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದಿಂದ ಕಾಂತಪ್ಪ ಅಲಂಗಾರ್ ಅವರು ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಗೋಪಾಲ ಮುತ್ತೂರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿದ ಅವರು, ಎನ್‌ಎಂಪಿಟಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿರುವ ಕಾಂತಪ್ಪ ಅಲಂಗಾರ್ 2020ರಲ್ಲಿ ನಿವೃತ್ತರಾಗಿದ್ದು, ಜಿಲ್ಲೆಯಲ್ಲಿ ಅಂಬೇಡ್ಕರ್‌ವಾದಿ ಚಳವಳಿಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು. ಪಕ್ಷವು ರಾಜ್ಯದಲ್ಲಿ 25 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಬಿಜೆಪಿ ಹಾಗೂ ಇತರ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಚುನಾವಣಾ ಬಾಂಡಿನ ಹೆಸರಿನಲ್ಲಿ ಉದ್ಯಮಿಗಳಿಂದ ಹಣ ಪಡೆದು ಅವರ ಪರವಾಗಿದ್ದಾರೆ. ಆದರೆ ಬಿಎಸ್‌ಪಿ ಯಾವುದೇ ಉದ್ಯಮಿಗಳಿಂದ ಹಣ ಪಡೆದಿಲ್ಲ ಎಂದರು.
ಈ ಹಿನ್ನೆಲೆಯಲ್ಲಿ ಎಲ್ಲಾ ಜಾತಿಧರ್ಮಗಳ ಒಳಗೊಳ್ಳುವಿಕೆಯ ‘ತುಳುನಾಡನ್ನು” ನಿರ್ಮಿಸುವಲ್ಲಿ ಒಂದು ಒತ್ತನ್ನು / ಬೆಂಬಲವನ್ನು ನೀಡುವರೇ ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿಯಾಗಿ ಸಾಮಾಜಿಕ ಪರಿವರ್ತನೆ ಹಾಗೂ ಆರ್ಥಿಕ ಸಮಾನತೆಗಾಗಿ ಸಂವಿಧಾನದ ಆಶಯದಂತೆ ಶ್ರಮಿಸುವುದು. ಈ ದ್ಯೇಯೋದ್ದೇಶಗಳು ಹಾಗೂ ಸಂವಿಧಾನವನ್ನು ಜಾರಿಗೊಳಿಸುವುದು ಬಿ.ಎಸ್.ಪಿ.ಯ ಗುರಿ ಹಾಗೂ ಪ್ರನಾಳಿಕೆ ಆಗಿದೆ ಇದುವರೆಗೆ ದೇಶ, ರಾಜ್ಯವನ್ನು ಆಳಿಕೊಂಡು ಬಂದ ಕಾಂಗ್ರೆಸ್, ಬಿಜೆಪಿ ಪಕ್ಷಗಳ ದುರಾಡಳಿತ ಹಾಗೂ ಜನವಿರೋಧಿ ನೀತಿಗಳಿಂದ ಜನ ಬೇಸತ್ತು ಹೋಗಿದ್ದಾರೆ.
ಸಂವಿಧಾನದ ಮೂಲಕ ಸಂಸದರಾಗಿ ಆಯ್ಕೆಯಾದವರೇ ಸಂವಿಧಾನ ಬದಲಾಯಿಸುವ ಮಾತನಾಡುತ್ತಿರುವುದು ದೇಶ ದ್ರೋಹವಾಗಿದ್ದು, ಈ ಬಗ್ಗೆ ರಾಜ್ಯ ಸರಕಾರವೂ ಯಾವುದೇ ದಿಟ್ಟ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಇದಕ್ಕಿಂತಲೂ ಅಪಾಯಕಾರಿ ಸ್ಥಿತಿ ಎಂದರೆ, ಬಿಜೆಪಿ ಹಾಗೂ ಅದರ ಸರಕಾರವನ್ನು ವಿರೋಧಿಸುವ ಯಾರೇ ಆಗಲಿ ಅವರ ಮೇಲೆ ಈಡಿ, ಐಟಿ ಹಾಗೂ ಸಿಬಿಐ ಇಲಾಖೆಗಳಿಂದ ದಾಳಿ ನಡೆಸಿ ರಾಜಕೀಯವಾಗಿ ಬೆದರಿಸುವ ಹಾಗೂ ಒತ್ತಡ ಹೇರುವ ಕಾರ್ಯಗಳು ನಡೆಯುತ್ತಿದೆ. ಬಿಜೆಪಿಯ ಈ ನಡವಳಿಕೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ದ.ಕ. ಲೋಕಸಭಾ ಕ್ಷೇತ್ರದಿಂದ ಕಾಂತಪ್ಪ ಅಲಂಗಾರ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅದ್ದರಿದ ನಿಮ್ಮ ಅಮೂಲ್ಯ ಮತವನ್ನು ಬಿಎಸ್‌ಪಿ.ಯ ಆನೆ ಚಿಹ್ನೆಗೆ ನೀಡಿ ಬೆಂಬಲಿಸಿ ಆಶೀರ್ವದಿಸಬೇಕೆಂದು ತುಳು ನಾಡಿನ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲೆ ನಂಬಿಕೆ ಇರುವ ನಾಗರಿಕ ಮತದಾರರಲ್ಲಿ ಈ ಮೂಲಕ ಮನವಿ ಮಾಡುತ್ತಿದ್ದೇವೆ.
ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಪಿಯ ಮುಖಂಡರಾದ ನಾರಾಯಣ ಬೋಧ್, ದೇವಪ್ಪ ಬೋಧ್, ಶಿವಪ್ಪ ಗಾರ್ಡಾಡಿ, ಕಿರಣ್ ಎಡಪದವು, ಪಿ.ಎಸ್. ಶ್ರೀನಿವಾಸ್, ಶಶಿಕಲಾ, ಕಿರಣ್, ಶಿವರಾಮ್ ಪೇಜಾವರ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post