ಮಂಗಳೂರು: ಪ್ರವಾಸೋದ್ಯಮ ದಿನದ ಮುನ್ನಾ ದಿನವೇ ಮಂಗಳೂರಿಗೆ ಪೂನಾದಿಂದ ಖಾಸಗಿ ವಿಮಾನದಲ್ಲಿ ಪ್ರವಾಸಿಗರು ಆಗಮಿಸಿದ್ದು, ಪ್ರವಾಸೋದ್ಯಮ ಚೇತರಿಕೆ ಸೂಚನೆ ಸಿಕ್ಕಿದಂತಾಗಿದೆ.
ಕೋವಿಡ್‌ನಿಂದ ನಲುಗಿ ಹೋಗಿರುವ ಕರಾವಳಿಯ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳುವತ್ತ ದಾಪುಗಾಲಿರಿಸಿದೆ. ಪೂನಾದಿಂದ ತಮ್ಮ ಖಾಸಗಿ ವಿಮಾನದಲ್ಲಿ ಆಗಮಿಸಿದ 13 ಮಂದಿಯನ್ನು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಇವರು ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಕಟೀಲು, ಬಪ್ಪನಾಡು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ನೋಡಿಕೊಂಡು ಸೋಮವಾರ ಮಡಿಕೇರಿಯತ್ತ ತೆರಳಲಿದ್ದಾರೆ.