ಮಂಗಳೂರು: ನಗರದ ಕೂಳೂರಿನಲ್ಲಿ ರಾ.ಹೆದ್ದಾರಿ 66ರಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ 69 ವರ್ಷಗಳ ಹಳೆಯ ಕಮಾನು ಸೇತುವೆಯ ಪಕ್ಕದಲ್ಲಿ ಆರು ಪಥಗಳ ಮಂಗಳೂರಿನ ಮೊದಲ ಅತ್ಯಂತ ಅಗಲದ ಸೇತುವೆ ನಿರ್ಮಾಣ ಕಾಮಗಾರಿ ಇದೀಗ ಚುರುಕು ಪಡೆದುಕೊಂಡಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಮೂಲಕ 69.02 ಕೋ.ರೂ. ವೆಚ್ಚದಲ್ಲಿ 182.50 ಮೀ. ಉದ್ದದ ಸೇತುವೆ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪುಣೆ ಮೂಲದ ಗುತ್ತಿಗೆದಾರ ಸಂಸ್ಥೆ ಕಾಮಗಾರಿ ನಡೆಸುತ್ತಿದ್ದು, ಫೈಲ್ ಫೌಂಡೇಶನ್ ಮಾದರಿಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಸದ್ಯ ಇರುವ ಎರಡು ಏಕಮುಖ ಸೇತುವೆಯ ಮಧ್ಯೆ ಹೊಸದಾಗಿ 6 ಲೇನ್‌ನಲ್ಲಿ ಸೇತುವೆ ನಿರ್ಮಾಣ ಈಗಾಗಲೇ ಶೇ.20ರಷ್ಟು ಮುಕ್ತಾಯವಾಗಿದೆ. ಕಳೆದ ವರ್ಷ ಡಿ. 19ರಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಈ ಯೋಜನೆಗೆ ಶಿಲಾನ್ಯಾಸ ನಡೆಸಿದ್ದರು. 18 ತಿಂಗಳುಗಳೊಳಗೆ ಕಾಮಗಾರಿ ಪೂರ್ಣವಾಗಲಿದೆ.
Discussion about this post