ಮಂಗಳೂರು: ಕಳೆದ 25 ದಿನಗಳ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ 5.3 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಕಳೆದ ವಾರವೊಂದರಲ್ಲೇ ಸುಮಾರು 73,000 ಡೋಸ್ಗಳು ವಿತರಿಸಲಾಗಿದೆ. ಇದೇ ವೇಗದಲ್ಲಿ ಲಸಿಕೆ ವಿತರಣೆ ಸಾಗಿದರೇ, ಇನ್ನೂ ಎರಡು ಅಥಾವ ಮೂರು ವಾರದ ಅವಧಿಯಲ್ಲಿ ಜಿಲ್ಲೆಯ ಎಲ್ಲ ಅರ್ಹ ನಾಗರೀಕರಿಗೆ ಪ್ರಥಮ ಡೋಸ್ ಲಸಿಕೆ ನೀಡುವ ವಿಶ್ವಾಸದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿದೆ.
ಭಾರತ ಸರಕಾರ ರೂಪಿಸಿರುವ ನಿಯಾಮವಳಿಯಂತೆ ಒಟ್ಟು 18 ಲಕ್ಷ ಲಸಿಕೆ ಪಡೆಯಲು ಅರ್ಹ ನಾಗರೀಕರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದಾರೆ. ಆ ಪೈಕಿ ಈಗಾಗಲೇ 15 ಲಕ್ಷಕ್ಕೂ ಆಧಿಕ ಮಂದಿಗೆ ಅಂದರೇ ಶೇ 84 ಮಂದಿಗೆ ಜಿಲ್ಲೆಯಲ್ಲಿ ಮೊದಲ ಡೋಸ್ ಲಸಿಕೆ ಯಶಸ್ವಿಯಾಗಿ ನೀಡಲಾಗಿದೆ. ಇವರಲ್ಲಿ 6.3 ಲಕ್ಷ ( ಶೇ 33) ಎರಡೂ ಡೋಸ್ ಲಸಿಕೆ ಪಡೆದವರಾಗಿದ್ದಾರೆ, ಇದೀಗ 100% ಮೊದಲ ಡೋಸ್ ಲಸಿಕೆ ವಿತರಿಸಿದ ಜಿಲ್ಲೆಯಾಗುವತ್ತ ದ.ಕ. ಜಿಲ್ಲೆ ಹೆಜ್ಜೆ ಹಾಕುತ್ತಿದೆ.
Discussion about this post