ನವದೆಹಲಿ: ಪುರಿ ಜಗನ್ನಾಥ ನಿರ್ದೇಶನ, ವಿಜಯ್ ದೇವರಕೊಂಡ ಅಭಿನಯದ ಬಾಲಿವುಡ್ನ ಬಹುನಿರೀಕ್ಷಿತ “ಲೈಗರ್’ ಪಾನ್ ಇಂಡಿಯಾ ಸಿನಿಮಾದಲ್ಲಿ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಸಹ ಬಿಗ್ಸ್ಟೀನ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ನಿರ್ಮಾಪಕ ಕರಣ್ ಜೋಹರ್, ‘ ಇದೇ ಮೊದಲ ಬಾರಿಗೆ ಬಾಕಿಂಗ್ ದಂತಕಥೆ ಟೈಸನ್ ಭಾರತೀಯ ಚಿತ್ರರಂಗದ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ’ ಎಂದಿದ್ದಾರೆ.
1987ರಿಂದ 1990ರವರೆಗೆ ಟೈಸನ್ ವಿಶ್ವ ಹೆವಿವೇಟ್ ಚಾಂಪಿಯನ್ ಆಗಿದ್ದರು. ತಮ್ಮ ಹೆಸರಲ್ಲಿ ಹಲವು ದಾಖಲೆಗಳನ್ನು ಹೊಂದಿದ್ದಾರೆ. ವಿವಾದಗಳಿಂದಲೂ ಸುದ್ದಿಯಾಗಿದ್ದರು.
Discussion about this post