ಮಂಗಳೂರಿನ ನಂತೂರು – ಪಂಪ್ ವೆಲ್ ಬಳಿ ಸೆ 28 ರಂದು ನಡೆದ ಅಪಘಾತದಲ್ಲಿ ನಗರದ ಖಾಸಗಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ವಿದ್ಯಾರ್ಥಿ ಚಲಾಯಿಸುತ್ತಿದ್ದ ಬೈಕಿಗೆ ವಾಹನವೂಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಸಂಚಾರ ಠಾಣೆಯಲ್ಲಿ ಹಿಟ್-ಅಂಡ್-ರನ್ ಪ್ರಕರಣ ದಾಖಲಾಗಿದೆ
ಮೃತ ವಿದ್ಯಾರ್ಥಿಯನ್ನು ಮಹಾರಾಷ್ಟ್ರದ ಪುಣೆ ಮೂಲದ ಮಾನಸ್ ಉಗಾಲೆ (27) ಎಂದು ಗುರುತಿಸಲಾಗಿದೆ. ಈತನೂ ಪಲ್ಸರ್ ಬೈಕಿನಲ್ಲಿ ನಂತೂರು ಮೂಲಕ ಪಂಪ್ ವೆಲ್ ನತ್ತ ಚಲಿಸುತ್ತಿದ್ದಾಗ ಹಿಂದಿನಿಂದ ಬಂದ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆ
ಇದನ್ನು ನೋಡಿದ ಇತರೆ ವಾಹನದವರು ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕದ್ರಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈ ಗೆತ್ತಿ ಕೊಂಡಿದ್ದಾರೆ. ಡಿಕ್ಕಿ ಹೊಡೆದು ಪರಾರಿಯಾದ ವಾಹನದ ಶೋಧ ಕಾರ್ಯ ಮುಂದುವರಿದಿದೆ.