• About us
  • Contact us
  • Disclaimer
Friday, March 13, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

9 ತಿಂಗಳ ಮೊಮ್ಮಗನನ್ನ ಉಸಿರು ಗಟ್ಟಿಸಿ ಕೊಲೆ ಮಾಡಿದ್ಲಾ ಅಜ್ಜಿ?, ಪೋಲೀಸರ ಮೊರೆ ಹೋದ ಸೊಸೆ, ಮೃತದೇಹ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆ !

Coastal Times by Coastal Times
November 26, 2023
in ಕ್ರೈಮ್ ನ್ಯೂಸ್
9 ತಿಂಗಳ ಮೊಮ್ಮಗನನ್ನ ಉಸಿರು ಗಟ್ಟಿಸಿ ಕೊಲೆ ಮಾಡಿದ್ಲಾ ಅಜ್ಜಿ?, ಪೋಲೀಸರ ಮೊರೆ ಹೋದ ಸೊಸೆ, ಮೃತದೇಹ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆ !
61
VIEWS
WhatsappTelegramShare on FacebookShare on Twitter

ಗದಗ, ನ.25: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ಒಂಬತ್ತು ತಿಂಗಳ ಹಸುಗೂಸನ್ನು ಎತ್ತಿ ಮುದ್ದಾಡಿ ಆಟವಾಡಿಸಬೇಕಿದ್ದ ಅಜ್ಜಿಯೇ ಕೊಲೆ ಮಾಡಿದ ಘಟನೆ ನಡೆದಿದೆ. ಗಜೇಂದ್ರಗಡ ತಾಲೂಕಿನ ನಾಗರತ್ನ ಹಾಗೂ ಲಕ್ಷ್ಮಣ ಎಂಬುವವರ ಜೊತೆಗೆ ಕಳೆದ ಎರಡು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಲಕ್ಷ್ಮಣ ಕುಡಿತಕ್ಕೆ ದಾಸನಾಗಿದ್ದ. ಆದರೂ ನಾಗರತ್ನ ಕಷ್ಟ-ಸುಖ ಎಂದು ಗಂಡನ ಮನೆಯಲ್ಲಿಯೇ ಜೀವನ ನಡೆಸುತ್ತಿದ್ದಳು. ಆದರೆ, ಅತ್ತೆ ಸರೋಜಾ ಎಂಬುವವರು ನಿತ್ಯ ಕಿರುಕುಳ ನೀಡುತ್ತಿದ್ದರಂತೆ. ಯಾವಾಗ ನಾಗರತ್ನ ಗರ್ಭಿಣಿಯಾದಳೋ ಆಗಿನಿಂದ ಅತ್ತೆಯ ಕಿರುಕುಳ ಹೆಚ್ಚಾಗಿದೆಯಂತೆ. ಮಗು ಹೊಟ್ಟೆಯಲ್ಲಿ ಇದ್ದಾಗಲೇ ತೆಗೆದು ಹಾಕುವಂತೆ ಒತ್ತಾಯ ಕೂಡ ಮಾಡಿದ್ದಳಂತೆ. ಅತ್ತೆಯ ಮಾತು ಕೇಳದೆ ತನ್ನ ಕರುಳಿನ ಕುಡಿಯನ್ನು ಉಳಿಸಿಕೊಂಡಿದ್ದರು.

ಅತ್ತೆಯೇ ಕೊಲೆ ಮಾಡಿದ್ದಾಳೆ ಎಂದು ಸೊಸೆಯಿಂದ ಠಾಣೆಗೆ ದೂರು : ಹೆರಿಗೆಗೆ ತವರು ಮನೆಗೆ ಬಂದ ನಾಗರತ್ನಾಳನ್ನು ಕೇವಲ 5 ತಿಂಗಳಿಗೆ ಗಂಡನ ಮನೆ ಕರೆಸಿಕೊಂಡಿದ್ರು. ಇನ್ನು ಮನೆಗೆ ಮುದ್ದಾದ ಗಂಡು ಮಗು ಬಂದರೂ ಅತ್ತೆಯ ಮನಸ್ಸು ಮಾತ್ರ ಕರಗಿಲ್ಲವಂತೆ. ಆಗಲೂ ನಿತ್ಯ ಕಿರುಕುಳ ನೀಡುತ್ತಿದ್ದರಂತೆ. ಅಷ್ಟೇ ಅಲ್ಲ, ಒಂಬತ್ತು ತಿಂಗಳ ಕೂಸನ್ನು ಮನೆಯಲ್ಲಿ ಬಿಟ್ಟು ನಾಗರತ್ನಳನ್ನು ಜಮೀನನ ಕೆಲಸಕ್ಕೆ ಕಳಿಸುತ್ತಿದ್ದರಂತೆ. ಅದರಂತೆ ನವೆಂಬರ್ 22 ರಂದು ಕೂಸಿಗೆ ಊಟ ಮಾಡಿಸಿ, ಜಮೀನಿನ ಕೆಲಸಕ್ಕೆ ಹೋಗಿದ್ದಳು. ಆದ್ರೆ, ತಾಯಿ ಜಮೀನಿಗೆ ಹೋಗಿ ಮನೆ ವಾಪಾಸ್​ ಬರುವಷ್ಟರಲ್ಲಿ ಮಗು ಸಾವನ್ನಪ್ಪಿದೆ‌ ಎಂದು ಗಂಡನ ಮನೆಯವರು ಹೇಳಿದ್ದಾರೆ. ಹಸುಗೂಸಿಗೆ ಅಡಿಕೆ ಹಾಗೂ ಎಲೆಯ ತುಂಬನ್ನು ಹಾಕಿ ಉಸಿರುಗಟ್ಟಿಸಿ ಅತ್ತೆ ಸರೋಜ ಕೊಲೆ ಮಾಡಿದ್ದಾಳೆ ಎಂದು ಸೊಸೆ ನಾಗರತ್ನ ದೂರು ದಾಖಲು ಮಾಡಿದ್ದಾಳೆ.

ಆಸ್ತಿ ಗಂಡು ಮಗುವಿಗೆ ಹೋಗುತ್ತೆ ಎಂದು ಕೊಲೆ ಮಾಡಿದಳಾ ಅಜ್ಜಿ?: ಇನ್ನು ಪುರ್ತಗೇರಿ ಗ್ರಾಮದಲ್ಲಿ ನೀರಾವರಿ ಜಮೀನು ಇದೆ. ನಾಗರತ್ನ ಗಂಡ ಮೊದಲೇ ಕುಡುಕ. ಎಲ್ಲಾ ಆಸ್ತಿ ಎಲ್ಲಿ ಗಂಡು ಮಗುವಿಗೆ ಹೋಗುತ್ತೇ ಎನ್ನುವ ಕಾರಣಕ್ಕೆ ಅತ್ತೆ ಸರೋಜ ಕೊಲೆ ಮಾಡಿದ್ದಾಳೆ ಎಂದು ಸೊಸೆ ನಾಗರತ್ನ ಆರೋಪಿಸಿದ್ದಾಳೆ. ಅಂದು ಗಡಿಬಿಡಿಯಾಗಿ ಮಗುವಿನ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಆರೋಗ್ಯವಾಗಿದ್ದ ಮಗು ದಿಢೀರ್ ಸಾವು ಯಾಕೇ ಆಯ್ತು ಎಂದು ತಾಯಿ ನಾಗರತ್ನ ಅವರಿಗೆ ಅತ್ತೆಯ ಮೇಲೆ ಅನುಮಾನ ಬಂದ ಬಳಿಕ ನವೆಂಬರ್ 23ರಂದು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ನಾಗರತ್ನ ಅತ್ತೆ ಸರೋಜಾಳ ವಿರುದ್ಧ ದೂರು ದಾಖಲು ಮಾಡಿದ್ದರು.

ದೂರು ದಾಖಲು ಆಗುತ್ತಿದ್ದಂತೆ ಅಲರ್ಟ್ ಆದ ಗಜೇಂದ್ರಗಡ ಪೊಲೀಸರು, ಗದಗ ಎಸಿ ವೆಂಕಟೇಶ ನಾಯಕ, ಸಿಪಿಐ ಎಸ್ ಎಸ್ ಬಿಳಗಿ, ಪಿಎಸ್ಐ ಸೋಮನಗೌಡ ನೇತೃತ್ವದಲ್ಲಿ, ಹೊತ್ತಿದ್ದ ನವಜಾತ ಶಿಶುವಿನ ಶವವನ್ನು ಹೊರಗಡೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಇನ್ನೂ ಒಂಬತ್ತು ತಿಂಗಳ ಅದ್ವಿಕ್ ಎನ್ನುವ ಹೆತ್ತ ಮಗುವನ್ನು ಕಳೆದುಕೊಂಡು ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಇತ್ತ ಸಾಲ ಸೂಲ ಮಾಡಿ ಮದುವೆ ಮಾಡಿದ್ವಿ. ಆದ್ರೆ, ಸರೋಜ ನಮ್ಮ ಮಗಳಿಗೆ ಸಾಕಷ್ಟು ಕಿರುಕುಳ ನೀಡುತ್ತಾರೆ. ಇವಾಗ ಮುದ್ದಾದ ಮೊಮ್ಮಗನನ್ನು ಕೊಲೆ ಮಾಡಿದ್ದಾರೆ ಎಂದು ಕಣ್ಣೀರು ನಾಗರತ್ನ ಅವರ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಪೊಲೀಸ್ ತನಿಖೆಯಿಂದಲೇ ಮಗುವಿನ ಸಾವಿನ ರಹಸ್ಯ ಗೋತ್ತಾಗಲಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು : 1.57 ಕೋಟಿ ರೂ.ಮೌಲ್ಯದ ಅಂಬರ್ ಗ್ರೀಸ್‌ ಸಹಿತ ಮೂವರ ಬಂಧನ

Next Post

ಪುತ್ತೂರು ; ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬಹುಮಾನ ಸಿಗದ್ದಕ್ಕೆ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ !

Related Posts

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ
ಕ್ರೈಮ್ ನ್ಯೂಸ್

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

March 13, 2026
79
ವಿಟ್ಲ: ಬಾಡಿಗೆ ಮನೆಯೊಂದರಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 4 ಮಂದಿ ಆರೋಪಿಯ ಬಂಧನ
ಕ್ರೈಮ್ ನ್ಯೂಸ್

ವಿಟ್ಲ: ಬಾಡಿಗೆ ಮನೆಯೊಂದರಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 4 ಮಂದಿ ಆರೋಪಿಯ ಬಂಧನ

March 12, 2026
31
Next Post
ಪುತ್ತೂರು ; ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬಹುಮಾನ ಸಿಗದ್ದಕ್ಕೆ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ !

ಪುತ್ತೂರು ; ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬಹುಮಾನ ಸಿಗದ್ದಕ್ಕೆ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ !

Discussion about this post

Recent News

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

March 13, 2026
79
ಊಟಕ್ಕೆ ಬಸ್ ನಿಲ್ಲಿಸಿದ್ದೇ ತಡ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ 90 ಲಕ್ಷ ಮೌಲ್ಯದ ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ

ಊಟಕ್ಕೆ ಬಸ್ ನಿಲ್ಲಿಸಿದ್ದೇ ತಡ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ 90 ಲಕ್ಷ ಮೌಲ್ಯದ ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ

March 12, 2026
69
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

March 13, 2026
ಊಟಕ್ಕೆ ಬಸ್ ನಿಲ್ಲಿಸಿದ್ದೇ ತಡ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ 90 ಲಕ್ಷ ಮೌಲ್ಯದ ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ

ಊಟಕ್ಕೆ ಬಸ್ ನಿಲ್ಲಿಸಿದ್ದೇ ತಡ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ 90 ಲಕ್ಷ ಮೌಲ್ಯದ ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ

March 12, 2026
ವಿಟ್ಲ: ಬಾಡಿಗೆ ಮನೆಯೊಂದರಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 4 ಮಂದಿ ಆರೋಪಿಯ ಬಂಧನ

ವಿಟ್ಲ: ಬಾಡಿಗೆ ಮನೆಯೊಂದರಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 4 ಮಂದಿ ಆರೋಪಿಯ ಬಂಧನ

March 12, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d