ಸುಮಾರು 3 ಎಕ್ರೆ ವಿಶಾಲವಾದ ಜಮೀನಿನಲ್ಲಿ ಸುಮಾರು ಒಂದು ಇತರರ ಅಡಿ ವಿಸ್ತೀರ್ಣದ ಕಟ್ಟಡದೊಂದಿಗೆ, ಅತ್ಯಾಧುನಿಕ ತಂತ್ರದಲ್ಲಿನ ಬಳಸಿಕೊಂಡು ಮಂಗಳೂರು-ಮೂಡಬಿದರೆ ರಾಷ್ಟ್ರೀಯ ಹೆದ್ದಾರಿಯ ಗಂಜಿಮಠದಲ್ಲಿ ನಿರ್ಮಾಣವಾಗುತ್ತಿರುವ ‘ಝಾರಾ ಕನ್ವೆಂಶನ್ ಸೆಂಟರ್’ ಸಭಾಂಗಣವು ಡಿಸೆಂಬರ್ 26ರಂದು ಸಂಜೆ 6.30ಕ್ಕೆ ಉದ್ಘಾಟನೆಗೊಳ್ಳಲಿದೆ.
ಹಲವು ಸಭಾಂಗಣಗಳ ಸಂಕೀರ್ಣವಾದ, ಸಂಪೂರ್ಣ ಹವಾ ನಿಯಂತ್ರಿತ ಸಭಾಂಗಣದಲ್ಲಿ ಅಲಂಕೃತ ದೀಪಾಲಂಕಾರ, ವೈಫೈ ನೀರು : ಎಲ್ಇಡಿ ಸೀನ್‌ಗಳು, ವರ್ಟಿಕಲ್ ಗಾರ್ಡನ್, ಸ್ಟೋನ್ ಫೌಂಟೆನ್, 24 ತಾಸುಗಳ ವಿದ್ಯುತ್ ವ್ಯವಸ್ಥೆ, ವಿಶಾಲವಾದ ಅಡುಗೆ ಕೋಣೆ, ಸಸ್ಯಾಹಾರಿ ಮತ್ತು ಶಾಕಾಹಾರಿ ಊಟೋಪಚಾರಕ್ಕೆ ಪ್ರತ್ಯೇಕ ಊಟದ ಕೋಣೆಗಳಿವೆ.
ಸುಮಾರು 650 ಕಾರುಗಳ ಪಾರ್ಕಿಂಗ್‌ಗೆ ವ್ಯವಸ್ಥೆಯಿದ್ದು, ಮುಖ್ಯ ಸಭಾಂಗಣ ‘ಆರೈಡ್’ನಲ್ಲಿ 700, ಒಂದನೇ ಮಹಡಿಯ ‘ಸಾಫಾನ್’ ಸಭಾಂಗಣದಲ್ಲಿ 650, ನೆಲ ಅಂತಸ್ತಿನ ‘ಟುಲಿಪ್’ ಸಭಾಂಗಣದಲ್ಲಿ 800, ಪಾರ್ಟಿ ಹಾಲ್ ‘ಐರಿಸ್’ನಲ್ಲಿ 300, ಬೂಬೆಲ್ ಸಭಾಂಗಣದಲ್ಲಿ 200, ಸ್ನೇಹ ಕೂಟದ ‘ಪರ್ಪಲ್’ ಸಭಾಂಗಣದಲ್ಲಿ 500, ಲ್ಯಾವೆಂಡರ್ ಸೆಮಿನಾರ್ ಸಭಾಂಗಣದಲ್ಲಿ 500 ಹಾಗೂ ‘ಝೀ ಗೌಂಡ್’ ಹೊರಾಂಗಣದಲ್ಲಿ 600 ಆಸನಗಳ ವ್ಯವಸ್ಥೆಯಿರುತ್ತದೆ. ಅತಿಥಿಗಳಿಗೆ ವಾಸ್ತವ್ಯಕ್ಕಾಗಿ ಸಭಾಂಗಣದಲ್ಲಿ ಮೂರು ಎಕ್ಸಿಕ್ಯುಟಿವ್ ಸೂಟ್ ರೂಮ್‌ಗಳಿರುತ್ತವೆ.
ದೇಶದ ಗಣ್ಯ ಮುಸ್ಲಿಮ್ ಧಾರ್ಮಿಕ ನೇತಾರ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಖಾಝಿ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮತ್ತು ಡಿಕೆಎಸ್‌ಸಿ ಅಧ್ಯಕ್ಷ ಕೆ.ಎಸ್. ಆಟಕೋಯ ತಂಗಳ ಕುಂಬೋಳ್ ಸಭಾಂಗಣ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ : ಸಂಸದ ನಳೀನ್ ಕುಮಾರ್ ಕಟೀಲು, ಸಚಿವರಾದ ಅಂಗಾರ ಎಸ್. ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿ. ಸುನಿಲ್ ಕುಮಾರ್, ಮಾಜಿ ಸಚಿವರಾದ ಯು.ಟಿ, ಖಾದರ್, ಬಿ. ರಮನಾಥ ರೈ, ಅಭಯಚಂದ್ರ ಜೈನ್, ಶಾಸಕರಾದ ಯು. ರಾಜೇಶ್ ನಾಯಕ್, ಡಿ. ವೇದವ್ಯಾಸ ಕಾಮತ್, ಲಾಲಾಜಿ ಮೆಂಡನ್ ಮತ್ತು ಉಮನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಬಿ.ಎಂ. ಫಾರೂಕ್ ಮತ್ತು ವಿ. ಮಂಜುನಾಥ ಭಂಡಾರಿ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ ಸೋಜ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ., ಮಾಜಿ ಶಾಸಕರಾದ ಜೆ.ಆರ್. ಲೋಬೊ, ವಿನಯ ಕುಮಾರ್ ಸೊರಕೆ ಮತ್ತು ಬಿ.ಎ. ಮೊಹಿದಿನ್ ಬಾವಾ, ಕೆಪಿಸಿಸಿ ಎನ್‌ಆರ್‌ಐ ಫೋರಂನ ನಿಕಟಪೂರ್ವ ಅಧ್ಯಕ್ಷೆ ಡಾ. ಆರತಿ ಕೃಷ್ಣ, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹಿಂ, ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ವೈಟ್‌ಸ್ಟೋನ್ ಡೆವೆಲಪರ್‌ನ ಆಡಳಿತ ನಿರ್ದೇಶಕ ಬಿ.ಎಂ. ಶರೀಫ್, ಸೂರಲ್ಪಾಡಿ ಜುಮಾ ಮಸೀದಿಯ ಖತೀಬ್ ಮೌಲಾನಾ ಉಸ್ಮಾನ್ ದಾರಿಮಿ ಹಾಗೂ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ನೋನಯ್ಯ ಕೋಟ್ಯಾನ್ ಮತ್ತು ಸದಸ್ಯೆ ಅನಿತಾ ಡಿ’ಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಝಾರಾ ಕನ್ವಂಶನ್ ಸೆಂಟರ್‌ನ ಅಧ್ಯಕ್ಷ ಬಿ.ಝಕರಿಯಾ ಜೋಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸನ್ಮಾನ: ಕಾರ್ಯಕ್ರಮದಲ್ಲಿ ಪದ್ಮವಿಭೂಷಣ ಪುರಸ್ಕೃತ ಡಾ. ಬಿ.ಎಂ. ಹೆಗ್ಡೆ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ರಾಜ್ಯ ವಕ್ಸ್ ಬೋರ್ಡ್‌ನ ನೂತನ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಹಾಗೂ ಶಾಸಕ ಡಾ. ಭರತ್ ಶೆಟ್ಟಿ ವೈ.ಯವರನ್ನು ಸನ್ಮಾನಿಸಲಾಗುವುದು ಎಂದು ಝಾರಾ ಕನ್ವಂಶನ್ ಸೆಂಟರ್ ನ ನಿರ್ದೇಶಕರಾದ ಝಾಹಿದ್ ಝಕರಿಯಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು: ಬಿ.ಝಕರಿಯಾ ಜೋಕಟ್ಟೆ (ಅಧ್ಯಕ್ಷ, ಝಾರಾ ಕನ್ವಂಶನ್ ಸೆಂಟರ್) ಝಹೀರ್ ಝಕರಿಯಾ (ನಿರ್ದೇಶಕ, ಝಾರಾ ಕನ್ವಂಶನ್ ಸೆಂಟರ್) ನಝೀರ್ ಝಕರಿಯಾ (ನಿರ್ದೇಶಕ, ಝಾರಾ ಕನ್ವಂಶನ್ ಸೆಂಟರ್) ಝಾಹಿದ್ ಝಕರಿಯಾ (ನಿರ್ದೇಶಕ, ಝಾರಾ ಕನ್ವಂಶನ್ ಸೆಂಟರ್)
Discover more from Coastal Times Kannada
Subscribe to get the latest posts sent to your email.
Discussion about this post