ಮಂಗಳೂರು, ಡಿ.24 : ವಿಟ್ಲ ಸಮೀಪದ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬವನ್ನು ಸರಳ ಹಾಗೂ ಸಂಭ್ರಮ ದಿಂದ ಆಚರಿಸಲಾಯಿತು. ಸಾಮೆ ಮಿಷನ್ ನ ಫಾ. ವಿಕ್ಟರ್ ಮಚಾದೊ ಪ್ರಧಾನ ಧರ್ಮಗುರುಗಳಾಗಿ ಬಲಿ ಪೂಜೆ ನೆರವೇರಿಸಿದರು. ಹಾಗೂ ಆಶಿರ್ವಚನ ನೀಡಿದರು. ಬಳಿಕ ಚರ್ಚ್ ಆವರಣದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು. ಫಾ ವಿಶಾಲ್ ಮೋನಿಸ್ ತಮ್ಮ ಸಂದೇಶ ನೀಡಿದರು. ಹಾಗೂ ಸಾಂಸ್ಕೃತಿಕ ಸಂಜೆ ಆಚರಿಸಲಾಯಿತು.
Discussion about this post