ಮಂಗಳೂರು, ಡಿ.24 : ನಾಡಿನೆಲ್ಲೆಡೆ ಕ್ರಿಸ್ಮಸ್ ಸಂಭ್ರಮ. ಕ್ರಿಸ್ತಿಯನ್ನರು ಏಸು ಕ್ರಿಸ್ತನ ಜನ್ಮದಿನದ ಸಡಗರದಲ್ಲಿದ್ದಾರೆ. ಕಳೆದ ಬಾರಿ ಕೊರೊನಾ ನಿರ್ಬಂಧ ಹಿನ್ನೆಲೆಯಲ್ಲಿ ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರಲಿಲ್ಲ. ಈ ಬಾರಿ ಕೊರೊನಾ ನಡುವೆಯೂ ಚರ್ಚ್ ಗಳಲ್ಲಿ ಸಂಪ್ರದಾಯದಂತೆ ಪ್ರಾರ್ಥನೆ ನೆರವೇರಿಸಿದ್ದು ಸಂಭ್ರಮ ಮನೆಮಾಡಿದೆ.
ಶಾಂತಿ, ಸಹನೆ, ಸಾಮರಸ್ಯ , ದಯೆ , ಪ್ರೇಮಗಳೇ ಪರಮ ಧರ್ಮ ಎಂದು ಜಗತ್ತಿಗೆ ಬೋಧಿಸಿದ ಯೋಸುಕ್ತಿಸ್ತರ ಜನುಮದಿನ ಇಂದು .ಯೇಸು ಜನನದ ಹಬ್ಬ ಕ್ರಿಸ್ ಮಸ್ ನ್ನು ಇಂದು ಕರಾವಳಿಯಾದ್ಯಂತ ಸಡಗರದಿಂದ ಹಬ್ಬ ಆಚರಿಸಲಾಗುತ್ತಿದೆ. ಹಬ್ಬದ ಪ್ರಯುಕ್ತ ಚರ್ಚ್ ಹಾಗೂ ಕ್ರೈಸರ ಮನೆಗಳಲ್ಲಿ ಹಬ್ಬದ ಸಡಗರದ ವಾತಾವರಣ ನೆಲೆಸಿದೆ.
ಹಬ್ಬದ ವಾತಾವರಣ ಎಲ್ಲೆಡೆ ಮನೆಮಾಡಿದ್ದು, ಚರ್ಚ್‌ಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಹಬ್ಬಕ್ಕಾಗಿ ಹೊಸ ಉಡುಗೆ ತೊಡುಗೆ , ಕ್ರಿಸ್ಮಸ್ ಕೇಕ್ , ಸಂತಾಕ್ಲೋಸ್ ಸಡಗರ ಒಂದೆಡೆಯಾದರೆ ಮನೆಗಳ ಆವರಣದಲ್ಲಿ ಆಕರ್ಷಕ ಕ್ರಿಬ್‌ಗಳನ್ನು ನಿರ್ಮಿಸಲಾಗಿದ್ದು ನಕ್ಷತ್ರಗಳನ್ನು ಜೋಡಿಸಲಾಗಿದೆ. ಸೌಹಾರ್ದವಾಗಿ ಕ್ರಿಸ್ಮಸ್ ಹಬ್ಬ ಆಚರಿಸಲಾಗುತ್ತಿದೆ
ಇಂದು ಹಬ್ಬದ ಪ್ರಯುಕ್ತ ಚರ್ಚ್‌ಗಳಲ್ಲಿ ಬಲಿ ಪೂಜೆ ಹಾಗೂ ಶುಭಾಷಯಗಳ ವಿನಿಮಯ ನಡೆಯಲಿದೆ. ಹಾಗೆಯೇ ಮನೆಗಳಲ್ಲಿ ಕ್ರಿಸ್ಮಸ್ ತಿಂಡಿ ತಿನಿಸು ಕುಸ್ವಾರ್ ವಿನಿಮಯ, ಹಬ್ಬದ ಭೋಜನದ ಸಂಭ್ರಮಾಚರಣೆ ನಡೆಯಲಿದೆ.