ಕರಾಚಿ: ಕರಾಚಿಯಲ್ಲಿ ಬಾಂಬ್ ಸ್ಫೋಟದಿಂದ ಮೂವರು ಚೀನಾ ಪ್ರಜೆಗಳು ಸೇರಿದಂತೆ ನಾಲ್ವರ ಹತ್ಯೆಯ ಹಿಂದೆ ಮಹಿಳೆಯ ಕೈವಾಡ ಬಯಲಾಗಿದೆ. ಪಾಕಿಸ್ತಾನದ ಪ್ರತ್ಯೇಕತಾವಾದಿ ಗುಂಪಿನ ಮಹಿಳಾ ಆತ್ಮಾಹುತಿ ಬಾಂಬರ್ ಕರಾಚಿ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತವಾಗಿರುವ ಕನ್ಫ್ಯೂಷಿಯಸ್ ಇನ್‌ಸ್ಟಿಟ್ಯೂಟ್‌ನ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ್ದು, ಮೂವರು ಚೀನಾ ಪ್ರಜೆಗಳು ಸೇರಿದಂತೆ ನಾಲ್ವರ ಹತ್ಯೆಗೆ ಕಾರಣವಾಗಿದೆ. ಕರಾಚಿಯಲ್ಲಿ ಚೀನಿಯರ ಮೇಲೆ ಇಂದಿನ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನ ಬಲೂಚ್ ಲಿಬರೇಶನ್ ಆರ್ಮಿ ಒಪ್ಪಿಕೊಂಡಿದೆ. ಈ ಗುಂಪಿನ ವಕ್ತಾರ ಜೀಯಂಡ್ ಬಲೋಚ್ ಸೂಸೈಡ್ ಬಾಂಬ್ ದಾಳಿ ಹೊಣೆಯನ್ನ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಮಹಿಳಾ ಸೂಸೈಡ್ ಬಾಂಬರ್ ಅನ್ನ ಈ ಕಾರ್ಯಾಚರಣೆಯಲ್ಲಿ ಬಳಸಲಾಯಿತು ಎಂದು ಅವರು ಹೇಳಿದ್ದಾರೆ. ಬುರ್ಕಾ ಧರಿಸಿ ಗೇಟ್ ಬಳಿ ನಿಂತಿದ್ದ ಮಹಿಳೆ ವ್ಯಾನ್ ಕಾಲೇಜು ಆವರಣದೊಳಕ್ಕೆ ಬರ್ತಿದ್ದಂತೆ ತನ್ನನ್ನು ತಾನು ಸ್ಫೋಟಿಸಿಕೊಂಡು ದುರಂತಕ್ಕೆ ಕಾರಣಳಾಗಿದ್ದಾಳೆ. ಸೂಸೈಡ್ ಬಾಂಬರ್ ನ ಶರಿ ಬಲೂಚ್ ಎಂದು ಗುರ್ತಿಸಲಾಗಿದೆ. ಈಕೆಯ ಪತಿ ವೈದ್ಯರಾಗಿದ್ದು ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ದಾಳಿಯಲ್ಲಿ ಮೂವರು ಚೀನಾ ಪ್ರಜೆಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಕರಾಚಿ ಪೊಲೀಸರು ಖಚಿತಪಡಿಸಿದ್ದಾರೆ.
CCTV footage of the suicide bomber who detonates explosives when the Chinese Institute vehicles arrived. Police confirms the killing of 3 Chinese and 1 Pakistani in this #BLA attack.
BLA has significantly up their attacks in #Pakistan in recent times.#KarachiUniversity https://t.co/BbNxoeXZJ1 pic.twitter.com/MDkYGZpbbL— Bashir Ahmad Gwakh (@bashirgwakh) April 26, 2022
Discover more from Coastal Times Kannada
Subscribe to get the latest posts sent to your email.
Discussion about this post