ಬೆಂಗಳೂರು: ಗಣೇಶ ಹಬ್ಬಕ್ಕೆ ಥಿಯೇಟರ್ ಗೆ ಬರಲಿರುವ ಭಜರಂಗಿ 2 ಚಿತ್ರದ ಟ್ರೈಲರ್ ಇದೇ ಸೆಪ್ಟೆಂಬರ್ 1 ರಂದು ಅಂದರೆ ಮುಂದಿನ ಬುಧವಾರ ಸಂಜೆ 6 ಗಂಟೆಗೆ ಲಾಂಚ್ ಆಗಲಿದೆ.
ಎ.ಹರ್ಷ ನಿರ್ದೇಶನದ ಭಜರಂಗಿ 2 ಸಿನಿಮಾದ ಮೇಲೆ ಪ್ರೇಕ್ಷಕರಿಗೆ ಭಾರೀ ನಿರೀಕ್ಷೆಯಿದೆ. ಚಿತ್ರರಂಗವೂ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಹೊಂದಿದೆ.
ಲಾಕ್ ಡೌನ್ ಬಳಿಕ ಸ್ಟಾರ್ ಸಿನಿಮಾವೊಂದು ಬಿಡುಗಡೆಯಾಗುತ್ತಿರುವ ಖುಷಿ ಚಿತ್ರರಂಗಕ್ಕಿದ್ದರೆ, ಇದು ನಿರೀಕ್ಷೆಗೆ ತಕ್ಕ ಸಿನಿಮಾವಾಗಿರಲಿದೆ ಎಂಬ ಭರವಸೆಯನ್ನು ಪ್ರೇಕ್ಷಕರು ಹೊಂದಿದ್ದಾರೆ. ಸುಮಾರು 350 ಚಿತ್ರಮಂದಿರಗಳಲ್ಲಿ ಭಜರಂಗಿ 2 ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post