ಪುಣೆ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾಗೆ ಭಾರತೀಯ ಸೇನೆಯ ವತಿಯಿಂದ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಶುಕ್ರವಾರ ಸನ್ಮಾನಿಸಿದರು. ಭೂಸೇನೆಯಲ್ಲಿ ಸುಬೇದಾರ್ ಆಗಿರುವ 23 ವರ್ಷದ ನೀರಜ್ ಜತೆಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಇತರ ಸೈನಿಕರನ್ನೂ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ (ಎಎಸ್‌ಐ) ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಎಎಸ್‌ಐ ಕ್ರೀಡಾಂಗಣವನ್ನು ‘ನೀರಜ್ ಚೋಪ್ರಾ ಸ್ಟೇಡಿಯಂ’ ಎಂದು ಮರುನಾಮಕರಣಗೊಳಿಸಲಾಯಿತು. ಸೇನೆಯ ಈ ಕ್ರೀಡಾಂಗಣಕ್ಕೆ ನೀರಜ್ ಚೋಪ್ರಾ ಹೆಸರು ಇಟ್ಟಿರುವುದು ಅವರಿಗೆ ನೀಡಲಾದ ವಿಶೇಷ ಗೌರವವೂ ಆಗಿದೆ. ಇದೇ ವೇಳೆ ಒಲಿಂಪಿಯನ್ ಸೈನಿಕರ ಸಹಿ ಇದ್ದ ಶಾಲು ಒಂದನ್ನು ರಾಜ್‌ನಾಥ್ ಸಿಂಗ್ ಅವರಿಗೆ ಉಡುಗೊರೆ ನೀಡಲಾಯಿತು.