ಉಡುಪಿ: ಕಾರ್ಕಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ರಕ್ತಪರೀಕ್ಷೆ ವರದಿ ಪೊಲೀಸರ ಕೈಸೇರಿದ್ದು, ರಕ್ತದಲ್ಲಿ ಮಾದಕ ವಸ್ತು ಅಂಶ ಇರುವುದು ದೃಢಪಟ್ಟಿದೆ. ಅಲ್ತಾಫ್ ಹಾಗೂ ಮತ್ತೋರ್ವ ಆರೋಪಿಯ ರಕ್ತ ಪರೀಕ್ಷೆಯಲ್ಲಿ ಮಾದಕ ಅಂಶ ಪತ್ತೆಯಾಗಿಲ್ಲ ಎನ್ನಲಾಗಿದೆ. ಯುವತಿ ರಕ್ತದಲ್ಲಿ ಪಾಸಿಟಿವ್ ಬಂದಿ ರುವ ಬಗ್ಗೆ ಅಲ್ತಾಫ್ ನನ್ನು ವಿಚಾರಿಸಿದಾಗ, ಅವನು ಕಾರಿನಲ್ಲಿದ್ದ ಒಂದು ಪುಡಿಯನ್ನು ತೋರಿಸಿ, ಇದನ್ನೇ ಆ ಹುಡುಗಿ ತೆಗೆದುಕೊಂಡಿದ್ದು ಎಂದಿದ್ದಾನೆ. ಈ ಪುಡಿಯನ್ನು ಪೊಲೀಸರು ಎಫ್ಎಸ್ಎಲ್ ಗೆ ಕಳುಹಿಸಿದ್ದು, ಅದು ಯಾವ ಡ್ರಗ್ಸ್ ಎಂದು ಕಂಡುಹಿಡಿಯಲಾಗುವುದು. ಸಂತ್ರಸ್ತೆಯ ರಕ್ತದಲ್ಲಿ ಪತ್ತೆಯಾಗಿರುವುದು ಇದರದ್ದೇ ಅಂಶವೇ ಎಂಬ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಈ ಡ್ರಗ್ ಅನ್ನು ಎಲ್ಲಿಂದ ಪಡೆದಿದ್ದಾರೆ ಮತ್ತು ಎಲ್ಲಿಂದ ಬಂದಿದೆ ಎನ್ನುವುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸಂತ್ರಸ್ತೆಯು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಬಾಕಿ ಇದ್ದು, ಅವರು ಚೇತರಿಸಿಕೊಂಡ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಆದಷ್ಟು ಬೇಗನೆ ಈ ಪ್ರಕರಣದ ತನಿಖೆಯನ್ನು ಮುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಕೆ.ಅರುಣ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post