ಮಂಗಳೂರು, ಡಿ.27: ಝಾರಾ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಸರ್ವ ಧರ್ಮೀಯರ 15 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಗಂಜಿಮಠದ ಝಾರಾ ಕನ್ವೆನ್ಶನ್ ಸಭಾಂಗಣದಲ್ಲಿಂದು ನಡೆಯಿತು.
ಉಡುಪಿ ಜಿಲ್ಲಾ ಖಾಝಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ದುಆ ನೆರವೇರಿಸಿ ಶುಭ ಹಾರೈಸಿದರು.
ಬೆಂಗಳೂರಿನ ಅವಧೂತ ಶ್ರೀ ವಿನಯ ಗುರೂಜಿ ಶುಭ ಹಾರೈಸಿ, ಎಲ್ಲ ಧರ್ಮದ ಜನರು ತಮ್ಮ ಧರ್ಮದ ಬಗ್ಗೆ ಗೌರವ ಭಾವನೆಯೊಂದಿಗೆ ಇತರ ಧರ್ಮದ ಜನರನ್ನು ಗೌರವಿಸೋಣ. ಹಸಿವು ಎಲ್ಲಾ ಧರ್ಮದ ಜನರಿಗೂ ಸಮಾನ. ಭಾರತದ ಬಡತನ ನಿವಾರಣೆಗೆ ಎಲ್ಲ ಧರ್ಮದ ಜನರು ಒಂದಾಗಿ ಶ್ರಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬಡವರ ಮದುವೆಗೆ ನೆರವಾಗುತ್ತಿರುವುದು ಪುಣ್ಯದ ಕಾರ್ಯ ಎಂದರು.
ಧರ್ಮಗುರುಗಳಾದ ಜೋಕಟ್ಟೆಯ ನ್ಯೂ ಜುಮಾ ಮಸೀದಿಯ ಖತೀಬ್ ಮೌಲಾನ ಅಬ್ದುಲ್ ರಹಿಮಾನ್ ದಾರಿಮಿ, ಜೋಕಟ್ಟೆ ಹಳೆ ಜುಮಾ ಮಸೀದಿಯ ಖತೀಬ್ ಮೌಲಾನ ಯಾಕೂಬ್ ಮದನಿ, ಜೋಕಟ್ಟೆ ಈದ್ಗಾ ಮಸೀದಿಯ ಖತೀಬ್ ಮೌಲಾನ ಇಬ್ರಾಹೀಂ ದಾರಿಮಿ ಸವಣೂರು, ಗುರುಪುರ ಚರ್ಚಿನ ಧರ್ಮಗುರು ವಂ.ಪಿಯೂಸ್ ಪಿಂಟೋ, ಬಾಲಕೃಷ್ಣ ಶೆಟ್ಟಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಅನಿವಾಸಿ ಭಾರತೀಯರ ಒಕ್ಕೂಟದ ಮಾಜಿ ಅಧ್ಯಕ್ಷ ಡಾ.ಆರತಿ ಕೃಷ್ಣ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ, ಡಾ.ಬಿ.ಎಂ.ಉಮರ್ ಹಾಜಿ, ಮಂಗಳೂರು ಬಿಸಿಸಿಐ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಉದ್ಯಮಿ ಬಿ.ಎಂ.ಶರೀಫ್, ಟಿಆರ್ ಎಫ್ ಸಂಸ್ಥಾಪಕ ಅಬ್ದುಲ್ ರವೂಫ್ ಪುತ್ತಿಗೆ, ಮಾಜಿ ಜಿಪಂ ಸದಸ್ಯ ಯು.ಪಿ.ಇಬ್ರಾಹೀಂ ಅಡ್ಡೂರು, ಜೋಕಟ್ಟೆ ನ್ಯೂ ಜುಮಾ ಮಸೀದಿಯ ಅಧ್ಯಕ್ಷ ಜಿ.ಎಂ.ಸಂಶುದ್ದೀನ್, ಜೋಕಟ್ಟೆ ಅಂಜುಮನ್ ಕುವ್ವತುಲ್ ಅಧ್ಯಕ್ಷ ಮುಹಮ್ಮದ್ ಸಿರಾಜ್ ಮನೆಗಾರ್, ಜೋಕಟ್ಟೆ ಹಳೆ ಜುಮಾ ಮಸೀದಿಯ ಅಧ್ಯಕ್ಷ ಬಿ.ಎಸ್.ಹುಸೈನ್ ಹಾಜಿ, ಉದ್ಯಮಿ ಮೆಟ್ರೋ ಶಾಹುಲ್ ಹಮೀದ್, ನೌಶಾದ್ ಹಾಜಿ, ಮಾಜಿ ಜಿಪಂ ಸದಸ್ಯ ಕೃಷ್ಣ ಅಮೀನ್ ಮತ್ತಿತರರು ಭಾಗವಹಿಸಲಿದ್ದರು.
ಫೌಂಡೇಶನ್ ನ ಟ್ರಸ್ಟಿಗಳಾದ ಝಾಹಿರ್ ಝಕರಿಯ, ನಝೀರ್ ಝಕರಿಯ, ಝಾಹಿದ್ ಝಕರಿಯ ಉಪಸ್ಥಿತರಿದ್ದರು. ಝಾರಾ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಬಿ.ಝಕರಿಯ ಜೋಕಟ್ಟೆ ಸ್ವಾಗತಿಸಿದರು. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post