ಡಿಸೆಂಬರ್ 24 ಶುಕ್ರವಾರದಂದು ಸಂಜೆ 5.30 ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಸಿ, ಸ್ಥಳ ಶುದ್ದಿ, ಸಪ್ತ ಶುದ್ದಿ, ವಾಸು ರಾಕ್ಷೋಘ್ನ ಹಾಗೂ ದಿಕ್ಪಾಲಕ ಬಲಿ ನಡೆಸಲಾಯಿತು.
ಮರುದಿನ ಶ್ರೀ ವೀರನಾರಾಯಣ ದೇವರ ಬಿಂಬ ಬಾಲಾಲಯದಲ್ಲಿ ಪ್ರತಿಷ್ಠೆಯ ಪೂರ್ವಭಾವಿಯಾಗಿ ಡಿಸೆಂಬರ್ 25 ರಂದು ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಜರಗುವ ಭಜನಾ ಕಾರ್ಯಕ್ರಮ, ಸಾಮೂಹಿಕ ಹರಿನಾಮ ಸಂಕೀರ್ತನೆ ಯನ್ನು ಮಾಣಿಲದ ಶ್ರೀಧಾಮದ ಶ್ರೀ ಪರಮಹಂಸ ಮೋಹನದಾಸ ಸ್ವಾಮೀಜಿಯವರು ಕ್ಷೇತ್ರದ ದೇವರನ್ನು ಪ್ರಾರ್ಥಿಸಿ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬೆಳಿಗ್ಗೆ ದೇವಸ್ಥಾನದ ತಂತ್ರಿ ಗಳಾಗಿರುವ ಅನಂತ ಉಪಾಧ್ಯಾಯರು ಅವರ ಮಾರ್ಗದರ್ಶನದಂತೆ ಪ್ರಧಾನ ಅರ್ಚಕರು ಜನಾರ್ಧನ್ ಭಟ್ ಅವರು ಶ್ರೀದೇವರಿಗೆ ಪುಣ್ಯಾಹ ಬಿಂಬ ಶುದ್ದಿ ಕಲಶ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ, ಕಲಶಾಭಿಷೇಕ ಪೂಜೆ ಹಾಗೂ ವಿಶೇಷ ಪೂಜೆ ನಡೆಸಿದರು. ಕಾರ್ಯಕ್ರಮದಲ್ಲಿ ಬೆಳಿಗ್ಗಿನಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಸಂಜೆ 5 ಘಂಟೆಯಿಂದ 49 ಕಲಶ – ಅಧಿವಾಸ ಹೋಮ, ವಾಸು ರಾಕ್ಷೋಘ್ನ ಬಲಿ ನಡೆಯಿತು. ಹರಿನಾಮ ಸಂಕೀರ್ತನೆಗೆ ಮಂಗಳ ಹಾಡಿದ ನಂತರ ಲೋಕ ಕಲ್ಯಾಣಾರ್ಥವಾಗಿ ಹಾಗೂ ಚೈತನ್ಯ ವೃದ್ದಿಗಾಗಿ ’ಓಂ ಶ್ರೀ ಭಗವತೇ ವಾಸುದೇವಾಯ’ ಎಂದು ದೇವನಾಮ ಜಪಿಸುತ್ತಾ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಳಕ್ಕೆ ಪ್ರದಕ್ಷಿಣೆ ಬಂದರು. ನಂತರ ತಡರಾತ್ರಿ ಮಹಾ ಕಾರ್ತಿಕ ಪೂಜೆ , ಮಹಾ ಮಂಗಳಾರತಿ ನಡೆಸಿ, ಪ್ರಸಾದ ವಿತರಣೆ ಮಾಡಲಾಯಿತು.
ಮಂಗಳೂರಿನ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ನಿನ್ನೆ ಶ್ರೀ ವೀರನಾರಾಯಣ ದೇವರ ಬಿಂಬ ಬಾಲಾಲಯದಲ್ಲಿ ಪ್ರತಿಷ್ಠೆಯು ಬೆಳಗ್ಗೆ 10.09 ಕ್ಕೆ ಒದಗಿದ ಕುಂಭ ಲಗ್ನ ಸುಮೂಹೂರ್ತದಲ್ಲಿ ಮಾಣಿಲದ ಶ್ರೀಧಾಮದ ಶ್ರೀ ಪರಮಹಂಸ ಮೋಹನದಾಸ ಸ್ವಾಮೀಜಿಯವರು ಉಪಸ್ಥಿತಿಯಲ್ಲಿ ಅಪಾರ ಭಕ್ತರ ಕೂಡುವಿಕೆಯಲ್ಲಿ ನಡೆಯಿತು. ಬೆಳಿಗ್ಗೆ ದೇವಸ್ಥಾನದ ತಂತ್ರಿ ಗಳ ಮಾರ್ಗದರ್ಶನದಂತೆ ಪ್ರಧಾನ ಅರ್ಚಕರು ಶ್ರೀದೇವರಿಗೆ ವಿಶೇಷ ಪೂಜೆ ಶ್ರೀ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠೆಯನ್ನು ನಡೆಸಿದರು. ದೇವರಿಗೆ ಕಲಶಾಭಿಷೇಕ, ಪ್ರಾರ್ಥನೆ, ಬಿಂಬ ಹಾಗೂ ಪೀಠ ಉದ್ವಾಸನೆ, ಗಣಪತಿ ಹೋಮ, ಬಾಲಾಲಯದಲ್ಲಿ ಪೀಠ ಹಾಗೂ ಬಿಂಬ ಪ್ರತಿಷ್ಠಾಪನೆ ಹಾಗೂ ಇನ್ನಿತರ ಪೂಜಾ ವಿಧಿ ವಿಧಾನಗಳು ನಡೆಯಿತು.
ತದನಂತರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಬೆಂಗಳೂರು, ಮುಂಬೈ ಹಾಗೂ ವಿವಿಧ ನಗರಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಕರಸೇವೆಯಲ್ಲಿ ಪಾಲ್ಗೊಂಡು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಪ್ರಾರಂಭಗೊಳಿಸಿದರು. ಗರ್ಭಗುಡಿ, ಸುತ್ತು ಪೌಳಿಯನ್ನು ವಿಸರ್ಜಿಸುವ ಕಾರ್ಯವು ವಿಧಿವತ್ತಾಗಿ ನಡೆಯಿತು.
ಈ ಕಾರ್ಯಕ್ರಮಗಳ ಸಂಧರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ದೇವಸ್ಥಾನದ ಸೇವಾ ಸಮಿತಿ, ದೇವಳದ ಜೀರ್ಣೋದ್ಧಾರ ಸಮಿತಿ, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ , ಶ್ರೀ ವೀರನಾರಾಯಣ ಮಹಿಳಾ ಮಂಡಳಿ, ದ.ಕ. ಜಿಲ್ಲಾ ಮೂಲ್ಯರ ಯಾನೆ ಮಾತೃ ಸಂಘ, ಮಹಿಳಾ ಮಂಡಳಿ, ಸೇವಾದಳ, ವಿವಿಧ ನಗರಗಳ ಕುಲಾಲ ಸಮಾಜದ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಮಸ್ತ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೈ ಜೋಡಿಸಿ, ಕರಸೇವೆಯನ್ನು ನಾಭೂತೋ: ನಾ ಭವಿಷ್ಯತಿ:ಎಂಬoತೆ ಯಶಸ್ವಿಯಾಗಿ ನಡೆಸಿ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣಿಭೂತರಾದರು.
Discover more from Coastal Times Kannada
Subscribe to get the latest posts sent to your email.
Discussion about this post