ಮಂಗಳೂರು, ; ಶ್ರೀಮತಿ ನಿಶಾ ಯುವರಾಜ್ ಇವರಿಗೆ *ಮಂಗಳೂರು ವಿಶ್ವವಿದ್ಯಾನಿಲಯ” ದಿಂದ ಪಿ.ಎಚ್.ಡಿ. ಡಿಗ್ರಿ ಅವಾರ್ಡ್ ಆದ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ| ಅರಬಿ. ಯು ಇವರ ಮಾರ್ಗದರ್ಶನದಲ್ಲಿ “ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾದ್ಯಾಪಕಿ ಹಾಗೂ ವಿಭಾಗ ಮುಖ್ಯಸ್ಥೆಯಾಗಿರುವ ಶ್ರೀಮತಿ ನಿಶಾ ಯುವರಾಜ್ ಇವರು ಮಂಡಿಸಿದ “ಅ ಸ್ಟಡಿ ಆನ್ ಇಂಪ್ಯಾಕ್ಟ್ ಆಫ್ ಪಬ್ಲಿಕ್ ಎಕ್ಷಪೆಂಡಿಚರ್ ಆನ್ ಪ್ರೈಮರಿ ಎಜುಕೇಶನ್ ಇನ್ ಕರ್ನಾಟಕ” (A study on Impact of Public Expenditure on Primary Education in Karnataka”) ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ.
ಶ್ರೀಮತಿ ನಿಶಾಯುವರಾಜ್ ಇವರು ಶ್ರೀ ಕೇಶವ ಸುವರ್ಣ ಹಾಗೂ ಶ್ರೀಮತಿ ವಸಂತಿ ಕೋಟ್ಯಾನ್ ಇವರ ಪುತ್ರಿಯಾಗಿದ್ದು, ಇವರಿಗೆ ಸಹೋದರಿ ಶ್ರೀಮತಿ ರಶ್ಮಿತಾ ಅಶೋಕ್ ಮತ್ತು ಸಹೋದರ ಶ್ರೀ ಹರ್ಷಿತ್ ಕೋಟ್ಯಾನ್‌ರನ್ನು ಹೊಂದಿದ್ದು, ಶ್ರೀ ಯುವರಾಜ್ ಕೆ. ಅಮೀನ್ ವಕೀಲರು ಮಂಗಳೂರು ಇವರ ಧರ್ಮಪತ್ನಿಯಾಗಿರುತ್ತಾರೆ.
Discover more from Coastal Times Kannada
Subscribe to get the latest posts sent to your email.
Discussion about this post