ಮಂಗಳೂರು: ಟೂತ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿಯೊಬ್ಬಳು ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದಲ್ಲಿ ಈ ದುರಂತ ಸಂಭವಿಸಿದೆ. ಶ್ರಾವ್ಯ(22) ಮೃತ ದುರ್ದೈವಿ. ಮನೆಯ ಬಾತ್ ರೂಮಿನ ಕಿಟಕಿ ಬಳಿ ಟೂತ್ ಪೇಸ್ಟ್ ಇಡಲಾಗಿತ್ತು. ಟೂತ್ ಪೇಸ್ಟ್ ಪಕ್ಕದಲ್ಲೇ ಇಲಿ ಪಾಷಾಣದ ಔಷಧಿಯೂ ಇತ್ತು. ಕತ್ತಲಲ್ಲಿ ಇಲಿ ಪಾಷಾಣವನ್ನೇ ಟೂತ್ಪೇಸ್ಟ್ ಎಂದು ಕೊಂಡು ಅದರಲ್ಲಿ ಹಲ್ಲುಜ್ಜಿದ್ದಾಳೆ. ಇದರಿಂದ ಅಸ್ವಸ್ಥಗೊಂಡ ಯುವತಿಯನ್ನು ಕುಟುಂಬಸ್ಥರು ಕೂಡಲೇ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
