• About us
  • Contact us
  • Disclaimer
Thursday, November 12, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು : CCB ಪೋಲೀಸರ ಭರ್ಜರಿ ಕಾರ್ಯಾಚರಣೆ : ರೂ.24 ಲಕ್ಷದ MDMA ವಶ, ಮೂವರು ಅರೆಸ್ಟ್

Coastal Times by Coastal Times
September 28, 2026
in ಕ್ರೈಮ್ ನ್ಯೂಸ್
ಮಂಗಳೂರು : CCB ಪೋಲೀಸರ ಭರ್ಜರಿ ಕಾರ್ಯಾಚರಣೆ : ರೂ.24 ಲಕ್ಷದ MDMA ವಶ, ಮೂವರು ಅರೆಸ್ಟ್
44
VIEWS
WhatsappTelegramShare on FacebookShare on Twitter

ಮಂಗಳೂರು : ಮಂಗಳೂರು ನಗರದಲ್ಲಿ ನಿಷೇಧಿತ ಮಾದಕವಸ್ತು MDMA ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮಂಗಳೂರು ನಗರ ಅಪರಾಧ ವಿಭಾಗದ (CCB) ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ರೂ.24 ಲಕ್ಷ ಮೌಲ್ಯದ 240 ಗ್ರಾಂ MDMA ಸೇರಿದಂತೆ ಒಟ್ಟು ರೂ.29.80 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೆಪ್ಟೆಂಬರ್ 26ರಂದು ಸಂಜೆ ಉಳ್ಳಾಲ ತಾಲೂಕು ಮುಡಿಪು ಕಾಯರ್‌ಗೋಳಿ ಕ್ರಾಸ್ ಬಳಿ CCB ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಬೆಂಗಳೂರು ನಗರದಿಂದ MDMA ಖರೀದಿಸಿ ಮಂಗಳೂರು ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ CCB ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರನ್ನು ಮುಡಿಪು ನಿವಾಸಿಗಳಾದ ನವಾಜ್ @ ನವ್ವಾ @ ಮುಡಿಪು ನವಾಜ್ (35), ಮೊಹಮ್ಮದ್ ಆರೀಫ್ ಎನ್. (36) ಹಾಗೂ ಲಾಯ್ಡ್ ಡಿಸೊಜಾ (35) ಎಂದು ಗುರುತಿಸಲಾಗಿದೆ. ಬಂಧಿತರಿಂದ 240 ಗ್ರಾಂ MDMA – ಅಂದಾಜು ರೂ.24 ಲಕ್ಷ ಮೌಲ್ಯ 4 ಮೊಬೈಲ್ ಫೋನ್‌ಗಳು MDMA ಸಾಗಾಟಕ್ಕೆ ಬಳಸಿದ್ದ ಟೆಂಪೋ ವಾಹನ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ.29.80 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ಮುಡಿಪು ನವಾಜ್ ವಿರುದ್ಧ 16 ಪ್ರಕರಣ : ಪೊಲೀಸರ ಪ್ರಕಾರ, ನವಾಜ್ ವಿರುದ್ಧ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲ್ಲೆ, ಬೆದರಿಕೆ, ಕೊಲೆಯತ್ನ, ಅಪಹರಣ, ಅತ್ಯಾಚಾರ, ವಂಚನೆ, ಮೋಸ, ದನಗಳ್ಳತನ ಹಾಗೂ ಮಾದಕವಸ್ತು ಮಾರಾಟ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಸುಮಾರು 16 ಪ್ರಕರಣಗಳು ದಾಖಲಾಗಿವೆ. ಕೊಣಾಜೆ ಪೊಲೀಸ್ ಠಾಣೆ – 12 ಪ್ರಕರಣ ಉಳ್ಳಾಲ ಪೊಲೀಸ್ ಠಾಣೆ – 2 ಪ್ರಕರಣ ಮುಲ್ಕಿ ಪೊಲೀಸ್ ಠಾಣೆ – 1 ಪ್ರಕರಣ, ಸುರತ್ಕಲ್ ಪೊಲೀಸ್ ಠಾಣೆ – 1 ಪ್ರಕರಣ ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಉಳ್ಳಾಲ ಹಾಗೂ ಕೊಣಾಜೆ ಪೊಲೀಸ್ ಠಾಣೆಗಳಲ್ಲಿ ತಲಾ ಎರಡು ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ಆರೋಪಿಗಳಿಗಾಗಿ ಶೋಧ: ಈ MDMA ಮಾರಾಟ ಹಾಗೂ ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆ ಇದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರಿದಿದೆ.ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಗಳೂರು CCB ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಾಣಿ : ಕಾರು-ಪಿಕಪ್‌ ನಡುವೆ ಡಿಕ್ಕಿ ಮಹಿಳೆ ಸಾವು; ಮೂವರು ಗಂಭೀರ

Next Post

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

Related Posts

ಗೋವಾದಿಂದ ಮಂಗಳೂರಿಗೆ ಅಕ್ರಮ ಮದ್ಯ ಸಾಗಾಟ ಹೆಜಮಾಡಿ ಟೋಲ್ ಬಳಿ ನಾಲ್ವರು ಆರೋಪಿಗಳ ಬಂಧನ
ಕ್ರೈಮ್ ನ್ಯೂಸ್

ಗೋವಾದಿಂದ ಮಂಗಳೂರಿಗೆ ಅಕ್ರಮ ಮದ್ಯ ಸಾಗಾಟ ಹೆಜಮಾಡಿ ಟೋಲ್ ಬಳಿ ನಾಲ್ವರು ಆರೋಪಿಗಳ ಬಂಧನ

November 12, 2026
40
ಬಂಟ್ವಾಳ ;ಯುವಕನಿಗೆ ಬೊಲೆರೋ ಡಿಕ್ಕಿ ಪಡಿಸಿ ಕೊಲೆಯತ್ನ, ಆರೋಪಿ ಜಗದೀಶ್ ಜೈನ್ ಬಂಧನ
ಕ್ರೈಮ್ ನ್ಯೂಸ್

ಬಂಟ್ವಾಳ ;ಯುವಕನಿಗೆ ಬೊಲೆರೋ ಡಿಕ್ಕಿ ಪಡಿಸಿ ಕೊಲೆಯತ್ನ, ಆರೋಪಿ ಜಗದೀಶ್ ಜೈನ್ ಬಂಧನ

November 12, 2026
16
Next Post
ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

Discussion about this post

Recent News

ಗೋವಾದಿಂದ ಮಂಗಳೂರಿಗೆ ಅಕ್ರಮ ಮದ್ಯ ಸಾಗಾಟ ಹೆಜಮಾಡಿ ಟೋಲ್ ಬಳಿ ನಾಲ್ವರು ಆರೋಪಿಗಳ ಬಂಧನ

ಗೋವಾದಿಂದ ಮಂಗಳೂರಿಗೆ ಅಕ್ರಮ ಮದ್ಯ ಸಾಗಾಟ ಹೆಜಮಾಡಿ ಟೋಲ್ ಬಳಿ ನಾಲ್ವರು ಆರೋಪಿಗಳ ಬಂಧನ

November 12, 2026
40
ಬಂಟ್ವಾಳ ;ಯುವಕನಿಗೆ ಬೊಲೆರೋ ಡಿಕ್ಕಿ ಪಡಿಸಿ ಕೊಲೆಯತ್ನ, ಆರೋಪಿ ಜಗದೀಶ್ ಜೈನ್ ಬಂಧನ

ಬಂಟ್ವಾಳ ;ಯುವಕನಿಗೆ ಬೊಲೆರೋ ಡಿಕ್ಕಿ ಪಡಿಸಿ ಕೊಲೆಯತ್ನ, ಆರೋಪಿ ಜಗದೀಶ್ ಜೈನ್ ಬಂಧನ

November 12, 2026
16
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಗೋವಾದಿಂದ ಮಂಗಳೂರಿಗೆ ಅಕ್ರಮ ಮದ್ಯ ಸಾಗಾಟ ಹೆಜಮಾಡಿ ಟೋಲ್ ಬಳಿ ನಾಲ್ವರು ಆರೋಪಿಗಳ ಬಂಧನ

ಗೋವಾದಿಂದ ಮಂಗಳೂರಿಗೆ ಅಕ್ರಮ ಮದ್ಯ ಸಾಗಾಟ ಹೆಜಮಾಡಿ ಟೋಲ್ ಬಳಿ ನಾಲ್ವರು ಆರೋಪಿಗಳ ಬಂಧನ

November 12, 2026
ಬಂಟ್ವಾಳ ;ಯುವಕನಿಗೆ ಬೊಲೆರೋ ಡಿಕ್ಕಿ ಪಡಿಸಿ ಕೊಲೆಯತ್ನ, ಆರೋಪಿ ಜಗದೀಶ್ ಜೈನ್ ಬಂಧನ

ಬಂಟ್ವಾಳ ;ಯುವಕನಿಗೆ ಬೊಲೆರೋ ಡಿಕ್ಕಿ ಪಡಿಸಿ ಕೊಲೆಯತ್ನ, ಆರೋಪಿ ಜಗದೀಶ್ ಜೈನ್ ಬಂಧನ

November 12, 2026
ಮಾ ಮಂತ್ರ ವೆಂಚರ್ಸ್ ಬ್ಯಾನರ್ ಅಡಿಯಲ್ಲಿ ಪಿಕೆ ಪ್ರೊಡಕ್ಷನ್ ಅರ್ಪಿಸುವ, ಮಹಿಳಾ ನಿರ್ದೇಶನದ ಹೊಸ ತುಳು-ಕನ್ನಡ ಸಿನಿಮಾಕ್ಕೆ ಶೀಘ್ರದಲ್ಲೇ ಮುಹೂರ್ತ

ಮಾ ಮಂತ್ರ ವೆಂಚರ್ಸ್ ಬ್ಯಾನರ್ ಅಡಿಯಲ್ಲಿ ಪಿಕೆ ಪ್ರೊಡಕ್ಷನ್ ಅರ್ಪಿಸುವ, ಮಹಿಳಾ ನಿರ್ದೇಶನದ ಹೊಸ ತುಳು-ಕನ್ನಡ ಸಿನಿಮಾಕ್ಕೆ ಶೀಘ್ರದಲ್ಲೇ ಮುಹೂರ್ತ

November 11, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d