ಮಂಗಳೂರು : ನಗರದ ಬಿಜೈ ನ್ಯೂರೋಡ್ನ ಸಂಕೈಗುಡ್ಡದ ಮನೆಯಿಂದ 30 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆಗಳನ್ನು ಕಳವು ಮಾಡಿರುವ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.24ರ ರಾತ್ರಿ 11:30ರಿಂದ ನ.25ರ ಬೆಳಗ್ಗೆ 6ರೊಳಗೆ ಮನೆಗೆ ಪ್ರವೇಶಿಸಿದ ಕಳ್ಳರು ಬೆಡ್ರೂಮ್ನ ಕಿಟಕಿಯ ಕಬ್ಬಿಣದ ಗ್ರಿಲ್ಸ್ನ್ನು ಯಾವುದೋ ಆಯುಧದಿಂದ ತುಂಡರಿಸಿ ಬೆಡ್ರೂಂ ಕಪಾಟಿನಲ್ಲಿದ್ದ ಅಂದಾಜು 16 ಗ್ರಾಂ ತೂಕದ ಕಿವಿಯ ಓಲೆ, 144 ಗ್ರಾಂ ತೂಕದ 4 ಚಿನ್ನದ ನೆಕ್ಲೆಸ್, 40 ಗ್ರಾಂ ತೂಕದ ಚಿನ್ನದ ಸರ, 48 ಗ್ರಾಂ ತೂಕದ ಚಿನ್ನದ ಹಾರ, 24 ಗ್ರಾಂ ತೂಕದ ಹವಳದ ಸರ, 40 ಗ್ರಾಂ ತೂಕದ ಚಿನ್ನದ ಸರ ಮತ್ತು 36 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಸಹಿತ 668 ಗ್ರಾಂ ತೂಕದ ಚಿನ್ನದ ಒಡನೆಗಳನ್ನು ಕಳವು ಮಾಡಿದ್ದಾರೆ ಎಂದು ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post