ಮುಂಬೈ, ನ 27: ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ನೋಡಿ ಅನೇಕರು ಕಿಡಿಕಾರಿದ್ದರು. ಬಾಲಿವುಡ್ ನಟಿ ಕಾಜೋಲ್ ಅವರ ಡೀಪ್‌ಫೇಕ್ ವಿಡಿಯೋ ವೈರಲ್ ಆದಾಗಲೂ ನೆಟ್ಟಿಗರು ಗರಂ ಆಗಿದ್ದರು. ಈಗ ಆಲಿಯಾ ಭಟ್ ಕೂಡ ಡೀಪ್‌ಫೇಕ್ ಹಾವಳಿಗೆ ಸಿಲುಕಿದ್ದಾರೆ. ಅವರ ವಿಡಿಯೋ ವೈರಲ್ ಆಗಿದೆ.
ಇನ್ನು ಕೆಲವು ದಿನಗಳ ಹಿಂದೆ ನಟಿ ಕಾಜೋಲ್ ಅವರು ಬಟ್ಟೆ ಬದಲಾಯಿಸುವ ರೀತಿಯ ವಿಡಿಯೋ ವೈರಲ್ ಆಗಿತ್ತು. ಕ್ಯಾಮರಾ ಮುಂದೆ ಬಟ್ಟೆ ಬದಲಾಯಿಸುತ್ತಿರುವ ಮಹಿಳೆಯೊಬ್ಬರ ಮುಖಕ್ಕೆ ಕಾಜೋಲ್ ಅವರ ಮುಖವನ್ನು ಎಡಿಟ್ ಮಾಡಲಾಗಿತ್ತು. ವೈರಲ್ ಆಗಿರುವ ವಿಡಿಯೋವನ್ನು ಫ್ಯಾಕ್ಟ್ ಚೆಕ್ ಮಾಡಿಸಿದ್ದು, ಅಸಲಿ ಮಹಿಳೆಯನ್ನು ಬ್ರಿಟಿಷ್ ಸೋಶಿಯಲ್ ಮೀಡಿಯಾ ಪ್ರಬಾವಿ ರೋಸಿ ಬ್ರೀನ್ ಎಂದು ಗುರುತಿಸಲಾಗಿತ್ತು.
ಈಗ ನಟಿ ಆಲಿಯಾ ಭಟ್ ಕೂಡ ಡೀಪ್‌ಫೇಕ್ ಕಾಟಕ್ಕೆ ಒಳಗಾಗಿದ್ದಾರೆ. ಬೇರೆ ಯಾವುದೋ ಮಹಿಳೆಯ ದೇಹಕ್ಕೆ ಆಲಿಯಾ ಭಟ್ ಅವರ ಮುಖವನ್ನು ಎಡಿಟ್ ಮಾಡಿ ಒಂದು ವಿಡಿಯೋ ವೈರಲ್ ಮಾಡಲಾಗಿದೆ. ಈ ಬಗ್ಗೆ ಆಲಿಯಾ ಭಟ್ ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈ ರೀತಿ ಡೀಪ್‌ಫೇಕ್ ವಿಡಿಯೋ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ. ಅದರ ನಡುವೆಯೂ ಸೈಬರ್ ಕಿಡಿಗೇಡಿಗಳು ಇಂಥ ಕೃತ್ಯ ಮುಂದುವರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಎಲ್ಲವೂ ವೈರಲ್ ಆಗುತ್ತವೆ. ಯಾವುದು ನಿಜ, ಯಾವುದು ಸುಳ್ಳು ಎಂಬುದನ್ನು ತಿಳಿದುಕೊಳ್ಳುವುದಕ್ಕೂ ಮುನ್ನವೇ ಜನರು ಕಮೆಂಟ್ ಮಾಡುತ್ತಾರೆ. ಅದರಿಂದ ಸೆಲೆಬ್ರಿಟಿಗಳಿಗೆ ಹೆಚ್ಚು ತೊಂದರೆ ಆಗುತ್ತಿದೆ. ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ನೋಡಿ ಅನೇಕರು ಕಿಡಿಕಾರಿದ್ದರು. ಕಾಜೋಲ್ ಅವರ ಡೀಪ್‌ಫೇಕ್ ವಿಡಿಯೋ ವೈರಲ್ ಆದಾಗಲೂ ನೆಟ್ಟಿಗರು ಗರಂ ಆಗಿದ್ದರು. ಈಗ ಆಲಿಯಾ ಭಟ್ ಕೂಡ ಡೀಪ್‌ಫೇಕ್ ಹಾವಳಿಗೆ ಸಿಲುಕಿದ್ದಾರೆ. ಅವರ ವಿಡಿಯೋ ವೈರಲ್ ಆಗಿದೆ.
ರಶ್ಮಿಕಾ ಮಂದಣ್ಣ ಅವರು ತುಂಬ ಹಾಟ್ ಆದಂತಹ ಅವತಾರದಲ್ಲಿ ಲಿಫ್ಟ್ ಪ್ರವೇಶಿಸುತ್ತಿರುವ ರೀತಿಯಲ್ಲಿ ಡೀಪ್‌ಫೇಕ್ ವಿಡಿಯೋ ಮಾಡಲಾಗಿತ್ತು. ಕಾಜೋಲ್ ಅವರು ಕ್ಯಾಮೆರಾ ಎದುರಿನಲ್ಲೇ ಬಟ್ಟೆ ಬದಲಿಸುತ್ತಿರುವ ಹಾಗೆ ಡೀಪ್‌ಫೇಕ್ ವಿಡಿಯೋ ವೈರಲ್ ಆಗಿತ್ತು. ರಶ್ಮಿಕಾ ಅವರ ವಿಡಿಯೋ ಮೊದಲ ಬಾರಿಗೆ ವೈರಲ್ ಆದಾಗ ಅಮಿತಾಭ್ ಬಚ್ಚನ್ ಕೂಡ ಟ್ವೀಟ್ ಮಾಡಿ ಕಿಡಿಗೇಡಿಗಳಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದಿದ್ದರು. ವಿಜಯ್ ದೇವರಕೊಂಡ, ನಾಗ ಚೈತನ್ಯ ಮುಂತಾದ ಸೆಲೆಬ್ರಿಟಿಗಳು ಕೂಡ ಗರಂ ಆಗಿದ್ದರು.
ಸದ್ಯ ಆಲಿಯಾ ಭಟ್ ಅವರು ಸಂಸಾರ ಮತ್ತು ಸಿನಿಮಾ ಎರಡಕ್ಕೂ ಸಮಯ ನೀಡುತ್ತಿದ್ದಾರೆ. ನಟಿಯಾಗಿ ಸಖತ್ ಬೇಡಿಕೆ ಇರುವಾಗಲೇ ಅವರು ಮದುವೆ, ಮಕ್ಕಳು ಮಾಡಿಕೊಂಡು ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಅವರು ನಟಿಸಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಆ ಮೂಲಕ ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದ ನಟನೆಗೆ ಅವರು ‘ರಾಷ್ಟ್ರ ಪ್ರಶಸ್ತಿ’ ಪಡೆದು ಮಿಂಚಿದ್ದಾರೆ. ದಿನದಿಂದ ದಿನಕ್ಕೆ ಅವರ ಅಭಿಮಾನಿ ಬಳಗ ದೊಡ್ಡದಾಗುತ್ತಿದೆ. ಡೀಪ್ ಫೇಕ್ ತಡೆಗೆ ಶೀಘ್ರ ಹೊಸ ಕಾನೂನು ಜಾರಿ ಮಾಡುವುದೆಂದು ಇತ್ತೀಚೆಗೆ ಕೇಂದ್ರ ಸರ್ಕಾರ ಹೇಳಿದೆ.
Discover more from Coastal Times Kannada
Subscribe to get the latest posts sent to your email.
Discussion about this post