• About us
  • Contact us
  • Disclaimer
Saturday, August 1, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬೆಳ್ತಂಗಡಿ : ಪ್ರೇಮ ವೈಫಲ್ಯ, ವಿಷ ಕುಡಿದು ಸಾವಿಗೆ ಶರಣಾದ ಕಾಲೇಜು ವಿದ್ಯಾರ್ಥಿನಿ

Coastal Times by Coastal Times
November 28, 2024
in ಕ್ರೈಮ್ ನ್ಯೂಸ್
ಬೆಳ್ತಂಗಡಿ : ಪ್ರೇಮ ವೈಫಲ್ಯ, ವಿಷ ಕುಡಿದು ಸಾವಿಗೆ ಶರಣಾದ ಕಾಲೇಜು ವಿದ್ಯಾರ್ಥಿನಿ
168
VIEWS
WhatsappTelegramShare on FacebookShare on Twitter

ಬೆಳ್ತಂಗಡಿ, ನ.28: ಪ್ರೀತಿಸುತ್ತಿದ್ದ ಯುವಕ ಮದುವೆಯಾಗಲು ನಿರಾಕರಿಸಿದ್ದಾನೆಂದು ನೊಂದುಕೊಂಡ ಅಪ್ರಾಪ್ತ ಯುವತಿಯೊಬ್ಬಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ.

ಹೃಷ್ವಿ(17) ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ತಾಯಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು , ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಯುವಕನೊಬ್ಬ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಬಳಿಕ ಯುವಕ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಿದ್ದಾರೆ.

ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ನಿವಾಸಿ 17 ವರ್ಷದ ಅಪ್ರಾಪ್ತ ವಯಸ್ಸಿನ ಪಿಯುಸಿ ವಿದ್ಯಾರ್ಥಿನಿಯನ್ನು ಚಾರ್ಮಾಡಿ ಗ್ರಾಮದ ಪ್ರವೀಣ್ ಗೌಡ ಎಂಬಾತ ಸಾಮಾಜಿಕ ಜಾಲತಾಣದ ಮುಖಾಂತರ ಪರಿಚಯ ಮಾಡಿಕೊಂಡಿದ್ದ. ಬಳಿಕ ಮದುವೆಯಾಗುವುದಾಗಿ ನಂಬಿಸಿದ್ದ. ವಿದ್ಯಾರ್ಥಿನಿಯು ತನ್ನನ್ನು ಪ್ರವೀಣ್ ಜೊತೆ ಮದುವೆ ಮಾಡಿಕೊಡಿ ಎಂದು ತಾಯಿಯೊಂದಿಗೆ ಹೇಳಿದ್ದಳು. ಯುವಕ ಆಕೆಯ ಜೊತೆ ಸುತ್ತಾಡಿ ಫೋಟೋ ತೆಗೆಸಿಕೊಂಡಿದ್ದ. ಬಳಿಕ ಏಕಾಏಕಿ ನಾನು ನಿನ್ನನ್ನು ಮದುವೆಯಾಗಲ್ಲ. ಸಾಯುವುದಾದರೆ ಸಾಯಿ. ಎಂದು ಹೇಳಿ ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದು, ನೊಂದ ವಿದ್ಯಾರ್ಥಿನಿ ನ.20 ರಂದು ರಾತ್ರಿ ಮನೆಯಲ್ಲಿ ಅಂಗಡಿಯಿಂದ ತಂದಿದ್ದ ಇಲಿಪಾಷಣ ಪೇಸ್ಟ್ ಸೇವಿಸಿದ್ದಾಳೆ ಎನ್ನಲಾಗಿದೆ. ವಿಚಾರ ತಿಳಿದ ಕೂಡಲೇ ಆಕೆಯನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಮನೆಮಂದಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ನ.26 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ವಿದ್ಯಾರ್ಥಿನಿ ತಾಯಿ ಚಾರ್ಮಾಡಿ ಗ್ರಾಮದ ಮರಂಗಾಯಿ ನಿವಾಸಿ ಪ್ರವೀಣ್ (22) ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರಂತೆ ಬೆಳ್ತಂಗಡಿ ಪೊಲೀಸರು‌ BNS 2023 (u/s-107) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯುವಕ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರಕರಣದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವಿದ್ಯಾರ್ಥಿನಿ ಮೊಬೈಲ್ ನಲ್ಲಿದೆ ನಿಗೂಢ ರಹಸ್ಯಗಳು: ಇನ್ನೂ ವಿದ್ಯಾರ್ಥಿನಿ ಆತ್ಮಹತ್ಯೆ ಬಳಿಕ ಮನೆಮಂದಿ ಆಕೆಯ ಬಳಿಯಿಂದ ಮೊಬೈಲ್ ಪರಿಶೀಲನೆ ಮಾಡಿದ್ದು ಈ ವೇಳೆ ಅನೇಕ ಇಬ್ಬರ ನಡುವೆ ನಡೆದ ಮೆಸೇಜ್, ವಿಡಿಯೋ ಕರೆ ಮಾಡಿದ ಚಾಟ್ ಲಿಸ್ಟ್ ,ತಿರುಗಾಡಿದ ಫೋಟೋಗಳು ಹಾಗೂ ಇನ್ನಿತರ ವಿಚಾರಗಳು ಪತ್ತೆಯಾಗಿದೆ. ವಿದ್ಯಾರ್ಥಿನಿ ಜೊತೆ ಯುವಕ ನ.25 ದವರೆಗೂ ಸಂಪರ್ಕದಲ್ಲಿದ್ದು ಮೆಸೇಜ್ ಮೂಲಕ ಮಾತಾನಾಡಿದ್ದಾರೆ. ಈ ವೇಳೆ ನನಗೆ ನೀನು ಬೇಕು ,ನನ್ನಿಂದ ನಿನ್ನನ್ನು ಮರೆತುಬೀಡಲು ಸಾಧ್ಯವಾಗುತ್ತಿಲ್ಲ, ನನ್ನನ್ನು ಮದುವೆಯಾಗು ಎಂದು ವಿದ್ಯಾರ್ಥಿನಿ ಗೋಳಾಡಿದ್ದಾಳೆ ಇದೆಲ್ಲ ಮೆಸೇಜ್ ಹಾಗೆಯೇ ಮೊಬೈಲ್ ನಲ್ಲಿದೆ. ಇದೀಗ ನನ್ನ ಮಗಳ ಸಾವಿಗೆ ನ್ಯಾಯ ಬೇಕು ಅಂತಾ ವಿದ್ಯಾರ್ಥಿನಿ ತಾಯಿ ಕಣ್ಣೀರು ಹಾಕುತ್ತಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

‘ಪಾನಿ’ ಚಿತ್ರದ ಟ್ರೇಲರ್ ಗೆ ಭಾರಿ ಮೆಚ್ಚುಗೆ

Next Post

ಮಂಗಳೂರು ಪೊಲೀಸ್ ಕಮಿಷನರ್ ವರ್ಗಾವಣೆಗೆ ಒತ್ತಾಯಿಸಿ ಡಿವೈಎಫ್ಐ ರಸ್ತೆ ತಡೆ, 30ಕ್ಕೂ ಹೆಚ್ಚು ಮಂದಿ ಪೊಲೀಸರ ವಶಕ್ಕೆ

Related Posts

ಕರಾವಳಿಯ ಕಡಲತಡಿಯಲ್ಲಿ ಗುಂಡಿನ ಸದ್ದು: ಕೊಲೆಗೆ ಕಾರಣವಾಯ್ತಾ ಕೇವಲ 1.5 ಲಕ್ಷ ರೂ?, ಕ್ಯಾನ್ಸರ್ ಪೀಡಿತ ಮಹಿಳೆಯೊಂದಿಗೆ ಐವನ್ ವಾಸ
ಕ್ರೈಮ್ ನ್ಯೂಸ್

ಕರಾವಳಿಯ ಕಡಲತಡಿಯಲ್ಲಿ ಗುಂಡಿನ ಸದ್ದು: ಕೊಲೆಗೆ ಕಾರಣವಾಯ್ತಾ ಕೇವಲ 1.5 ಲಕ್ಷ ರೂ?, ಕ್ಯಾನ್ಸರ್ ಪೀಡಿತ ಮಹಿಳೆಯೊಂದಿಗೆ ಐವನ್ ವಾಸ

August 1, 2026
59
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ
ಕ್ರೈಮ್ ನ್ಯೂಸ್

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ

July 31, 2026
103
Next Post
ಮಂಗಳೂರು ಪೊಲೀಸ್ ಕಮಿಷನರ್ ವರ್ಗಾವಣೆಗೆ ಒತ್ತಾಯಿಸಿ ಡಿವೈಎಫ್ಐ ರಸ್ತೆ ತಡೆ, 30ಕ್ಕೂ ಹೆಚ್ಚು ಮಂದಿ ಪೊಲೀಸರ ವಶಕ್ಕೆ

ಮಂಗಳೂರು ಪೊಲೀಸ್ ಕಮಿಷನರ್ ವರ್ಗಾವಣೆಗೆ ಒತ್ತಾಯಿಸಿ ಡಿವೈಎಫ್ಐ ರಸ್ತೆ ತಡೆ, 30ಕ್ಕೂ ಹೆಚ್ಚು ಮಂದಿ ಪೊಲೀಸರ ವಶಕ್ಕೆ

Discussion about this post

Recent News

ತಾಯಿಗೆ ಏಕೈಕ ಆಸರೆಯಾಗಿದ್ದ ದೀಕ್ಷಾ ದಿಢೀರ್ ಮೆದುಳು ಜ್ವರಕ್ಕೆ ತುತ್ತಾದ ಯುವತಿ, ಚಿಕಿತ್ಸೆಗೆ ತಗಲುತ್ತೆ 20 ಲಕ್ಷ ಖರ್ಚು, ಪ್ರಾಣ ಉಳಿಸಲು ಬೇಕಿದೆ ಸಹೃದಯರ ಆಸರೆ !

ತಾಯಿಗೆ ಏಕೈಕ ಆಸರೆಯಾಗಿದ್ದ ದೀಕ್ಷಾ ದಿಢೀರ್ ಮೆದುಳು ಜ್ವರಕ್ಕೆ ತುತ್ತಾದ ಯುವತಿ, ಚಿಕಿತ್ಸೆಗೆ ತಗಲುತ್ತೆ 20 ಲಕ್ಷ ಖರ್ಚು, ಪ್ರಾಣ ಉಳಿಸಲು ಬೇಕಿದೆ ಸಹೃದಯರ ಆಸರೆ !

August 1, 2026
25
ಕರಾವಳಿಯ ಕಡಲತಡಿಯಲ್ಲಿ ಗುಂಡಿನ ಸದ್ದು: ಕೊಲೆಗೆ ಕಾರಣವಾಯ್ತಾ ಕೇವಲ 1.5 ಲಕ್ಷ ರೂ?, ಕ್ಯಾನ್ಸರ್ ಪೀಡಿತ ಮಹಿಳೆಯೊಂದಿಗೆ ಐವನ್ ವಾಸ

ಕರಾವಳಿಯ ಕಡಲತಡಿಯಲ್ಲಿ ಗುಂಡಿನ ಸದ್ದು: ಕೊಲೆಗೆ ಕಾರಣವಾಯ್ತಾ ಕೇವಲ 1.5 ಲಕ್ಷ ರೂ?, ಕ್ಯಾನ್ಸರ್ ಪೀಡಿತ ಮಹಿಳೆಯೊಂದಿಗೆ ಐವನ್ ವಾಸ

August 1, 2026
59
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ತಾಯಿಗೆ ಏಕೈಕ ಆಸರೆಯಾಗಿದ್ದ ದೀಕ್ಷಾ ದಿಢೀರ್ ಮೆದುಳು ಜ್ವರಕ್ಕೆ ತುತ್ತಾದ ಯುವತಿ, ಚಿಕಿತ್ಸೆಗೆ ತಗಲುತ್ತೆ 20 ಲಕ್ಷ ಖರ್ಚು, ಪ್ರಾಣ ಉಳಿಸಲು ಬೇಕಿದೆ ಸಹೃದಯರ ಆಸರೆ !

ತಾಯಿಗೆ ಏಕೈಕ ಆಸರೆಯಾಗಿದ್ದ ದೀಕ್ಷಾ ದಿಢೀರ್ ಮೆದುಳು ಜ್ವರಕ್ಕೆ ತುತ್ತಾದ ಯುವತಿ, ಚಿಕಿತ್ಸೆಗೆ ತಗಲುತ್ತೆ 20 ಲಕ್ಷ ಖರ್ಚು, ಪ್ರಾಣ ಉಳಿಸಲು ಬೇಕಿದೆ ಸಹೃದಯರ ಆಸರೆ !

August 1, 2026
ಕರಾವಳಿಯ ಕಡಲತಡಿಯಲ್ಲಿ ಗುಂಡಿನ ಸದ್ದು: ಕೊಲೆಗೆ ಕಾರಣವಾಯ್ತಾ ಕೇವಲ 1.5 ಲಕ್ಷ ರೂ?, ಕ್ಯಾನ್ಸರ್ ಪೀಡಿತ ಮಹಿಳೆಯೊಂದಿಗೆ ಐವನ್ ವಾಸ

ಕರಾವಳಿಯ ಕಡಲತಡಿಯಲ್ಲಿ ಗುಂಡಿನ ಸದ್ದು: ಕೊಲೆಗೆ ಕಾರಣವಾಯ್ತಾ ಕೇವಲ 1.5 ಲಕ್ಷ ರೂ?, ಕ್ಯಾನ್ಸರ್ ಪೀಡಿತ ಮಹಿಳೆಯೊಂದಿಗೆ ಐವನ್ ವಾಸ

August 1, 2026
ಮಂಗಳೂರಿನಲ್ಲಿ ಕ್ರೂಸ್ ಸೇವೆ ಆರಂಭಿಸಲು ವಾಟರ್‌ವೇಸ್ ಲೀಜರ್ ಟೂರಿಸಂ ಲಿಮಿಟೆಡ್ ನಿಂದ ತಾತ್ವಿಕ ಒಪ್ಪಿಗೆ

ಮಂಗಳೂರಿನಲ್ಲಿ ಕ್ರೂಸ್ ಸೇವೆ ಆರಂಭಿಸಲು ವಾಟರ್‌ವೇಸ್ ಲೀಜರ್ ಟೂರಿಸಂ ಲಿಮಿಟೆಡ್ ನಿಂದ ತಾತ್ವಿಕ ಒಪ್ಪಿಗೆ

July 31, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d