• About us
  • Contact us
  • Disclaimer
Wednesday, June 3, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉಳ್ಳಾಲ: ಅಸಲಿ ಚಿನ್ನದಂತೆ ಕಾಣುವ ಚಿನ್ನಲೇಪಿತ ನಕಲಿ ಚಿನ್ನಾಭರಣವನ್ನು ತೊಕ್ಕೊಟ್ಟು ಫೈನಾನ್ಸ್‌ನಲ್ಲಿ ಅಡವಿಟ್ಟು ಸಾಲ ಪಡೆಯಲೆತ್ನಿಸಿದವರ ಬಂಧನ

Coastal Times by Coastal Times
November 28, 2025
in ಕ್ರೈಮ್ ನ್ಯೂಸ್
ಉಳ್ಳಾಲ: ಅಸಲಿ ಚಿನ್ನದಂತೆ ಕಾಣುವ ಚಿನ್ನಲೇಪಿತ ನಕಲಿ ಚಿನ್ನಾಭರಣವನ್ನು ತೊಕ್ಕೊಟ್ಟು ಫೈನಾನ್ಸ್‌ನಲ್ಲಿ ಅಡವಿಟ್ಟು ಸಾಲ ಪಡೆಯಲೆತ್ನಿಸಿದವರ ಬಂಧನ
260
VIEWS
WhatsappTelegramShare on FacebookShare on Twitter

ಉಳ್ಳಾಲ: ಅಸಲಿ ಚಿನ್ನದಂತೆ ಕಾಣುವ ಚಿನ್ನಲೇಪಿತ ನಕಲಿ ಚಿನ್ನಾಭರಣವನ್ನು ತೊಕಕೊಟ್ಟಿನ ಫೈನಾನ್ಸ್ ನಲ್ಲಿ ಅಡಮಾನ ಇಟ್ಟು ಸಾಲ ಪಡೆದು ವಂಚನೆ ಮಾಡಿದ ಆರು ಮಂದಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಇವರಿಂದ ಒಟ್ಟು 9 ಕ್ಯಾರೇಟಿನ 141 ಗ್ರಾಂ ನಕಲಿ ಚಿನ್ನಾಭರಣಗಳು, 6 ಮೊಬೈಲ್ ಫೋನ್‌ಗಳು ಹಾಗೂ ರೂ.47,000 ನಗದು ವಶಪಡಿಸಿಕೊಳ್ಳಲಾಗಿದೆ.

ಮಹಾರಾಷ್ಟ್ರ ಮೂಲದ ವಿಕ್ರಮ್ ಅಮೃತ್ ಲಾಲ್ ಬಾಘ್ನಾ(48), ಹರೇಕಳ ನ್ಯೂಪಡ್ಪು ಜಂಕ್ಷನ್ ನಿವಾಸಿ ಮೊಹಮ್ಮದ್ ಇಸ್ಮಾಯಿಲ್(35), ಮತ್ತು ಹರೇಕಳ ನಿವಾಸಿ ಮೊಹಮ್ಮದ್ ಬಿಸ್ಬಾ(30), ಸುರತ್ಕಲ್ ಕಾಟಿಪಳ್ಳ ನಿವಾಸಿ ಉಮರ್ ಫಾರೂಕ್ (52), ಉಳ್ಳಾಲ ದರ್ಗಾ ಬಳಿ ನಿವಾಸಿ ಇಮ್ತಿಯಾಝ್ (39), ಮಂಚಿಲದ ಝಹೀಮ್ ಆಹ್ಮದ್ ಬಂಧಿತ ಆರೋಪಿಗಳು

ನ.22 ರಂದು ಆರೋಪಿ ನೌಫಾಲ್ ಮತ್ತು ಝಹೀಮ್ ಅಹ್ಮದ್ ಎಂಬವರು ತೊಕ್ಕೊಟ್ಟು ದ್ವಾರಕ ಕಾಂಪ್ಲೆಕ್ಸ್‌ನ ಗುರು ರಾಘವೇಂದ್ರ ಫೈನಾನ್ಸ್ – ಇನ್‌ವೆಸ್ಟ್ಮೆಂಟ್ ಸಂಸ್ಥೆಯಲ್ಲಿ ಅಸಲಿ ಚಿನ್ನವನ್ನು ಹೋಲುವ 41 ಗ್ರಾಂ ಚಿನ್ನಾಭರಣವನ್ನು ಝಹೀಮ್ ಅಹ್ಮದ್ ಹೆಸರಿನಲ್ಲಿ ರೂ. 3,55,000 ಸಾಲ ಪಡೆದಿದ್ದರು. ಎರಡು ದಿನ ಕಳೆದ ಬಳಿಕ ಆರೋಪಿ ಇಮ್ತಿಯಾಜ್ ಇದೇ ರೀತಿಯ ನಕಲಿ ಚಿನ್ನಾಭರಣವನ್ನು ಅಡಮಾನ ಇರಿಸಲು ಬಂದಿದ್ದು, ದೊಡ್ಡ ಮೊತ್ತದ ಹಣ ಸಾಲ ಕೇಳಿದ್ದಾರೆ. ಆದರೆ ಅಷ್ಟು ಹಣ ಇಲ್ಲ ಬಳಿಕ ಬನ್ನಿ ಎಂದು ಸಂಸ್ಥೆಯ ಸಿಬ್ಬಂದಿ ತಿಳಿಸಿದ್ದು, ಸಂಸ್ಥೆಯ ಮಾಲಕರಾದ ದಿನೇಶ್ ರೈ ಬಂದಾಗ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆರೋಪಿಗಳು ನೀಡಿದ್ದ ಚಿನ್ನಾಭರಣ ಕಚೇರಿಯಲ್ಲಿ ಪರಿಶೀಲಿಸಿದಾಗ ಚಿನ್ನ ಅಸಲಿ ಎಂದು ಕಂಡು ಬಂದರೂ ಮಂಗಳೂರಿನಲ್ಲಿರುವ ಸ್ನೇಹಿತರಲ್ಲಿ ತೆರಳಿ ತಪಾಸಣೆ ನಡೆಸಿದಾಗನಾಭರಣ ಚಿನ್ನ ಲೇಪಿತವಾದ ನಕಲಿ ಚಿನ್ನಾಭರಣ ಎಂದು ಗೊತ್ತಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಆಧರಿಸಿ ನ. 25ರಂದು ಉಳ್ಳಾಲ ಠಾಣೆಯಲ್ಲಿ ಅಕ್ರ 248/2025 ಕ್ಕೆ ಪ್ರಕರಣ ದಾಖಲಿಸಿದ್ದು, ಫೈನಾನ್ಸ್ ಮಾಲಕರು ನೀಡಿದ ದೂರಿನಂತೆ . ತೊಕ್ಕೊಟ್ಟು ಜಂಕ್ಷನ್ ಬಳಿ ಆರೋಪಿ ಇಮ್ಮಿಯಾಜ್ ಮತ್ತು ಝಹೀಮ್ ಅಹ್ಮದ್ ಅವರನ್ನು ವಶಕ್ಕೆ ಪಡೆದಿದ್ದು, ಪಂಪ್‌ವೆಲ್ ಬಳಿಯಲ್ಲಿ ವಿಕ್ರಮ್ ಅಮೃತ್‌ಲಾಲ್ ಬಾಘಾ ಮತ್ತು ಮೊಹಮ್ಮದ್ ಇಸ್ಮಾಯಿಲ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಕೆಪಿಟಿ ಬಳಿ ಮೊಹಮ್ಮದ್ ಬಿಸ್ಟಾ ಹಾಗೂ ಉಮ್ಮರ್ ಫಾರೂಕ್ ಅವರನ್ನು ಬಂಧಿಸಲಾಗಿದೆ.

ಬಂಧಿತ ವಿಕ್ರಮ್ ಅಮೃತ್‌ಲಾಲ್ ಬಾಘಾ ಅವರ ಬಳಿಯಿಂದ ರೂ.47,000 ನಗದು, ಉಮ್ಮರ್ ಫಾರೂಕ್ ಅವರಿಂದ 9 ಕ್ಯಾರೇಟಿನ 20 ಗ್ರಾಂ ತೂಕದ ಚಿನ್ನದಂತೆ ಕಾಣುವ ಚೈನ್, ಮೊಹಮ್ಮದ್ ಬಿಸ್ಟಾ ಅವರಿಂದ 25 ಗ್ರಾಂ ತೂಕದ 6 ಉಂಗುರಗಳು, ಝಹೀಮ್ ಅಹ್ಮದ್ ಅಡಮಾನ ಇಟ್ಟಿದ್ದ 41 ಗ್ರಾಂ ಚೈನ್, ಇಮ್ಮಿಯಾಜ್ ನೀಡಿದ್ದ 55 ಗ್ರಾಂ ಚೈನ್ ಮತ್ತು ಒಂದು ಬ್ರಾಸ್ ಲೈಟ್ ವಶಪಡಿಸಿಕೊಳ್ಳಲಾಗಿದೆ.

ವಿಕ್ರಮ್ ಅಮೃತ್‌ಲಾಲ್ ಬಾಘಾ ನಕಲಿ ಚಿನ್ನ ಪೂರೈಕೆದಾರ : ಘಟನೆಯಲ್ಲಿ ಬಳಸಲಾಗಿದ್ದ ನಕಲಿ ಚಿನ್ನಾಭರಣಗಳನ್ನು ಪೂರೈಕೆ ಮಾಡುವ ಪ್ರಮುಖ ಆರೋಪಿ ವಿಕ್ರಮ್ ಅಮೃತ್‌ಲಾಲ್ ಬಾಘಾ ಪ್ರಮುಖನಾಗಿದ್ದು, ಈತನ ವಿರುದ್ಧ ಮಹಾರಾಷ್ಟ್ರದಲ್ಲಿಯೂ ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ ಇಂತಹ ತಂಡ ಸಕ್ರೀಯವಾಗಿದ್ದು, ಆರೋಪಿಗಳಲ್ಲಿ ಕೆಲವರು ಇದೆ ರೀತಿ ನಕಲಿ ಚಿನ್ನಾಭರಣವನ್ನು ಅಡಮಾನ ಸಾಲ ಪಡೆದುಕೊಂಡಿರುವ ಕುರಿತು ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು ಹೊರಗುತ್ತಿಗೆ ನೌಕರನಿಂದ ಲಂಚ ಸ್ವೀಕರಿಸುತ್ತಿದ್ದ ಮೂವರು ಲೋಕಾಯುಕ್ತ ಪೊಲೀಸರ ವಶಕ್ಕೆ

Next Post

ರೋಹನ್ ಕಾರ್ಪೊರೇಶನ್ ವತಿಯಿಂದ ಆರೋಗ್ಯ ಇಲಾಖೆಗೆ 100 ಟಾರ್ಚ್‌ಗಳ ವಿತರಣೆ

Related Posts

ವೆಬ್​ ಸೀರೀಸ್ ನೋಡಿ ಒಂದೇ ಕುಟುಂಬದ ನಾಲ್ವರನ್ನು ಕೊಂದ 17ರ ಬಾಲಕ, ಕೊನೆಗೂ ಸಿಕ್ಕಿ ಬಿದ್ದ
ಕ್ರೈಮ್ ನ್ಯೂಸ್

ವೆಬ್​ ಸೀರೀಸ್ ನೋಡಿ ಒಂದೇ ಕುಟುಂಬದ ನಾಲ್ವರನ್ನು ಕೊಂದ 17ರ ಬಾಲಕ, ಕೊನೆಗೂ ಸಿಕ್ಕಿ ಬಿದ್ದ

May 30, 2026
89
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ ಪರಾರಿಯಾಗಿದ್ದ ಆರೋಪಿಗಳ ಬಂಧನ
ಕ್ರೈಮ್ ನ್ಯೂಸ್

ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ ಪರಾರಿಯಾಗಿದ್ದ ಆರೋಪಿಗಳ ಬಂಧನ

May 27, 2026
91
Next Post
ರೋಹನ್ ಕಾರ್ಪೊರೇಶನ್ ವತಿಯಿಂದ ಆರೋಗ್ಯ ಇಲಾಖೆಗೆ 100 ಟಾರ್ಚ್‌ಗಳ ವಿತರಣೆ

ರೋಹನ್ ಕಾರ್ಪೊರೇಶನ್ ವತಿಯಿಂದ ಆರೋಗ್ಯ ಇಲಾಖೆಗೆ 100 ಟಾರ್ಚ್‌ಗಳ ವಿತರಣೆ

Discussion about this post

Recent News

ಬೆಳ್ತಂಗಡಿ: ಕೊಲೆಯಾದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆ: ಮೂವರು ಆರೋಪಿಗಳ ಬಂಧನ

ಬೆಳ್ತಂಗಡಿ: ಕೊಲೆಯಾದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆ: ಮೂವರು ಆರೋಪಿಗಳ ಬಂಧನ

June 2, 2026
66
ಧರ್ಮಸ್ಥಳದಲ್ಲಿ ‘ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಲೋಕಾರ್ಪಣೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಚಾಲನೆ

ಧರ್ಮಸ್ಥಳದಲ್ಲಿ ‘ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಲೋಕಾರ್ಪಣೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಚಾಲನೆ

June 1, 2026
23
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬೆಳ್ತಂಗಡಿ: ಕೊಲೆಯಾದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆ: ಮೂವರು ಆರೋಪಿಗಳ ಬಂಧನ

ಬೆಳ್ತಂಗಡಿ: ಕೊಲೆಯಾದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆ: ಮೂವರು ಆರೋಪಿಗಳ ಬಂಧನ

June 2, 2026
ಧರ್ಮಸ್ಥಳದಲ್ಲಿ ‘ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಲೋಕಾರ್ಪಣೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಚಾಲನೆ

ಧರ್ಮಸ್ಥಳದಲ್ಲಿ ‘ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಲೋಕಾರ್ಪಣೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಚಾಲನೆ

June 1, 2026
ವೆಬ್​ ಸೀರೀಸ್ ನೋಡಿ ಒಂದೇ ಕುಟುಂಬದ ನಾಲ್ವರನ್ನು ಕೊಂದ 17ರ ಬಾಲಕ, ಕೊನೆಗೂ ಸಿಕ್ಕಿ ಬಿದ್ದ

ವೆಬ್​ ಸೀರೀಸ್ ನೋಡಿ ಒಂದೇ ಕುಟುಂಬದ ನಾಲ್ವರನ್ನು ಕೊಂದ 17ರ ಬಾಲಕ, ಕೊನೆಗೂ ಸಿಕ್ಕಿ ಬಿದ್ದ

May 30, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d