• About us
  • Contact us
  • Disclaimer
Saturday, November 28, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮೂಡುಬಿದಿರೆಯ ರೋಟರಿ ವಿದ್ಯಾ ಸಂಸ್ಥೆಗಳ 46ನೇ ವಾರ್ಷಿಕೋತ್ಸವದ ಬಹುಮಾನ ವಿತರಣಾ ಸಮಾರಂಭ.

Coastal Times by Coastal Times
November 28, 2026
in ಕರಾವಳಿ
ಮೂಡುಬಿದಿರೆಯ ರೋಟರಿ ವಿದ್ಯಾ ಸಂಸ್ಥೆಗಳ 46ನೇ ವಾರ್ಷಿಕೋತ್ಸವದ ಬಹುಮಾನ ವಿತರಣಾ ಸಮಾರಂಭ.
1
VIEWS
WhatsappTelegramShare on FacebookShare on Twitter

ಮೂಡುಬಿದಿರೆ: ಇಲ್ಲಿನ ರೋಟರಿ ವಿದ್ಯಾ ಸಂಸ್ಥೆಗಳ 46ನೇ ವಾರ್ಷಿಕೋತ್ಸವದ ಬಹುಮಾನ ವಿತರಣಾ ಸಮಾರಂಭವು ನವೆಂಬರ್ 27, 2026ರಂದು ಬೆಳಿಗ್ಗೆ 9.30ಕ್ಕೆ ಅಮರಾವತಿ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು.

ಶಾಲಾ ಬ್ಯಾಂಡ್‌ ಸೆಟ್ ಹಾಗೂ ವಿದ್ಯಾರ್ಥಿನಿಯರ ಪೂರ್ಣಕುಂಭ ಸ್ವಾಗತದೊಂದಿಗೆ ಗಣ್ಯ ಅತಿಥಿಗಳನ್ನು ಭವ್ಯವಾಗಿ ಬರಮಾಡಿಕೊಳ್ಳಲಾಯಿತು. ಸಂಸ್ಥೆಯ ಅಧ್ಯಕ್ಷರಾದ ನಾರಾಯಣ ಪಿ ಎಂ ಶಾಲಾ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳ ಸುಮಧುರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಮುಖ್ಯ ಅತಿಥಿಗಳಾದ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ (DDPI) ಶ್ರೀ ಶಶಿಧರ್ ಜಿ. ಎಸ್. , ಕೆ.ಇ.ಎಸ್. ಇವರಿಂದ ದೀಪ ಪ್ರಜ್ವಲನೆಯ ಮೂಲಕ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು.

ರೋಟರಿ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಅನಂತಕೃಷ್ಣ ರಾವ್ ಎಲ್ಲರನ್ನು ಸ್ವಾಗತಿಸಿ ತಮ್ಮ ಸ್ವಾಗತ ಭಾಷಣದಲ್ಲಿ , “ಜ್ಞಾನದ ಮಹತ್ವವನ್ನು ಮನದಟ್ಟು ಮಾಡಿ ಮಾತನಾಡುತ್ತಾ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಕಳೆದ 46 ವರ್ಷಗಳಿಂದ ನಮ್ಮ ಸಂಸ್ಥೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ” ಎಂದರು.

ಮುಖ್ಯ ಅತಿಥಿಗಳಾದ ಶ್ರೀ ಶಶಿಧರ್ ಜಿ. ಎಸ್. ಅವರು ತಮ್ಮ ಭಾಷಣದಲ್ಲಿ ” ವಿದ್ಯಾರ್ಥಿಗಳ ಶೈಕ್ಷಣಿಕ ಗುಣಾಂಕದ ಜೊತೆಗೆ ಭಾವನಾತ್ಮಕ ಗುಣಾಂಕವನ್ನು ಪರಿಗಣಿಸಬೇಕೆಂದು ಶಿಕ್ಷಕರಿಗೆ ಕರೆಯಿತ್ತರು. ಕರಾವಳಿ ಪ್ರದೇಶವು ಅನೇಕ ವೈವಿಧ್ಯಗಳ ತಾಣವಾಗಿದ್ದು, ಇಲ್ಲಿನ ಮಣ್ಣಿನಲ್ಲಿಯೇ ವಿಶೇಷವಾದ ಪ್ರತಿಭೆ , ಪರಿಶ್ರಮದ ಸಾಧನಾ ಶಕ್ತಿ , ಸಂಸ್ಕಾರ ಮತ್ತು ಕಾರ್ಣಿಕತೆ ಇದೆ. ಆದ್ದರಿಂದಲೇ ಕರಾವಳಿ ಜಿಲ್ಲೆಗಳು ಶಿಕ್ಷಣ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿವೆ. ಶಿಕ್ಷಕರು ಮತ್ತು ಪೋಷಕರು ಇಂದಿನ ಮಕ್ಕಳಿಗೆ ಅವರ ಅಭಿರುಚಿಗೆ ತಕ್ಕಂತೆ ಪ್ರೀತಿಯಿಂದ ಪ್ರೋತ್ಸಾಹ , ಮಾರ್ಗದರ್ಶನ ನೀಡುವಂತೆ ಕರೆ ಇತ್ತು , ಸಮೃದ್ಧಿಯ ಸಂಕೇತವಾದ ತುಳು ಭಾಷೆಯ ಪೊಲಿ ಪೊಲಿ ಎಂಬ ವಾಕ್ಯದೊಂದಿಗೆ ರೋಟರಿ ವಿದ್ಯಾಸಂಸ್ಥೆಗಳಿಗೆ ಶುಭ ಹಾರೈಸಿದರು.

ಗೌರವ ಅತಿಥಿಗಳಾಗಿ ಆಗಮಿಸಿದ್ದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಹಾಗೂ ಉದ್ಯಮಿಗಳಾದ ಶ್ರೀ ಅಕ್ಷಯ್ ಜೈನ್ ಅವರು ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕುತ್ತಾ, , “ನಮ್ಮನ್ನು ಹುಡುಕಿಕೊಂಡು ಬರುವ ಅವಕಾಶಗಳನ್ನು ಎಂದಿಗೂ ಕೈಬಿಡಬಾರದು. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಬೆಳೆಯಬೇಕೆಂದು” ಅಭಿಪ್ರಾಯಪಟ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಮಾತುಗಳನ್ನಾಡಿದರು.

ವಿದ್ಯಾರ್ಥಿಗಳ ಸೃಜನಶೀಲ ಕಲಾಕೃತಿಗಳು ಹಾಗೂ ಕರಕುಶಲ ವಸ್ತುಗಳನ್ನು ಒಳಗೊಂಡ ಕಲಾ ಮತ್ತು ಕರಕುಶಲ ಪ್ರದರ್ಶನವನ್ನು ಇಲಾಖಾ ವರಿಷ್ಠಾಧಿಕಾರಿ ಶಶಿಧರ್ ಜಿ ಯಸ್ ಅನಾವರಣಗೊಳಿಸಿದರು.
ವಿದ್ಯಾರ್ಥಿಗಳು ರಚಿಸಿದ ಸುಂದರ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಸಿದ್ಧತೆ ಹಾಗೂ ಸಂಯೋಜನೆಯಲ್ಲಿ ರೋಟರಿ ವಿದ್ಯಾ ಸಂಸ್ಥೆಗಳ ಶಿಕ್ಷಕರಾದ ಮೋಹನ್, ಗೋಪಾಲಕೃಷ್ಣ ಜಿ ಕೆ , ಮಹೇಶ್, ಜಯಪ್ರಕಾಶ್, ಶಕುಂತಲಾ, ಮಾಲತಿ ಹಾಗೂ ಗಾಯತ್ರಿ ಅವರು ಉಸ್ತುವಾರಿ ವಹಿಸಿದ್ದರು

ನಂತರ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸಂಸ್ಥೆಯ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಗಣ್ಯರಿಂದ ವಿತರಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ನಾರಾಯಣ ಪಿ. ಎಂ. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯಲ್ಲಿ ನೀಡಲಾಗುತ್ತಿರುವ ಗುಣಮಟ್ಟದ ಶಿಕ್ಷಣ ಹಾಗೂ ಸತತವಾಗಿ ಶೇ. 100ರಷ್ಟು ಫಲಿತಾಂಶ ದಾಖಲಿಸುತ್ತಿರುವ ಸಾಧನೆಯ ಕುರಿತು ಹರ್ಷ ವ್ಯಕ್ತಪಡಿಸಿ ಈ ಸಾಧನೆಗೆ ಕಾರಣರಾದ ಶಿಕ್ಷಕ ವೃಂದವನ್ನು ಅಭಿನಂದಿಸಿದರು ಮತ್ತು ಅತಿಥಿಗಳ ನುಡಿಗಳನ್ನು ಅನುಮೋದಿಸಿ ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಪ್ರವೀಣ್‌ಚಂದ್ರ ಜೈನ್, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ತಿಲಕ ಅನಂತವೀರ ಜೈನ್, ರೋಟರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್ , ರೋಟರಿ ಕೇಂದ್ರೀಯ ಶಾಲೆಯ ಪ್ರಾಂಶುಪಾಲರಾದ ಲಕ್ಷ್ಮೀ ಮರಾಠೆ , ಉಪಪ್ರಾಂಶುಪಾಲೆ ವೈಶಾಲಿ, ಹಿರಿಯ ಸಂಯೋಜಕರಾದ ಗಜಾನನ ಮರಾಠೆ , ಸಂಯೋಜಕರಾದ ಪ್ರಮೀಳಾ ಸುವರ್ಣ , ಮೂರು ವಿಭಾಗಗಳ ವಿದ್ಯಾರ್ಥಿ ನಾಯಕರುಗಳಾದ ಲೇಖನ್ ಶೆಟ್ಟಿ , ಈಶಾ ಪ್ರದೀಪ್ ದೇವಾಡಿಗ, ಜೆನಿಲಿಯಾ ಪಿಂಟೊ , ಪ್ರತ್ಯೂಷಾ ಉಪಸ್ಥಿತರಿದ್ದರು.

ರೋಟರಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ರೋಟರಿ ಕ್ಲಬ್ ನ ಸದಸ್ಯರಾದ ರತ್ನಾಕರ್, ನಾಗರಾಜ್ ಬಿ., ಮೋಹನ್ ಭಟ್, ಜಯರಾಜ್ ಕಂಬಳಿ , ಸಂದೀಪ್ ನಾಯಕ್, ರಾಮಕೃಷ್ಣ, ರವಿ ಕೋಟ್ಯಾನ್, ಸಚಿನ್ ಹಾಗೂ ರೂಪೇಶ್ , ಇನ್ನರ್ ವೀಲ್ ಸಂಸ್ಥೆಯ ಸಹನ ನಾಗರಾಜ್ ಮತ್ತು ಸರಿತಾ ಆಶೀರ್ವಾದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರೋಟರಿ ವಿದ್ಯಾ ಸಂಸ್ಥೆಗಳ ಉಪನ್ಯಾಸಕರು , ಶಿಕ್ಷಕರು, ಆಡಳಿತಾಧಿಕಾರಿ , ವ್ಯವಸ್ಥಾಪಕರು , ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ರೋಟರಿ ಸಂಸ್ಥೆಯಲ್ಲಿ ಸುಮಾರು 30 ವರ್ಷಕ್ಕಿಂತಲೂ ಅಧಿಕ ಸೇವೆ ಸಲ್ಲಿಸಿ ತಮ್ಮ ನಿವೃತ್ತಿಯ ಬಳಿಕವೂ ಸಂಸ್ಥೆಯ ಸೇವೆಯಲ್ಲಿ ನಿರತರಾಗಿದ್ದ ಇತ್ತೀಚೆಗೆ ನಿಧನ ಹೊಂದಿರುವ ಶಿಕ್ಷಕೇತರ ಸಿಬ್ಬಂದಿ ದೇವಪ್ಪಣ್ಣನ ಕುಟುಂಬಕ್ಕೆ , ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪೋಷಕರಾದ ಸೌಮ್ಯ ಮತ್ತು ಪ್ರಶಾಂತ್ ಇವರು ಕೊಡ ಮಾಡಿದ ರೂಪಾಯಿ ಹದಿನೈದು ಸಾವಿರ ಧನಸಹಾಯವನ್ನು ಕಾರ್ಯಕ್ರಮದಲ್ಲಿ ಹತ್ತಾಂತರಿಸಿರುವುದು ವಿಶೇಷವಾಗಿತ್ತು

ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಪ್ರವೀಣ್‌ಚಂದ್ರ ಜೈನ್ ವಂದನಾರ್ಪಣೆ ಸಲ್ಲಿಸಿದರು.

ಮುಖ್ಯ ಅತಿಥಿಗಳನ್ನು ಶಿಕ್ಷಕರಾದ ವಿನಯ ಹಾಗೂ ಉಪನ್ಯಾಸಕರಾದ ಗೌರಿಶಂಕರ್ ಪಿ. ಎಸ್. ಪರಿಚಯಿಸಿದರು. ಬಹುಮಾನ ವಿಜೇತರ ಪಟ್ಟಿಯನ್ನು ಸಂಸ್ಥೆಗಳ ಶಿಕ್ಷಕರಾದ ಸುಮಾ ರಂಜಿತ್, ಶರ್ಮಿಳಾ ಅಮೀನ್, ಪೃಥ್ವಿ ಡಿ. ಯು., ನಿವೇದಿತಾ, ನಮೃತಾ, ಸುಜಾತಾ, ದೀಪಾ ಕೆ. ಕುಮಾರಿ, ಪ್ರೇಮಲತಾ, ಸುಗುಣ, ದೀಕ್ಷಿತ್ ಹಾಗೂ ವಿದ್ಯಾಶ್ರೀ ಜೈನ್ ವಾಚಿಸಿದರು.

ರೋಟರಿ ಕೇಂದ್ರೀಯ ಶಾಲೆಯ ಶಿಕ್ಷಕಿ ವಿದ್ಯಾ ಹಾಗೂ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ವಿದೀಪ್ ಕಾರ್ಯಕ್ರಮ ನಿರೂಪಿಸಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

25 ವರ್ಷಗಳ ನಿರಂತರ ಸಾಂಸ್ಕೃತಿಕ ಸೇವೆಯ ಮೈಲುಗಲ್ಲಿನ ಸಂಭ್ರಮ; ಡಿಸೆಂಬರ್ 6ರಂದು ಕಲಾಂಗಣದಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್‌ನ್ಯಾಶನಲ್ ಶೋ’

Related Posts

25 ವರ್ಷಗಳ ನಿರಂತರ ಸಾಂಸ್ಕೃತಿಕ ಸೇವೆಯ ಮೈಲುಗಲ್ಲಿನ ಸಂಭ್ರಮ; ಡಿಸೆಂಬರ್ 6ರಂದು ಕಲಾಂಗಣದಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್‌ನ್ಯಾಶನಲ್ ಶೋ’
ಕರಾವಳಿ

25 ವರ್ಷಗಳ ನಿರಂತರ ಸಾಂಸ್ಕೃತಿಕ ಸೇವೆಯ ಮೈಲುಗಲ್ಲಿನ ಸಂಭ್ರಮ; ಡಿಸೆಂಬರ್ 6ರಂದು ಕಲಾಂಗಣದಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್‌ನ್ಯಾಶನಲ್ ಶೋ’

November 27, 2026
15
ಮಂಗಳೂರು ನೈಟ್ ಲೈಫ್‌ಗೆ ಗ್ರೀನ್ ಸಿಗ್ನಲ್: 11.45ರ ವರೆಗೂ ಹೊಟೇಲ್, ರೆಸ್ಟೋರೆಂಟ್ ನಡೆಸಲು ಅವಕಾಶ, ಕಮಿಷನರ್ ಸುಧೀರ್ ರೆಡ್ಡಿ ಆದೇಶ
ಕರಾವಳಿ

ಮಂಗಳೂರು ನೈಟ್ ಲೈಫ್‌ಗೆ ಗ್ರೀನ್ ಸಿಗ್ನಲ್: 11.45ರ ವರೆಗೂ ಹೊಟೇಲ್, ರೆಸ್ಟೋರೆಂಟ್ ನಡೆಸಲು ಅವಕಾಶ, ಕಮಿಷನರ್ ಸುಧೀರ್ ರೆಡ್ಡಿ ಆದೇಶ

November 24, 2026
46

Discussion about this post

Recent News

ಮೂಡುಬಿದಿರೆಯ ರೋಟರಿ ವಿದ್ಯಾ ಸಂಸ್ಥೆಗಳ 46ನೇ ವಾರ್ಷಿಕೋತ್ಸವದ ಬಹುಮಾನ ವಿತರಣಾ ಸಮಾರಂಭ.

ಮೂಡುಬಿದಿರೆಯ ರೋಟರಿ ವಿದ್ಯಾ ಸಂಸ್ಥೆಗಳ 46ನೇ ವಾರ್ಷಿಕೋತ್ಸವದ ಬಹುಮಾನ ವಿತರಣಾ ಸಮಾರಂಭ.

November 28, 2026
1
25 ವರ್ಷಗಳ ನಿರಂತರ ಸಾಂಸ್ಕೃತಿಕ ಸೇವೆಯ ಮೈಲುಗಲ್ಲಿನ ಸಂಭ್ರಮ; ಡಿಸೆಂಬರ್ 6ರಂದು ಕಲಾಂಗಣದಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್‌ನ್ಯಾಶನಲ್ ಶೋ’

25 ವರ್ಷಗಳ ನಿರಂತರ ಸಾಂಸ್ಕೃತಿಕ ಸೇವೆಯ ಮೈಲುಗಲ್ಲಿನ ಸಂಭ್ರಮ; ಡಿಸೆಂಬರ್ 6ರಂದು ಕಲಾಂಗಣದಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್‌ನ್ಯಾಶನಲ್ ಶೋ’

November 27, 2026
15
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮೂಡುಬಿದಿರೆಯ ರೋಟರಿ ವಿದ್ಯಾ ಸಂಸ್ಥೆಗಳ 46ನೇ ವಾರ್ಷಿಕೋತ್ಸವದ ಬಹುಮಾನ ವಿತರಣಾ ಸಮಾರಂಭ.

ಮೂಡುಬಿದಿರೆಯ ರೋಟರಿ ವಿದ್ಯಾ ಸಂಸ್ಥೆಗಳ 46ನೇ ವಾರ್ಷಿಕೋತ್ಸವದ ಬಹುಮಾನ ವಿತರಣಾ ಸಮಾರಂಭ.

November 28, 2026
25 ವರ್ಷಗಳ ನಿರಂತರ ಸಾಂಸ್ಕೃತಿಕ ಸೇವೆಯ ಮೈಲುಗಲ್ಲಿನ ಸಂಭ್ರಮ; ಡಿಸೆಂಬರ್ 6ರಂದು ಕಲಾಂಗಣದಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್‌ನ್ಯಾಶನಲ್ ಶೋ’

25 ವರ್ಷಗಳ ನಿರಂತರ ಸಾಂಸ್ಕೃತಿಕ ಸೇವೆಯ ಮೈಲುಗಲ್ಲಿನ ಸಂಭ್ರಮ; ಡಿಸೆಂಬರ್ 6ರಂದು ಕಲಾಂಗಣದಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್‌ನ್ಯಾಶನಲ್ ಶೋ’

November 27, 2026
ಮಂಗಳೂರು; ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯಾರ್ಥಿಗೆ ಖಾಸಗಿ ಬಸ್ ಡಿಕ್ಕಿ ; ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಶಾಲಾ ಬಾಲಕ ಮೃತ್ಯು

ಮಂಗಳೂರು; ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯಾರ್ಥಿಗೆ ಖಾಸಗಿ ಬಸ್ ಡಿಕ್ಕಿ ; ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಶಾಲಾ ಬಾಲಕ ಮೃತ್ಯು

November 26, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d