ಟೊಕಿಯೋ: ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ತಂಡ ಬುಧವಾರ ಶುಭಾರಂಭ ಮಾಡಿದ್ದು, ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪಿವಿ ಸಿಂಧು ಭರ್ಜರಿ ಜಯ ಸಾಧಿಸಿದ್ದಾರೆ.
ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಪಿವಿ ಸಿಂಧು ಹಾಂಕಾಂಗ್ ನ ನ್ಗಾನ್ ಯಿ ಚೆಯುಂಗ್ ವಿರುದ್ಧ 21-9, 21-16 ನೇರ ಸೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.
ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಗಿದ್ದ ಪಿವಿ ಸಿಂಧು ಮೊದಲ ಸೆಟ್ ನಲ್ಲಿ 21-9ರಲ್ಲಿ ಮುನ್ನಡೆ ಸಾಧಿಸಿದರು. ಬಳಿಕ 2ನೇ ಸೆಟ್ ನಲ್ಲಿ ನ್ಗಾನ್ ಯಿ ಚೆಯುಂಗ್ ಕೊಂಚ ವಿರೋಧ ತೋರಿದರಾದೂ 2ನೇ ಸೆಟ್ ಅನ್ನೂ ಕೂಡ ಸಿಂಧು 21-16 ಅಂತರದಲ್ಲಿ ತಮ್ಮದಾಗಿಸಿಕೊಂಡು ಜಯ ಸಾಧಿಸಿ ಟೂರ್ನಿಯ ಮುಂದಿನ ಹಂತಕ್ಕೆ ಮುನ್ನಡೆದಿದ್ದಾರೆ.
Discussion about this post