• About us
  • Contact us
  • Disclaimer
Tuesday, April 28, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಎನ್‌ಸಿ‌ ಕ್ಲಾಸಿಕ್’ ಜಾವೆಲಿನ್ ಸ್ಪರ್ಧೆಯಲ್ಲಿ ‘ನೀರಜ್ ಚೋಪ್ರಾ ಚಾಂಪಿಯನ್

Coastal Times by Coastal Times
July 6, 2025
in ಕ್ರೀಡಾ ಸುದ್ದಿ
ಎನ್‌ಸಿ‌ ಕ್ಲಾಸಿಕ್’ ಜಾವೆಲಿನ್ ಸ್ಪರ್ಧೆಯಲ್ಲಿ ‘ನೀರಜ್ ಚೋಪ್ರಾ ಚಾಂಪಿಯನ್
15
VIEWS
WhatsappTelegramShare on FacebookShare on Twitter

ಬೆಂಗಳೂರು: ವರ್ಲ್ಡ್ ಅಥ್ಲೆಟಿಕ್ಸ್‌ನಿಂದ ಅನುಮೋದಿತ ಚೊಚ್ಚಲ‌ ಆವೃತ್ತಿಯ ಎನ್‌ಸಿ‌ ಕ್ಲಾಸಿಕ್‌ ಪಂದ್ಯಾವಳಿಯಲ್ಲಿ ಭಾರತೀಯ ಜಾವೆಲಿನ್ ತಾರೆ ನೀರಜ್ ಚೋಪ್ರಾ ಚಾಂಪಿಯನ್ ಆಗಿ‌ ಹೊರಹೊಮ್ಮಿದ್ದಾರೆ. 86.18 ಮೀಟರ್ ದೂರ ಎಸೆಯುವ ಮೂಲಕ ನೀರಜ್ ಚೋಪ್ರಾ ಅಗ್ರಸ್ಥಾನ ಗಳಿಸಿದರು.

ಅಲ್ಲದೇ, ತಮ್ಮ ಹೆಸರಿನಲ್ಲೇ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸ್ಪರ್ಧೆಯನ್ನು ಆಯೋಜಿಸಿ, ಅದರಲ್ಲಿಯೇ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹಿರಿಮೆಗೂ ಪಾತ್ರರಾದರು. 2015ರ ವಿಶ್ವ ಚಾಂಪಿಯನ್ ಕೀನ್ಯಾದ ಜೂಲಿಯಸ್ ಯೆಗೊ 84.51 ಮೀಟರ್ ಅತ್ಯುತ್ತಮ ಎಸೆತದೊಂದಿಗೆ ದ್ವಿತೀಯ ಸ್ಥಾನ‌ ಪಡೆದರೆ, 84.34 ಮೀಟರ್ ದೂರವನ್ನು ದಾಖಲಿಸಿದ ಶ್ರೀಲಂಕಾದ ರುಮೇಶ್ ಪತಿರಾಜ್ ತೃತೀಯ ಸ್ಥಾನ ಗಿಟ್ಟಿಸಿಕೊಂಡರು.

ಈ ವರ್ಷದ ಆರಂಭದಲ್ಲಿ ದೋಹಾ ಡೈಮಂಡ್ ಲೀಗ್‌ನಲ್ಲಿ 90 ಮೀಟರ್ ಗುರಿಯನ್ನು ತಲುಪಿದ್ದ ನೀರಜ್ ಚೋಪ್ರಾ ಅವರು ತವರು ನೆಲದಲ್ಲಿ ಆರಂಭದಿಂದಲೂ ಸಹ ಗೆಲುವಿನ ಫೇವರಿಟ್ ಎನಿಸಿದ್ದರು. ಮೊದಲ ಪ್ರಯತ್ನದಲ್ಲಿ ನೀರಜ್ ಫೌಲ್ ಮಾಡಿದರೆ, ಯೆಗೊ 79.97 ಮೀಟರ್ ಎಸೆತದೊಂದಿಗೆ ಆರಂಭಿಕ ಮುನ್ನಡೆ ಸಾಧಿಸಿದರು.

ಆದರೆ ಎರಡನೇ ಪ್ರಯತ್ನದಲ್ಲಿ 82.99 ಮೀಟರ್ ಎಸೆತದೊಂದಿಗೆ ನೀರಜ್ ಮುನ್ನಡೆ ಗಳಿಸಿದರು. ಆದಾಗ್ಯೂ ಸಹ ರುಮೇಶ್ ಪತಿರಾಜ್ ತನ್ನ ಮೂರನೇ ಪ್ರಯತ್ನದಲ್ಲಿ 84.34 ಮೀಟರ್ ದೂರ ಎಸೆಯುವ ಮೂಲಕ ನೀರಜ್‌ಗೆ ಟಕ್ಕರ್ ನೀಡಿದರು.

ಆದರೆ ನಂತರದ ಪ್ರಯತ್ನದಲ್ಲಿ 86.18 ಮೀಟರ್ ದೂರ ಸಾಧಿಸುವ ಮೂಲಕ‌ ನೀರಜ್ ಕೊನೆಯವರೆಗೂ ಅಜೇಯರಾಗುಳಿದರು.ಚೋಪ್ರಾ ಹೊರತುಪಡಿಸಿ, ಭಾರತದ ಸಚಿನ್ ಯಾದವ್ (82.33 ಮೀ) ಮತ್ತು ಯಶ್ವೀರ್ ಸಿಂಗ್ (79.65 ಮೀ) ಕೂಡ ಕೊನೆಯ ಎಂಟನೇ ಹಂತಕ್ಕೆ ತಲುಪಿದರು. ನಾಲ್ಕನೇ ಪ್ರಯತ್ನದಲ್ಲಿ ಯೆಗೊ ತನ್ನ ಋತುವಿನ ಅತ್ಯುತ್ತಮ ಎಸೆತದೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿಯುವವರೆಗೂ ಯಾದವ್ ಪದಕ ಸ್ಪರ್ಧೆಯಲ್ಲಿದ್ದರು.

ಮತ್ತೊಂದೆಡೆ, 2016ರ ಒಲಿಂಪಿಕ್ಸ್ ಚಾಂಪಿಯನ್ ಜರ್ಮನಿಯ ಥಾಮಸ್ ರೋಹ್ಲರ್ ಮೊದಲ ಮೂರು ಥ್ರೋಗಳನ್ನು ಮೀರಿ ಹೋಗಲು ವಿಫಲವಾದರು. ಮೊದಲ ಪ್ರಯತ್ನದಲ್ಲಿ ಕೇವಲ 75.85 ಮೀಟರ್ ದೂರವನ್ನು ದಾಟಲು ಸಾಧ್ಯವಾದ ತೋಹ್ಲರ್, ನಂತರದ ಸತತ ಎರಡು ಪ್ರಯತ್ನದಲ್ಲಿ ಫೌಲ್ ಮಾಡಿದರು.

ಪ್ರಶಸ್ತಿ ಗೆದ್ದ ನಂತರ ಮಾತನಾಡಿದ ಚೋಪ್ರಾ, “ನಾನು ಎರಡು ಈವೆಂಟ್‌ಗಳಲ್ಲಿ ಭಾಗವಹಿಸಿದ ನಂತರ ಇಲ್ಲಿಗೆ ಬಂದಿದ್ದೆ. ತವರಿನ‌ ಅಭಿಮಾನಿಗಳು‌ ನನ್ನ ಗೆಲುವನ್ನು ನಿರೀಕ್ಷಿಸಿದ್ದರು ಎಂದು ನನಗೆ ತಿಳಿದಿದ್ದರಿಂದ ಇದು ನನಗೆ ಮಾನಸಿಕವಾಗಿ ಸಾಕಷ್ಟು ಕಠಿಣವಾಗಿತ್ತು” ಎಂದರು. ಪಂದ್ಯಾವಳಿಯನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ನೀರಜ್ ಚೋಪ್ರಾ ಧನ್ಯವಾದ ಅರ್ಪಿಸಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಪುತ್ತೂರು: ಅತ್ಯಾಚಾರ, ವಂಚನೆ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿ ಶ್ರೀಕೃಷ್ಣ ಜೆ.ರಾವ್ ಮೈಸೂರಿನಲ್ಲಿ ಪೊಲೀಸ್‌ ವಶಕ್ಕೆ

Next Post

ಮಂಗಳೂರು: ವಿದೇಶದಲ್ಲಿ ಉದ್ಯೋಗದ ವೀಸಾ ಆಮಿಷವೊಡ್ಡಿ 289 ಜನರಿಗೆ 4.50 ಕೋಟಿ ರೂ.ವಂಚನೆ; ಮುಂಬಯಿ ಮೂಲದ ಇಬ್ಬರು ಆರೋಪಿಗಳ ಬಂಧನ

Related Posts

IPL 2026: ಬೆಂಗಳೂರು(ಆರ್‌ಸಿಬಿ)ರೂ.16,705 ಕೋಟಿಗೆ ಮತ್ತು ರಾಜಸ್ಥಾನ್ ರಾಯಲ್ಸ್ ರೂ.15,290 ಕೋಟಿಗೆ ಸೇಲ್! ಹೊಸ ಮಾಲೀಕರು ಇವರು
ಕ್ರೀಡಾ ಸುದ್ದಿ

IPL 2026: ಬೆಂಗಳೂರು(ಆರ್‌ಸಿಬಿ)ರೂ.16,705 ಕೋಟಿಗೆ ಮತ್ತು ರಾಜಸ್ಥಾನ್ ರಾಯಲ್ಸ್ ರೂ.15,290 ಕೋಟಿಗೆ ಸೇಲ್! ಹೊಸ ಮಾಲೀಕರು ಇವರು

March 26, 2026
20
ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!
ಕ್ರೀಡಾ ಸುದ್ದಿ

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

March 9, 2026
24
Next Post
ಮಂಗಳೂರು: ವಿದೇಶದಲ್ಲಿ ಉದ್ಯೋಗದ ವೀಸಾ ಆಮಿಷವೊಡ್ಡಿ 289 ಜನರಿಗೆ 4.50 ಕೋಟಿ ರೂ.ವಂಚನೆ; ಮುಂಬಯಿ ಮೂಲದ ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ವಿದೇಶದಲ್ಲಿ ಉದ್ಯೋಗದ ವೀಸಾ ಆಮಿಷವೊಡ್ಡಿ 289 ಜನರಿಗೆ 4.50 ಕೋಟಿ ರೂ.ವಂಚನೆ; ಮುಂಬಯಿ ಮೂಲದ ಇಬ್ಬರು ಆರೋಪಿಗಳ ಬಂಧನ

Discussion about this post

Recent News

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

April 28, 2026
0
ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್

ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್

April 28, 2026
10
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

April 28, 2026
ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್

ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್

April 28, 2026
ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!

ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!

April 27, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d