ಟೋಕಿಯೊ: ಟೋಕಿಯೊ ಒಲಂಪಿಕ್ಸ್‌ನಲ್ಲಿ ಜಪಾನ್‌ನ ಮೊಮಿಜಿ ನಿಶಿಯಾ ಅವರು ತೀವ್ರ ಸಂಚಲನ ಸೃಷ್ಟಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ.
ಟೋಕಿಯೊ ಒಲಂಪಿಕ್ಸ್‌ನಲ್ಲಿ ಹೊಸದಾಗಿ ಆರಂಭಿಸಲಾದ ಸ್ಕೇಟ್ ಬೋರ್ಡಿಂಗ್‌ನಲ್ಲಿ ನಿಶಿಯಾ ಚಿನ್ನ ಗೆದ್ದಿದ್ದಾರೆ ಟ್ರಿಕ್ಸ್ ವಿಭಾಗದಲ್ಲಿ 15.26 ಅಂಕಗಳಿಸಿರುವ ನಿಶಿಯಾ ಅವರ ವಯಸ್ಸು ಕೇವಲ 13 ವರ್ಷ. ಮೊಮಿಜಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಮೊದಲ ಮಹಿಳಾ ಸ್ಕೇಟ್ ಬೋರ್ಡಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇದಕ್ಕೂ ಮೊದಲು ಬ್ರೆಜಿಲ್‌ನ ರೆಸಾ ಲೀಲ್ ಚಿನ್ನದ ಪದಕ ಗೆದ್ದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದರು. ಅವರು 13 ವರ್ಷ 203 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಅಮೆರಿಕಾದ ಡೈವರ್ ಮಾರ್ಜೋರಿ ಗೆಸ್ಟ್ರಿಂಗ್ 1936ರ ಬರ್ಲಿನ್ ಕ್ರೀಡಾಕೂಟದಲ್ಲಿ 13 ವರ್ಷ 168 ದಿನಗಳ ವಯಸ್ಸಿನಲ್ಲಿ ಒಲಿಂಪಿಕ್ ಪದಕ ಗೆದ್ದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post