ಇದೀಗ ಕರ್ನಾಟಕ ಮೂಲದ ಮಹಿಳೆಯ 7ನೇ ಡಿವೋರ್ಸ್ ಪ್ರಕರಣ ನ್ಯಾಯಧೀಶರನ್ನೇ ಚಕಿತಗೊಳಿಸಿದೆ. ಒಂದೊಂದು ವರ್ಷಕ್ಕೆ ಒಬ್ಬರನ್ನು ಮದುವೆಯಾಗಿರುವ ಈಕೆ, ಬಳಿಕ ವಿಚ್ಚೇದ ಪಡೆದುಕೊಂಡಿದ್ದಾಳೆ. ಎಲ್ಲಾ ಮಾಜಿ ಪತಿಯರ ವಿರುದ್ದ ಚಿತ್ರಹಿಂಸೆ, ಮಾನಸಿಕ ಹಾಗೂ ದೈಹಿಕ ಹಿಂಸೆ, ಕ್ರೌರ್ಯ ಪ್ರಕರಣ ದಾಖಲಿಸಿ ಬೆದರಿಸಿದ್ದಾಳೆ. ಪರಿಣಾಮ 6 ಮಾಜಿ ಪತಿಗಳು ಈಕೆಗೆ ಹಣ ನೀಡಿ ಕೇಸ್ ಸೆಟ್ಲ್‌ಮಾಡಿಕೊಂಡಿದ್ದಾರೆ. ಆದರೆ 7ನೇ ಪತಿ ಇದೀಗ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಕೋರ್ಟ್ ವಿಚಾರಣೆಯ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಮಹಿಳೆ 6 ತಿಂಗಳಿಂದ ಒಂದು ವರ್ಷದೊಳಗೆ ಗಂಡನ ಬದಲಾಯಿಸಿದ್ದಾಳೆ. ಹಳೇ ಗಂಡನಿಗೆ ಪಾದಕ್ಕೆ ಟಾಟಾ ಹೇಳಿ ಹೊಸ ಗಂಡನಿಗೆ ಒಕೆ ಎಂದಿದ್ದಾಳೆ. ಪ್ರತಿ ಬಾರಿ ಗಂಡನ ವಿರುದ್ಧ ಸೆಕ್ಷನ್ 498ಎ ಪ್ರಕರಣ ದಾಖಲಿಸಿ ಚಿತ್ರ ಹಿಂಸೆ ನೀಡಿದ್ದಾಳೆ. ಕೋರ್ಟ್, ಪ್ರಕರಣ, ಶಿಕ್ಷೆಗೆ ಬೆದರಿದ ಮಾಜಿ ಪತಿಗಳು ಸೆಟ್ಲ್‌ಮೆಂಟ್ ಮಾಡಿದ್ದಾರೆ. ದುಬಾರಿ ಹಣ ನೀಡಿ ದೂರು ವಾಪಸ್ ತೆಗೆಸಿದ್ದಾರೆ. ಹೀಗೆ 7ನೇ ಪತಿ ವಿರುದ್ದವೂ 409ಎ ಪ್ರಕರಣ ದಾಖಲಿಸಿದ್ದಾಳೆ. ಇದರ ವಿಚಾರಣೆಯ ವಿಡಿಯೋ ಇದೀಗ ಚರ್ಚೆಗೆ ಗ್ರಾಸವಾಗಿದೆ.
ನ್ಯಾಯಾಧೀಶರು ವಕೀಲರ ಬಳಿ ಇದು ಮಹಿಳೆಯ 7ನೇ ವಿಚ್ಚೇದನ ಪ್ರಕರಣವೇ ಎಂದು ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಇಲ್ಲಿ ನಿಂತಿರುವುದು 7ನೇ ಪತಿ ಅನ್ನೋದನ್ನು ಖಚಿತಪಡಿಸಿಕೊಂಡಿದ್ದಾರೆ. ಎಲ್ಲಾ ಪತಿಯರ ವಿರುದ್ಧೂ ಈಕೆ ದಾಖಲಿಸಿರಿವುದು 498ಎ ಪ್ರಕರಣವೇ ಅನ್ನೋದನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವಕೀಲರು, ಎಲ್ಲಾ ಪತಿಯರ ವಿರುದ್ಧ ಚಿತ್ರಹಿಂಸೆ,ಕ್ರೌರ್ಯ ಪ್ರಕರಣ ದಾಖಲಿಸಿ ವಿಚ್ಛೇದನ ಬಯಸಿದ್ದಾಳೆ. ಬಳಿಕ ಸೆಟ್ಲೆಮೆಂಟ್ ಮಾಡಿಕೊಂಡಿದ್ದಾಳೆ. 6 ತಿಂಗಳಿನಿಂದ 1 ವರ್ಷದವರೆಗೆ ಒಬ್ಬೊಬ್ಬರ ಬಳಿ ಸಂಸಾರ ನಡೆಸಿದ್ದಾಳೆ.
ಈ ಪ್ರಕರಣ ಮಾಹಿತಿ ಪಡೆಯುತ್ತಿದ್ದಂತೆ ನ್ಯಾಯಾಧೀಶರಿಗೆ ಅಚ್ಚರಿಯಾಗಿದೆ. ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾನೂನನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಲು ಬಯಸುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ ವಿಚಾರಣೆ ಮುಂದೂಡಿದ ನ್ಯಾಯಾಧೀಶರು, ಮುಂದಿನ ವಿಚಾರಣೆಯಲ್ಲಿ ಈ ಹಿಂದಿನ 6ಪತಿಗಳ ಎಲ್ಲಾ ವಿವರ ನೀಡುವಂತೆ ಸೂಚಿಸಿದ್ದಾರೆ. ಇದೇ ವೇಳೆ ಇಲ್ಲಿ ಮಹಿಳೆ ಸ್ಥಾನದಲ್ಲಿದ್ದ ಪುರುಷನಿದ್ದರೆ ಇಷ್ಟು ಹೊತ್ತಿಗೆ ಜೈಲು ಸೇರಿರುತ್ತಿದ್ದ ಎಂದು ಅಭಿಪ್ರಾಯಪಟ್ಟಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post