ಮಂಗಳೂರು, ಆ 28: ಮಂಗಳೂರು ಕಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ನಿ. ಇದರ ನೂತನ ಅಧ್ಯಕ್ಷರಾಗಿ ಅನಿಲ್ ಲೋಬೊ ಪುನರಾಯ್ಕೆಯಾಗಿದ್ದಾರೆ. ಎಂಸಿ.ಸಿ. ಬ್ಯಾಂಕ್ ನಿ. ಇದರ ನಿರ್ದೇಶಕ ಮಂಡಲಿಯ 2023 -2028ರ ಅವಧಿಯ ಚುನಾವಣೆಯಲ್ಲಿ ಅನಿಲ್ ಲೋಬೊ ನೇತೃತ್ವದ 14 ಅರ್ಭರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು,ಇಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅನಿಲ್ ಲೋಬೊ, ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದು ಉಪಾಧ್ಯಕ್ಷರಾಗಿ ಶ್ರೀ ಜೆರಾಲ್ಡ್ ಜೂಡ್ ಡಿ’ಸಿಲ್ವಆಯ್ಕೆಯಾಗಿದ್ದಾರೆ.
ಸುಧೀರ್ ಕುಮಾರ್ ಜೆ., ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಂಗಳೂರು ಇವರು ಚುನಾವಣಾಧಿಕಾರಿಯಾಗಿದ್ದರು. ಎನ್ ಜೆ. ಗೋಪಾಲ್, ಸುಪರಿಟೆಂಡೆಂಟ್ ಚುನಾವಣಾ ಪ್ರಕ್ರಿಯೆಗೆ ಸಹಕರಿಸಿದರು. ಬ್ಯಾಂಕಿನಮಹಾಪ್ರಬಂಧಕ ಸುನಿಲ್ ಮಿನೇಜಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುಂದಿನ 5 ವರ್ಷಗಳ ಅವಧಿಗೆ ಬ್ಯಾಂಕಿನ ಆಡಳಿತ ಮಂಡಲಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅನಿಲ್ ಲೋಬೊ,“ಬ್ಯಾಂಕಿನ ಕಾರ್ಯಕ್ಷೇತ್ರ ವಿಸ್ತರಣೆ, ಬ್ಯಾಂಕಿಂಗ್ ಸೇವೆಯಲ್ಲಿ ಸಿಬ್ಬಂದಿಯ ಜ್ಞಾನ ಕೌಶಲ್ಯ ಅಭಿವೃದ್ಧಿ, ಗ್ರಾಹಕ ಸೇವೆಯಲ್ಲಿಸುಧಾರಣೆ, ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಶಿಕ್ಷಣ, ವಾಹನ ಮತ್ತು ಎಂ.ಎಸ್.ಎಂ.ಇ ಉದ್ಯಮ ಸಾಲ ಮತ್ತು ಸ್ವತಂತ್ರ ಯುಪಿಐ ಜೊತೆಗೆ ಬ್ಯಾಂಕಿನ ವ್ಯವಹಾರವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಮನೆಬಾಗಿಲಿಗೆ ಬ್ಯಾಂಕಿಂಗ್ ನಂತಹ ಸೇವೆಯನ್ನುನೀಡುವ ಉದ್ದೇಶವಿದೆ. ಇದರ ಜೊತೆಗೆ ಗ್ರಾಹಕರ ಅಹವಾಲುಗಳನ್ನು ತುರ್ತು ವಿಲೇ ಮಾಡಲು ವಿಶೇಷ ಕುಂದು ಕೊರತೆ ನಿವಾರಣಾ ಘಟಕವನ್ನು ಸ್ಥಾಪಿಸಲಾಗುವುದು” ಎಂದರು.
ಕಾರ್ಯವ್ಯಾಪ್ತಿ ವಿಸ್ತರಣೆ : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬ್ಯಾಂಕ್ ಸಂಪೂರ್ಣ ಆಧುನೀಕೃತ 16 ಶಾಖೆಗಳನ್ನು ಹೊಂದಿದ್ದು, ಹಿಂದಿನ ವಿತ್ತೀಯ ವರ್ಷದಲ್ಲಿ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ – ಹೀಗೆ ಐದು ಜಿಲ್ಲೆಗಳಿಗೆ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸುವ ಅನುಮತಿ ಈಗಾಗಲೇ ದೊರಕಿದ್ದು, ಶಾಖೆಗಳನ್ನು ತೆರೆಯುವ ಕೆಲಸ ಪ್ರಗತಿಯಲ್ಲಿದೆ. ಸಾಧ್ಯವಾದರೆ ಜಿಲ್ಲಾವಾರು ಪ್ರಾದೇಶಿಕ ಕಛೇರಿಗಳನ್ನು ತೆರೆದು ವಿಸ್ತರಣೆಯ ಕೆಲಸಕ್ಕೆ ಚುರುಕು ನೀಡಲಾಗುವುದು.ಮುಂದಿನ ವರ್ಷಗಳಲ್ಲಿ ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ಸಮಸ್ತ ಕರ್ನಾಟಕಕ್ಕೆ ತಲುಪಿಸುವ ಕನಸೂ ಇದೆ.
ಸ್ಪರ್ಧಾತ್ಮಕ ದರದಲ್ಲಿ ಸಾಲ : ಇತರ ಬ್ಯಾಂಕ್‌ಗಳಿಗೆ ಹೋಲಿಸಿದರೆ ಎಂ.ಸಿ.ಸಿ. ಬ್ಯಾಂಕಿನಲ್ಲಿ ಶಿಕ್ಷಣ, ವಾಹನ, ಎಂ.ಎಸ್.ಎಂ.ಇ ಉದ್ಯಮ ಸಾಲಗಳು ಕಡಿಮೆ ಮತ್ತು ಸ್ಪರ್ಧಾರ್ತ್ಮಕ ಬಡ್ಡಿದರದಲ್ಲಿ ಲಭ್ಯವಿರುವುದು ಮಾತ್ರವಲ್ಲ, ಸಾಲ ಮಂಜೂರಾತಿ ಪ್ರಕ್ರಿಯೆಗೆ ತ್ವರಿತ ವೇಗದಲ್ಲಿ ನಡೆಯುತ್ತಿದೆ. ಈಗಷ್ಟೇ ಸಿಇಟಿ, ನೀಟ್ ಮತ್ತಿತರ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ಶಿಕ್ಷಣ ಸಾಲಕ್ಕೆ ನಮ್ಮ ಬ್ಯಾಂಕ್ ವಿಶೇಸ ಒತ್ತು ನೀಡುತ್ತಿರುವುದರಿಂದ, ಸೀಮಿತ ಅವಧಿಗೆ ರೂಪಾಯಿ ಹತ್ತು ಲಕ್ಷದವರೆಗಿನ ಶಿಕ್ಷಣ ಸಾಲವನ್ನು ಶೂನ್ಯ ಪ್ರೊಸೆಸಿಂಗ್ ಫೀಸ್‌ನಲ್ಲಿ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಮಾಜದ ಹೆಚ್ಚೆಚ್ಚು ವಿದ್ಯಾರ್ಥಿಗಳು ನಮ್ಮ ಬ್ಯಾಂಕಿನಿಂದ ಶಿಕ್ಷಣ ಸಾಲವನ್ನು ಪಡೆದು, ಉನ್ನತ ಶಿಕ್ಷಣದ ತಮ್ಮ ಕನಸನ್ನು ಸಾಕಾರಗೊಳಿವುದರ ಜೊತೆಗೆ, ‘ಶಿಕ್ಷಣದಿಂದ ಸಾಮಾಜಿಕ ಸಶಕ್ತಿಕರಣ’ ನಮ್ಮ ಉದ್ದೇಶ.
ಗ್ರಾಹಕ ಸೇವೆಯಲ್ಲಿ ಸುಧಾರಣೆ : ಈಗಾಗಲೇ ಬ್ಯಾಂಕಿನ ಆಡಳಿತ ಕಛೇರಿಯಲ್ಲಿ ಸರ್ವ ಸುಸಜ್ಜಿತ ಸಿಬ್ಬಂದಿ ಕೌಶಲ್ಯ ತರಬೇತಿ ಕೇಂದ್ರ ಕಾರ್ಯಾಚರಿಸುತ್ತಿದ್ದು, ಈಗಾಗಲೇ ನೂತನ ಸಿಬ್ಬಂದಿ ಆಯ್ಕೆ ನಡೆದಿರುತ್ತದೆ. ಆಧುನಿಕ ತಂತ್ರಜ್ಞಾನ ಮತ್ತು ಸಂವಹನ ಕೌಶಲ್ಯಗಳಲ್ಲಿ ನಮ್ಮ ಸಿಬ್ಬಂದಿವರ್ಗ ತರಬೇತಾಗಿದ್ದು, ಬ್ಯಾಂಕಿನ ಎಲ್ಲಾ ಶಾಖೆಗಳಲ್ಲೂ ನಗುಮೊಗದ ಮತ್ತು ತ್ವರಿತ ಸೇವೆ ಲಭ್ಯವಿರುತ್ತದೆ. ಹಿರಿಯ ನಾಗರಿಕರಿಗಾಗಿ ಪ್ರತೀ ಶಾಖೆಯಲ್ಲಿ ಉಸ್ತುವಾರಿ ಸಿಬ್ಬಂದಿ ಲಭ್ಯವಿದ್ದು, ಎಲ್ಲಾ ಶಾಖೆಗಳಲ್ಲಿ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆಯಿದೆ. ಗ್ರಾಹಕರಿಗೆ ಯಾವುದೇ ಶಾಖೆಯ ಗ್ರಾಹಕ ಸೇವೆಯ ಬಗ್ಗೆ ಅಹವಾಲುಗಳಿದ್ದರೆ ಕುಂದು ಕೊರತೆ ನಿವಾರಣೆಗಾಗಿ ಸ್ಥಾಪಿಸಲಾಗುವ ವಿಶೇಷ ಘಟಕವನ್ನು ಸಂಪರ್ಕಿಸಬಹುದು. ಈ ಹಿಂದಿನಂತೆಯೇ ಗ್ರಾಹಕರಿಂದ ವಿಶೇಷ ಮನ್ನಣೆಯನ್ನು ಪಡೆದಿರುವ ಶಾಖಾವಾರು ಗ್ರಾಹಕ ಸಮಾವೇಶಗಳನ್ನು ತಪ್ಪದೇ ನಡೆಸಲಾಗುವುದು.
ಸಂಪೂರ್ಣ ಡಿಜಿಟಲೀಕರಣ : ಮೊಬಾಯ್ ಬ್ಯಾಂಕಿಂಗ್ ಆ್ಯಪ್ ಮೂಲಕ ನಮ್ಮ ಸಾಕಷ್ಟು ಗ್ರಾಹಕರು ಆಧುನಿಕ ತಂತ್ರಜ್ಞಾನದ ಪ್ರಯೋಜನ ಪಡೆದುಕೊಳ್ಳುತ್ತಿದ್ದರೂ, ಸ್ವತಂತ್ರ ಯುಪಿಐ ವ್ಯವಸ್ಥೆ ಇಲ್ಲದಿರುವುದರಿಂದ ಕೆಲವೊಂದು ವಿಶೇಷ ಡಿಜಿಟಲ್ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಪ್ರಕ್ರಿಯೆ ಈಗಾಗಲೆ ಆರಂಭಗೊಂಡಿದ್ದು, ಸದರಿ ವಿತ್ತೀಯ ವರ್ಷದಲ್ಲಿ ಬ್ಯಾಂಕಿನ ಎಲ್ಲಾ ವಿತ್ತೀಯ ವ್ಯವಹಾರಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿವೆ.
ಸಮಾಜಿಕ ಸಹಾಯಹಸ್ತ : ಕಳೆದ ವರ್ಷ ನಮ್ಮ ಬ್ಯಾಂಕಿನ ಶತಮಾನೋತ್ತರ ದಶಮಾನೋತ್ಸವ ಸಂದರ್ಭದಲ್ಲಿ ಸಮಾಜದ ಅಶಕ್ತವರ್ಗದವರಿಗೆ ವೈದ್ಯಕೀಯ, ಶಿಕ್ಷಣ, ಗೃಹ ನಿರ್ಮಾಣ ಮತ್ತು ದುರಸ್ತಿ ಮತ್ತು ಹೆಣ್ಣುಮಕ್ಕಳ ವಿವಾಹದ ವೆಚ್ಚಕ್ಕೆ ನೆರವು ನೀಡಿ,ಬ್ಯಾಂಕಿನಿಂದ ಸಮಾಜಕ್ಕೆ ಸಹಾಯಹಸ್ತ ಚಾಚಿದ್ದೇವೆ. ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಘ – ಸಂಸ್ಥೆಗಳಿಗೆ ಬ್ಯಾಂಕಿನ ಸಭಾಂಗಣವನ್ನು ಉಚಿತವಾಗಿ ನೀಡುತ್ತಿದ್ದೇವೆ. ಈ ಸೇವೆ ಮುಂದುವರೆಯಲಿದೆ. ನಮ್ಮ ನಾಡಿನ ಪ್ರಮುಖ ಹಬ್ಬಗಳನ್ನು ವಿಶೇಷ ಚಟುವಟಿಕೆಗಳೊಂದಿಗೆ ಸಂಭ್ರಲ್ಲೋಸದಿಂದ ಆಚರಿಸುತ್ತೇವೆ.
ಆಡಳಿತ ಮಂಡಲಿಯಲ್ಲಿ ಅಧ್ಯಕ್ಷ ಶ್ರೀ ಅನಿಲ್ ಲೋಬೊ, ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿ’ಸಿಲ್ವ ಇವರ ಜೊತೆಗೆನಿರ್ದೆಶಕರಾಗಿ ಡಾ| ಜೆರಾಲ್ಡ್ ಪಿಂಟೋ ಕಲ್ಯಾಣ್‌ಪುರ, ಅಂಡು ಡಿ’ಸೋಜ ಪಾಲಡ್ಕ, ಜೋಸೆಫ್ ಎಂ.ಅನಿಲ್ ಪತ್ರಾವೊದೆರೆಬೈಲ್, ಡೇವಿಡ್ ಡಿ’ಸೋಜ ಬಜಪೆ, ಎಲ್ ಕಿರಣ್ ಕ್ರಾಸ್ಟೋ ಗಂಗೊಳ್ಳಿ, ಜೆ.ಪಿ.ರೋಡ್ರಿಗಸ್ ಪುತ್ತೂರು,ರೋಶನ್ ಡಿ’ಸೋಜ ಮುಡಿಪು, ಹೆರಾಲ್ಡ್ ಜೋನ್ ಮೊಂತೆರೊ ಕೆಲರಾಯ್, ಐರಿನ್ ರೆಬೆಲ್ಲೊ ಕುಲಶೇಖರ, ಡಾ| ಫ್ರೀಡಾ ಫ್ಲಾವಿಯಾ ಡಿ’ಸೋಜ ಬಳ್ಳುಂಜೆ, ಮೆಲ್ವಿನ್ ಅಶ್ವಿನಸ್ ವಾಸ್ ಮಿಲಾಗ್ರಿಸ್, ವಿನ್ಸೆಂಟ್ ಅನಿಲ್ ಲಸ್ರಾದೊ, ಬಂಟ್ವಾಳ ಇದ್ದಾರೆ.
Discussion about this post