• About us
  • Contact us
  • Disclaimer
Sunday, November 29, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ‘ಎಂಐಒ ಕ್ಯಾನ್ಸರ್ ಸ್ಕ್ರೀನರ್ ಆ್ಯಪ್’ಬಿಡುಗಡೆ

Coastal Times by Coastal Times
November 29, 2026
in ಕರಾವಳಿ
ಮಂಗಳೂರು: ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ‘ಎಂಐಒ ಕ್ಯಾನ್ಸರ್ ಸ್ಕ್ರೀನರ್ ಆ್ಯಪ್’ಬಿಡುಗಡೆ
8
VIEWS
WhatsappTelegramShare on FacebookShare on Twitter

ಮಂಗಳೂರು,ನ.28: ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂಐಒ) ವತಿಯಿಂದ ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಹಾಯ ಮಾಡುವ ‘ಎಂಐಒ ಕ್ಯಾನ್ಸರ್ ಸ್ಕ್ರೀನರ್ ಆ್ಯಪ್’ನ್ನು ನಗರದ ಹೊಟೇಲ್ ದೀಪಾ ಕಂಫರ್ಟ್ಸ್ ಸಭಾಂಗಣದಲ್ಲಿ ಶನಿವಾರ ಬಿಡುಗಡೆಗೊಳಿಸಲಾಯಿತು.

ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿದ ಉದ್ಯಮಿ ಮೈಕಲ್ ಡಿಸೋಜ, ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ಆ್ಯಪ್ ನೆರವಾಗಲಿದೆ. ಕ್ಯಾನ್ಸರ್ ಸಹಿತ ಗಂಭೀರ ಕಾಯಿಲೆಗಳಿಗೆ ವೈದ್ಯಕೀಯ ವೆಚ್ಚ ಅಧಿಕವಾಗಿದ್ದು, ವೈದ್ಯಕೀಯ ಉಪಕರಣ, ಔಷಧಗಳಿಗೆ ಸರಕಾರ ತೆರಿಗೆ ವಿಧಿಸಬಾರದು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಮಾನವನ ದುರಾಸೆಯಿಂದ ಇಂದು ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿದ್ದು, ಆಹಾರ, ನೀರು, ಗಾಳಿ ಕಲುಷಿತಗೊಂಡಿದೆ. ಇದರಿಂದಾಗಿ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ವ್ಯಾಪಕ ಗೊಳ್ಳುತ್ತಿವೆ. ಪ್ರಕೃತಿ ಜತೆ ಬದುಕುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು. ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಹೊಸ ಆ್ಯಪ್ ಸಹಾಯಕವಾಗಲಿದೆ ಎಂದರು.

ಅತಿಥಿಯಾಗಿದ್ದ ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತನಾಡಿ, ಎಂಐಒ ಕ್ಯಾನ್ಸರ್ ಸ್ಕ್ರೀನರ್ ಆ್ಯಪ್ ಮೂಲಕ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಸಾಧ್ಯವಾಗಲಿದೆ. ಕ್ಯಾನ್ಸರ್ ರೋಗಿಗಳಿಗೆ ಸಹಾಯಕ ವಾಗುವಂತೆ ಕೇಂದ್ರ ಸರಕಾರ ಇತ್ತೀಚೆಗೆ 135 ಔಷಧ, 100 ಉಪಕರಣಗಳ ದರ ಇಳಿಕೆ ಮಾಡಿದೆ. ಇನ್ನಷ್ಟು ಸುಧಾರಣೆ ಅಗತ್ಯವಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಆ್ಯಪ್ ರೂಪಿಸಿದ ಎಂಐಒ ನಿರ್ದೇಶಕ ಡಾ. ಸುರೇಶ್ ರಾವ್, ಎಂಐಒ ಕ್ಯಾನ್ಸರ್ ಸ್ಕ್ರೀನರ್ ಆ್ಯಪ್ ಕ್ಯಾನ್ಸರ್ ಬಗ್ಗೆ ಜಾಗೃತಿ, ಅರಿವು ಮೂಡಿಸುವ ವೇದಿಕೆಯಾಗಿದೆ. ಇದು ವ್ಯಕ್ತಿಯ ವಯಸ್ಸು, ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸ, ತಂಬಾಕು ಸೇವನೆ, ಮದ್ಯಪಾನ, ಬೊಜ್ಜು, ಜೀವನ ಶೈಲಿಗೆ ಸಂಬಂಧಿಸಿದ ಅಪಾಯದ ಅಂಶಗಳು ಹಾಗೂ ಕ್ಯಾನ್ಸರ್‌ಗೆ ಸಂಬಂಧಿಸಿದ ಲಕ್ಷಣಗಳು ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿ ಮೌಲ್ಯಮಾಪನ ಮಾಡುತ್ತದೆ. ಗುರುತಿಸಲಾದ ಅಪಾಯದ ವರ್ಗಕ್ಕೆ ಅನುಗುಣವಾಗಿ ಆರೋಗ್ಯ ಜಾಗೃತಿ, ಲಕ್ಷಣಗಳ ಮೇಲ್ವಿಚಾರಣೆ, ವೈದ್ಯಕೀಯ ಸಮಾಲೋಚನೆ, ಅಗತ್ಯ ಸ್ಕ್ರೀನಿಂಗ್ ಪರೀಕ್ಷೆಗಳು ಹಾಗೂ ಅವಶ್ಯಕತೆ ಇದ್ದಲ್ಲಿ ತಜ್ಞ ವೈದ್ಯರ ಸಲಹೆ ಮತ್ತು ಚಿಕಿತ್ಸೆಗೆ ಶಿಫಾರಸು ಮಾಡುವ ಮಾರ್ಗದರ್ಶನವನ್ನು ಆ್ಯಪ್ ಒದಗಿಸುತ್ತದೆ. ಪ್ರಮುಖ ಕ್ಯಾನ್ಸರ್‌ಗಳಾದ ಬಾಯಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ದೊಡ್ಡ ಕರುಳಿನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಗರ್ಭಾಶಯದ ಒಳಪದರದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಹಾಗೂ ಜಠರದ ಕ್ಯಾನ್ಸರ್‌ಗಳನ್ನು ಈ ಆ್ಯಪ್ ಒಳಗೊಂಡಿದೆ. ಈ ಆ್ಯಪ್ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚುವ ಸಾಧನವಲ್ಲ. ಇದು ಕ್ಯಾನ್ಸರ್ ಅಪಾಯದ ಮೌಲ್ಯಮಾಪನ ಮತ್ತು ಅರಿವು ಮೂಡಿಸುವ ಸಾಧನವಾಗಿದೆ. ಈ ಮೂಲಕ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಹಚ್ಚಿ ಗುಣಪಡಿಸಬಹುದು ಎಂದು ವಿವರಿಸಿದರು.

ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (M.I.O.), ಮಂಗಳೂರು.M.I.O ಕ್ಯಾನ್ಸರ್ ಆ್ಯಪ್ ಕುರಿತು: ಈ ಆ್ಯಪ್ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಮಾರ್ಗದರ್ಶನ ನೀಡುವ ಸಾಧನವಾಗಿದೆ. ನಿಮ್ಮ ಕ್ಯಾನ್ಸರ್ ಅಪಾಯದ ಮಟ್ಟವು ಸಾಮಾನ್ಯವಾಗಿದೆ ಎಂದ ಮಾತ್ರಕ್ಕೆ ನಿಮಗೆ ಕ್ಯಾನ್ಸರ್ ಇಲ್ಲ ಎಂದು ಅರ್ಥವಲ್ಲ. ಏಕೆಂದರೆ ಎಲ್ಲಾ ರೀತಿಯ ಕ್ಯಾನ್ಸರ್‌ಗಳಲ್ಲಿಯೂ ಆರಂಭಿಕ ಹಂತದಲ್ಲಿ ಗುರುತಿಸಬಹುದಾದ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ನಿಮ್ಮ ಕ್ಯಾನ್ಸರ್ ಅಪಾಯದ ಮಟ್ಟವು ಸಾಮಾನ್ಯದಿಂದ ಹೆಚ್ಚಿನ ಅಪಾಯದ ಮಟ್ಟಕ್ಕೆ ಏರಿದಂತೆ, ನಿಮಗೆ ಕ್ಯಾನ್ಸರ್ ಇರುವ ಸಾಧ್ಯತೆ ಹೆಚ್ಚಿರಬಹುದು. ಆದರೆ ಇದರಿಂದ ಕ್ಯಾನ್ಸರ್ ಇದೆ ಎಂದು ಖಚಿತಪಡಿಸಲಾಗುವುದಿಲ್ಲ. ಹೆಚ್ಚಿನ ಅಪಾಯದ ಮಟ್ಟವಿದ್ದರೂ ಸಹ ಕ್ಯಾನ್ಸರ್ ಇದೆ ಎಂದರ್ಥವಲ್ಲ. ಏಕೆಂದರೆ ಕ್ಯಾನ್ಸರ್ ಹೊರತಾದ ಇತರ ಆರೋಗ್ಯ ಸಮಸ್ಯೆಗಳೂ ಇದೇ ರೀತಿಯ ಲಕ್ಷಣಗಳನ್ನು ಉಂಟುಮಾಡಬಹುದು. ಕ್ಯಾನ್ಸರ್ ಇರುವುದನ್ನು ಖಚಿತಪಡಿಸುವುದು ಮತ್ತು ಅದರ ಹಂತವನ್ನು ನಿರ್ಧರಿಸುವುದು ಅರ್ಹ ವೈದ್ಯರಿಂದ ಆಸ್ಪತ್ರೆಯಲ್ಲಿ ಮಾತ್ರ ಸಾಧ್ಯ. ಕ್ಯಾನ್ಸರ್ ಅನ್ನು ಸಾಧ್ಯವಾದಷ್ಟು ಬೇಗ ಪತ್ತೆಹಚ್ಚಲು ಈ ಆ್ಯಪ್ ಅನ್ನು ಬಳಸಿ. ಏಕೆಂದರೆ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದರೆ ಗುಣಮುಖರಾಗುವ ಸಾಧ್ಯತೆ ಹೆಚ್ಚಿರುತ್ತದೆ.ಆ್ಯಪ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:
https://play.google.com/store/apps/details?id=com.cancer.cancerscreen&pcampaignid=web_share

ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳ ಉಪಸ್ಥಿತಿ; ಶ್ರೀ ಮೈಕೆಲ್ ಡಿ’ಸೋಜಾ ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮಾಜಸೇವಕರು. ಗೌರವಾನ್ವಿತ ಅತಿಥಿಗಳು : ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, (ಅಧ್ಯಕ್ಷರು, ಶ್ರೀ ರಾಮಕೃಷ್ಣ ತಪೋವನ, ಪೊಳಲಿ), ಶ್ರೀ ಐವನ್ ಡಿ’ಸೋಜಾ (ವಿಧಾನ ಪರಿಷತ್ ಸದಸ್ಯರು), ಶ್ರೀ ವಾಲ್ಟರ್ ನಂದಳಿಕೆ , ಶ್ರೀ ವೈ. ಭರತ್ ಶೆಟ್ಟಿ (ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ). ಡಾ. ವಿಶ್ವಲತಾ ಅತಿಥಿಯಾಗಿದ್ದರು. ಡಾ. ವೆಂಕಟರಮಣ ಕಿಣಿ ಸ್ವಾಗತಿಸಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಭಾರತದ ಸಂವಿಧಾನದ ತೆರೆಮರೆಯ ಶಿಲ್ಪಿ ಸರ್ ಬೆನಗಲ್ ನರಸಿಂಗ್ ರಾವ್ – ಆಂಧ್ರ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಝೀರ್ ಇಂಡಿಯನ್ ಕಾನ್ಟಿಟ್ಯೂಶನ್ ಇನ್ ಮೇಕಿಂಗ್ ಪುಸ್ತಕದ ಮರುಮುದ್ರಣದ ಲೋಕಾರ್ಪಣೆಯಲ್ಲಿ ಭಾಗಿ

Related Posts

ಭಾರತದ ಸಂವಿಧಾನದ ತೆರೆಮರೆಯ ಶಿಲ್ಪಿ ಸರ್ ಬೆನಗಲ್ ನರಸಿಂಗ್ ರಾವ್ – ಆಂಧ್ರ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಝೀರ್ ಇಂಡಿಯನ್ ಕಾನ್ಟಿಟ್ಯೂಶನ್ ಇನ್ ಮೇಕಿಂಗ್ ಪುಸ್ತಕದ ಮರುಮುದ್ರಣದ ಲೋಕಾರ್ಪಣೆಯಲ್ಲಿ ಭಾಗಿ
ಕರಾವಳಿ

ಭಾರತದ ಸಂವಿಧಾನದ ತೆರೆಮರೆಯ ಶಿಲ್ಪಿ ಸರ್ ಬೆನಗಲ್ ನರಸಿಂಗ್ ರಾವ್ – ಆಂಧ್ರ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಝೀರ್ ಇಂಡಿಯನ್ ಕಾನ್ಟಿಟ್ಯೂಶನ್ ಇನ್ ಮೇಕಿಂಗ್ ಪುಸ್ತಕದ ಮರುಮುದ್ರಣದ ಲೋಕಾರ್ಪಣೆಯಲ್ಲಿ ಭಾಗಿ

November 28, 2026
17
ಡಿ.25ರಿಂದ ಮಂಗಳೂರಿನ ಪುರಭವನದಲ್ಲಿ ಮೂರು ದಿನಗಳ ‘ವಿಶ್ವ ಕೌಶಲಮ್ 2026’ ; ವಿಶ್ವಕರ್ಮ ಶಿಲ್ಪಿಗಳ-ತಂತ್ರಜ್ಞರ ಸಂಗಮ, ವಿಶಿಷ್ಟ ಕಲಾ ಉತ್ಸವ
ಕರಾವಳಿ

ಡಿ.25ರಿಂದ ಮಂಗಳೂರಿನ ಪುರಭವನದಲ್ಲಿ ಮೂರು ದಿನಗಳ ‘ವಿಶ್ವ ಕೌಶಲಮ್ 2026’ ; ವಿಶ್ವಕರ್ಮ ಶಿಲ್ಪಿಗಳ-ತಂತ್ರಜ್ಞರ ಸಂಗಮ, ವಿಶಿಷ್ಟ ಕಲಾ ಉತ್ಸವ

November 28, 2026
14

Discussion about this post

Recent News

ಮಂಗಳೂರು: ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ‘ಎಂಐಒ ಕ್ಯಾನ್ಸರ್ ಸ್ಕ್ರೀನರ್ ಆ್ಯಪ್’ಬಿಡುಗಡೆ

ಮಂಗಳೂರು: ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ‘ಎಂಐಒ ಕ್ಯಾನ್ಸರ್ ಸ್ಕ್ರೀನರ್ ಆ್ಯಪ್’ಬಿಡುಗಡೆ

November 29, 2026
8
ಭಾರತದ ಸಂವಿಧಾನದ ತೆರೆಮರೆಯ ಶಿಲ್ಪಿ ಸರ್ ಬೆನಗಲ್ ನರಸಿಂಗ್ ರಾವ್ – ಆಂಧ್ರ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಝೀರ್ ಇಂಡಿಯನ್ ಕಾನ್ಟಿಟ್ಯೂಶನ್ ಇನ್ ಮೇಕಿಂಗ್ ಪುಸ್ತಕದ ಮರುಮುದ್ರಣದ ಲೋಕಾರ್ಪಣೆಯಲ್ಲಿ ಭಾಗಿ

ಭಾರತದ ಸಂವಿಧಾನದ ತೆರೆಮರೆಯ ಶಿಲ್ಪಿ ಸರ್ ಬೆನಗಲ್ ನರಸಿಂಗ್ ರಾವ್ – ಆಂಧ್ರ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಝೀರ್ ಇಂಡಿಯನ್ ಕಾನ್ಟಿಟ್ಯೂಶನ್ ಇನ್ ಮೇಕಿಂಗ್ ಪುಸ್ತಕದ ಮರುಮುದ್ರಣದ ಲೋಕಾರ್ಪಣೆಯಲ್ಲಿ ಭಾಗಿ

November 28, 2026
17
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ‘ಎಂಐಒ ಕ್ಯಾನ್ಸರ್ ಸ್ಕ್ರೀನರ್ ಆ್ಯಪ್’ಬಿಡುಗಡೆ

ಮಂಗಳೂರು: ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ‘ಎಂಐಒ ಕ್ಯಾನ್ಸರ್ ಸ್ಕ್ರೀನರ್ ಆ್ಯಪ್’ಬಿಡುಗಡೆ

November 29, 2026
ಭಾರತದ ಸಂವಿಧಾನದ ತೆರೆಮರೆಯ ಶಿಲ್ಪಿ ಸರ್ ಬೆನಗಲ್ ನರಸಿಂಗ್ ರಾವ್ – ಆಂಧ್ರ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಝೀರ್ ಇಂಡಿಯನ್ ಕಾನ್ಟಿಟ್ಯೂಶನ್ ಇನ್ ಮೇಕಿಂಗ್ ಪುಸ್ತಕದ ಮರುಮುದ್ರಣದ ಲೋಕಾರ್ಪಣೆಯಲ್ಲಿ ಭಾಗಿ

ಭಾರತದ ಸಂವಿಧಾನದ ತೆರೆಮರೆಯ ಶಿಲ್ಪಿ ಸರ್ ಬೆನಗಲ್ ನರಸಿಂಗ್ ರಾವ್ – ಆಂಧ್ರ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಝೀರ್ ಇಂಡಿಯನ್ ಕಾನ್ಟಿಟ್ಯೂಶನ್ ಇನ್ ಮೇಕಿಂಗ್ ಪುಸ್ತಕದ ಮರುಮುದ್ರಣದ ಲೋಕಾರ್ಪಣೆಯಲ್ಲಿ ಭಾಗಿ

November 28, 2026
ಡಿ.25ರಿಂದ ಮಂಗಳೂರಿನ ಪುರಭವನದಲ್ಲಿ ಮೂರು ದಿನಗಳ ‘ವಿಶ್ವ ಕೌಶಲಮ್ 2026’ ; ವಿಶ್ವಕರ್ಮ ಶಿಲ್ಪಿಗಳ-ತಂತ್ರಜ್ಞರ ಸಂಗಮ, ವಿಶಿಷ್ಟ ಕಲಾ ಉತ್ಸವ

ಡಿ.25ರಿಂದ ಮಂಗಳೂರಿನ ಪುರಭವನದಲ್ಲಿ ಮೂರು ದಿನಗಳ ‘ವಿಶ್ವ ಕೌಶಲಮ್ 2026’ ; ವಿಶ್ವಕರ್ಮ ಶಿಲ್ಪಿಗಳ-ತಂತ್ರಜ್ಞರ ಸಂಗಮ, ವಿಶಿಷ್ಟ ಕಲಾ ಉತ್ಸವ

November 28, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d