ಚೆನ್ನೈ: ತಮಿಳು ನಟ ಡೇನಿಯಲ್ ಬಾಲಾಜಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ವೆಟ್ಟೈಯಾಡು ವಿಲಯಾಡುವಿನಲ್ಲಿ ಅಮುಧನ್, ವಡಾ ಚೆನ್ನೈನ ತಂಬಿ ಪಾತ್ರಗಳಿಂದ ಡೇನಿಯಲ್ ಬಾಲಾಜಿ ಹೆಸರುವಾಸಿಯಾಗಿದ್ದಾರೆ, ತಮ್ಮ ವೈವಿಧ್ಯಯ ಪ್ರತಿಭೆ, ಬೆಳ್ಳಿತೆರೆ ಮೇಲೆ ಮನಮೋಹಕ ವರ್ಚಸ್ಸಿಗೆ ಹೆಸರುವಾಸಿಯಾಗಿದ್ದ ನಟನಿಗೆ ಕಳೆದ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಚೆನ್ನೈನ ಕೊಟ್ಟಿವಾಕಂನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರದಲ್ಲಿ ವಿಲನ್ ಆಗಿ ನಟಿಸುವ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟ ಡೇನಿಯಲ್ ಬಾಲಾಜಿ ಬಹು ಭಾಷಾನಟನಾಗಿಯೂ ಗುರುತಿಸಿಕೊಂಡಿದ್ದರು.ಇಂದು ಅಂತಿಮ ದರ್ಶನ, ಅಂತ್ಯಕ್ರಿಯೆ: ಡೇನಿಯಲ್ ಅವರ ಪಾರ್ಥಿವ ಶರೀರವನ್ನು ಇಂದು ಪುರಸೈವಾಲ್ಕಂನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತಿದೆ. ಇಂದು ಸಂಜೆ ಅಂತ್ಯಕ್ರಿಯೆ ನೆರವೇರಲಿದೆ. ಅವರ ನಿಧನದ ಸುದ್ದಿ ತಮಿಳು ಚಿತ್ರರಂಗದಲ್ಲಿ ಮತ್ತು ಅವರ ಅಭಿಮಾನಿಗಳಿಗೆ ತೀವ್ರ ಆಘಾತ ಮತ್ತು ದುಃಖವನ್ನು ಉಂಟುಮಾಡಿದೆ.
ಧಾರಾವಾಹಿ ಮೂಲಕ ತಮ್ಮ ಸಿನಿವೃತ್ತಿಯನ್ನು ಆರಂಭಿಸಿದ ಬಾಲಾಜಿ ಅವರು ಚಿತ್ತಿ ಧಾರಾವಾಹಿಯಲ್ಲಿ ಮಾಡಿದ ಡೇನಿಯಲ್ ಪಾತ್ರ ವ್ಯಾಪಕ ಮನ್ನಣೆ ಮತ್ತು ಜನಮೆಚ್ಚುಗೆ ಗಳಿಸಿ ಆ ಪಾತ್ರ ಮೂಲಕವೇ ಅವರು ನಂತರ ಡೇನಿಯಲ್ ಬಾಲಾಜಿ ಎಂದು ಜನಪ್ರಿಯರಾದರು. ನಟನೆ ಹೊರತುಪಡಿಸಿ ಬಾಲಾಜಿ ದೇವರ ಮೇಲೆ ಅಪಾರ ನಂಬಿಕೆ ಉಳ್ಳವರಾಗಿದ್ದರು. ಅವಡಿಯಲ್ಲಿ ದೇವಾಲಯವನ್ನು ನಿರ್ಮಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
Discover more from Coastal Times Kannada
Subscribe to get the latest posts sent to your email.
Discussion about this post