• About us
  • Contact us
  • Disclaimer
Tuesday, August 25, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ನನ್ನ ಮಕ್ಕಳಿಗೆ ತಂದೆ ಇಲ್ಲದೇ ಇರಬಹುದು, ಅವಳಿ ಮಕ್ಕಳಿಗೆ ತಾಯಿ ಆಗಲಿರುವ ನಟಿ ಭಾವನಾ ಮೊದಲ ಮಾತು

Coastal Times by Coastal Times
July 5, 2025
in ಸಿನಿಮಾ
ನನ್ನ ಮಕ್ಕಳಿಗೆ ತಂದೆ ಇಲ್ಲದೇ ಇರಬಹುದು, ಅವಳಿ ಮಕ್ಕಳಿಗೆ ತಾಯಿ ಆಗಲಿರುವ ನಟಿ ಭಾವನಾ ಮೊದಲ ಮಾತು
117
VIEWS
WhatsappTelegramShare on FacebookShare on Twitter

ಕನ್ನಡ ಚಿತ್ರರಂಗದ ಖ್ಯಾತ ನಟಿ ಭಾವನಾ ರಾಮಣ್ಣ ಅವರು ಮದುವೆ ಆಗಿಲ್ಲ. ಆದರೆ ಮಕ್ಕಳನ್ನು ಪಡೆಯುವ ದಿಟ್ಟ ನಿರ್ಧಾರ ಮಾಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ಉಂಟು ಮಾಡಿದೆ. ಈಗ ಅವರು 6 ತಿಂಗಳ ಗರ್ಭಿಣಿ ಅವಳಿ ಮಕ್ಕಳಿಗೆ ಅವರು ತಾಯಿ ಆಗುತ್ತಿದ್ದಾರೆ. 40 ವರ್ಷ ದಾಟಿದ ಬಳಿಕ ಅವರು ತಾಯಿ ಆಗುತ್ತಿದ್ದಾರೆ. ಐವಿಎಫ್ (IVF) ತಂತ್ರಜ್ಞಾನದ ಮೂಲಕ ಇದು ಸಾಧ್ಯವಾಗುತ್ತಿದೆ. ಅವರು ಈ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗಿರಲಿಲ್ಲ. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ತಾಯಿ ಆಗುತ್ತಿರುವುದರ ಬಗ್ಗೆ ಭಾವನಾ ರಾಮಣ್ಣ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

”ಇದು ನನ್ನ ಹೊಸ ಅಧ್ಯಾಯ. ಹೊಸ ಜವಾಬ್ದಾರಿಯನ್ನು ನಿಭಾಯಿಸುತ್ತೇನೆಂದು ನಾನು ಈ ವಿಚಾರವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನಾನು ಅವಳಿ ಮಕ್ಕಳೊಂದಿಗೆ ಆರು ತಿಂಗಳ ಗರ್ಭಿಣಿಯಾಗಿದ್ದೇನೆ. ನನಗೆ 20-30 ವರ್ಷ ಇದ್ದಾಗ ತಾಯ್ತನದ ಆಸೆ ನನ್ನ ಮನಸ್ಸಿನಲ್ಲಿ ಇರಲಿಲ್ಲ. 40 ವರ್ಷ ತುಂಬಿದಾಗ, ಆ ಆಸೆಯನ್ನು ನಿರಾಕರಿಸಲಾಗಲಿಲ್ಲ. ಒಂಟಿ ಮಹಿಳೆಯಾಗಿ ದಾರಿ ಸುಲಭವಾಗಿರಲಿಲ್ಲ. ಅನೇಕ ಐವಿಎಫ್ ಸೆಂಟರ್‌ಗಳು ನನ್ನನ್ನು ತಿರಸ್ಕಾರ ಮಾಡಿದ್ದವು. ಬಳಿಕ ನಾನು ಡಾ.ಸುಷ್ಮಾ ಅವರನ್ನು ಭೇಟಿಯಾದೆ. ಅವರು ನನ್ನ ಮೇಲೆ ಯಾವುದೇ ಕೀಳು ಭಾವನೆಪಡದೇ ಸ್ವಾಗತಿಸಿದರು. ಅವರ ಬೆಂಬಲದೊಂದಿಗೆ, ನಾನು ನನ್ನ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾಗಿದ್ದೇನೆ” ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.

ಮುಂದುವರೆದು, ”ನಾನು ತೆಗೆದುಕೊಂಡಿರುವ ನಿರ್ಧಾರಕ್ಕೆ ನನ್ನ ಹಾಗೂ ತಂದೆ, ಒಡಹುಟ್ಟಿದವರು ಮತ್ತು ನನ್ನ ಪ್ರೀತಿಪಾತ್ರರು ನನ್ನ ಜೊತೆ ನಿಲ್ಲುವ ಮೂಲಕ ನನಗೆ ಶಕ್ತಿಯಾಗಿದ್ದಾರೆ‌. ಕೆಲವರು ನನ್ನ ಆಯ್ಕೆಯನ್ನು ಪ್ರಶ್ನಿಸಿದರು. ಆದರೆ, ನನ್ನ ಮನಸ್ಸಿನಲ್ಲಿ ನಾನು ಎಲ್ಲದಕ್ಕೂ ಸಿದ್ಧಳಾಗಿದ್ದೆ. ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು. ಆದರೆ, ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಬೇಷರತ್ತಾದ ಪ್ರೀತಿಯಿಂದ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ದಯೆ, ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಬೆಳಯುತ್ತಾರೆ. ನನ್ನ ಸತ್ಯವನ್ನು ಗೌರವಿಸಲು ನಾನು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡೆ. ನನ್ನ ಕಥೆ, ಒಬ್ಬಳೇ ಒಬ್ಬಳು ಮಹಿಳೆಯಾದರೂ ತನ್ನನ್ನು ತಾನು ನಂಬುವಂತೆ ಪ್ರೇರೇಪಿಸಿದರೆ ಸಾಕು. ಶೀಘ್ರದಲ್ಲೇ, ಎರಡು ಪುಟ್ಟ ಆತ್ಮಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ ಹಾಗೂ ಅದೇ ಎಲ್ಲವೂ ಆಗಿರುತ್ತದೆ” ಅಂತಾ ಸೋಷಿಯಲ್ ಮೀಡಿಯಾದಲ್ಲಿ ಭಾವನಾ ಬರೆದುಕೊಂಡಿದ್ದಾರೆ‌.

View this post on Instagram

A post shared by Bhavana Ramanna (@bhavanaramannaofficial)

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಕುಂದಾಪುರದಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತಿದ್ದ ತೆರಿಗೆ ಪಾವತಿಸದ ಬಸ್‌ಗಳು ವಶಕ್ಕೆ

Next Post

57 ವರ್ಷಗಳಲ್ಲಿ ಮೊದಲ ಬಾರಿಗೆ ಅರ್ಜೆಂಟೀನಾಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ

Related Posts

94ನೇ ವಯಸ್ಸಿಗೆ ಕೊನೆಯುಸಿರೆಳೆದ ದಕ್ಷಿಣ ಭಾರತದ ಖ್ಯಾತ ನಟಿ ಸಾಹುಕಾರ್ ಜಾನಕಿ
ಸಿನಿಮಾ

94ನೇ ವಯಸ್ಸಿಗೆ ಕೊನೆಯುಸಿರೆಳೆದ ದಕ್ಷಿಣ ಭಾರತದ ಖ್ಯಾತ ನಟಿ ಸಾಹುಕಾರ್ ಜಾನಕಿ

August 21, 2026
13
ಗೋಲ್ಡನ್ ಮೂವಿಸ್​ನಿಂದ ನಿರ್ಮಾಣವಾಗಿರುವ ‘ಪಿಚ್ಚರ್’ ಇದೇ ಆಗಸ್ಟ್ 7ರಂದು ರಾಜ್ಯಾದ್ಯಂತ ತೆರೆಗೆ
ಸಿನಿಮಾ

ಗೋಲ್ಡನ್ ಮೂವಿಸ್​ನಿಂದ ನಿರ್ಮಾಣವಾಗಿರುವ ‘ಪಿಚ್ಚರ್’ ಇದೇ ಆಗಸ್ಟ್ 7ರಂದು ರಾಜ್ಯಾದ್ಯಂತ ತೆರೆಗೆ

August 5, 2026
41
Next Post
57 ವರ್ಷಗಳಲ್ಲಿ ಮೊದಲ ಬಾರಿಗೆ ಅರ್ಜೆಂಟೀನಾಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ

57 ವರ್ಷಗಳಲ್ಲಿ ಮೊದಲ ಬಾರಿಗೆ ಅರ್ಜೆಂಟೀನಾಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ

Discussion about this post

Recent News

ದಕ್ಷಿಣ ಕನ್ನಡ ಜಿಲ್ಲೆಯ SIR ಕರಡು ಮತದಾರರ ಪಟ್ಟಿ ಪ್ರಕಟ: ಹೊಂದಾಣಿಕೆಯಾಗದ ಹಾಗೂ ತಾರ್ಕಿಕ ದೋಷವಿರುವ 1.50 ಲಕ್ಷ ಮಂದಿಗೆ ನೋಟಿಸ್ ಜಾರಿ

ದಕ್ಷಿಣ ಕನ್ನಡ ಜಿಲ್ಲೆಯ SIR ಕರಡು ಮತದಾರರ ಪಟ್ಟಿ ಪ್ರಕಟ: ಹೊಂದಾಣಿಕೆಯಾಗದ ಹಾಗೂ ತಾರ್ಕಿಕ ದೋಷವಿರುವ 1.50 ಲಕ್ಷ ಮಂದಿಗೆ ನೋಟಿಸ್ ಜಾರಿ

August 24, 2026
53
ಆ.25 ರಂದು ಮೀಲಾದುನ್ನಬಿ :ಕೋಟೆಪುರದಿಂದ ದರ್ಗಾ ವರೆಗೆ ಕಾಲ್ನಡಿಗೆ ಜಾಥಾ, ಬೈಕ್ ಗಳಲ್ಲಿ ಹಸಿರು ಧ್ವಜ ಕಟ್ಟುವುದು, ವಾಹನ ರ‍್ಯಾಲಿಗೆ ಅವಕಾಶ ಇಲ್ಲ :ಹನೀಫ್ ಹಾಜಿ

ಆ.25 ರಂದು ಮೀಲಾದುನ್ನಬಿ :ಕೋಟೆಪುರದಿಂದ ದರ್ಗಾ ವರೆಗೆ ಕಾಲ್ನಡಿಗೆ ಜಾಥಾ, ಬೈಕ್ ಗಳಲ್ಲಿ ಹಸಿರು ಧ್ವಜ ಕಟ್ಟುವುದು, ವಾಹನ ರ‍್ಯಾಲಿಗೆ ಅವಕಾಶ ಇಲ್ಲ :ಹನೀಫ್ ಹಾಜಿ

August 24, 2026
30
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ದಕ್ಷಿಣ ಕನ್ನಡ ಜಿಲ್ಲೆಯ SIR ಕರಡು ಮತದಾರರ ಪಟ್ಟಿ ಪ್ರಕಟ: ಹೊಂದಾಣಿಕೆಯಾಗದ ಹಾಗೂ ತಾರ್ಕಿಕ ದೋಷವಿರುವ 1.50 ಲಕ್ಷ ಮಂದಿಗೆ ನೋಟಿಸ್ ಜಾರಿ

ದಕ್ಷಿಣ ಕನ್ನಡ ಜಿಲ್ಲೆಯ SIR ಕರಡು ಮತದಾರರ ಪಟ್ಟಿ ಪ್ರಕಟ: ಹೊಂದಾಣಿಕೆಯಾಗದ ಹಾಗೂ ತಾರ್ಕಿಕ ದೋಷವಿರುವ 1.50 ಲಕ್ಷ ಮಂದಿಗೆ ನೋಟಿಸ್ ಜಾರಿ

August 24, 2026
ಆ.25 ರಂದು ಮೀಲಾದುನ್ನಬಿ :ಕೋಟೆಪುರದಿಂದ ದರ್ಗಾ ವರೆಗೆ ಕಾಲ್ನಡಿಗೆ ಜಾಥಾ, ಬೈಕ್ ಗಳಲ್ಲಿ ಹಸಿರು ಧ್ವಜ ಕಟ್ಟುವುದು, ವಾಹನ ರ‍್ಯಾಲಿಗೆ ಅವಕಾಶ ಇಲ್ಲ :ಹನೀಫ್ ಹಾಜಿ

ಆ.25 ರಂದು ಮೀಲಾದುನ್ನಬಿ :ಕೋಟೆಪುರದಿಂದ ದರ್ಗಾ ವರೆಗೆ ಕಾಲ್ನಡಿಗೆ ಜಾಥಾ, ಬೈಕ್ ಗಳಲ್ಲಿ ಹಸಿರು ಧ್ವಜ ಕಟ್ಟುವುದು, ವಾಹನ ರ‍್ಯಾಲಿಗೆ ಅವಕಾಶ ಇಲ್ಲ :ಹನೀಫ್ ಹಾಜಿ

August 24, 2026
ಬಂಟ್ವಾಳ: ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ; ಸವಾರನಿಗೆ ಗಾಯ

ಬಂಟ್ವಾಳ: ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ; ಸವಾರನಿಗೆ ಗಾಯ

August 24, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d