• About us
  • Contact us
  • Disclaimer
Tuesday, September 8, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

94ನೇ ವಯಸ್ಸಿಗೆ ಕೊನೆಯುಸಿರೆಳೆದ ದಕ್ಷಿಣ ಭಾರತದ ಖ್ಯಾತ ನಟಿ ಸಾಹುಕಾರ್ ಜಾನಕಿ

Coastal Times by Coastal Times
August 21, 2026
in ಸಿನಿಮಾ
94ನೇ ವಯಸ್ಸಿಗೆ ಕೊನೆಯುಸಿರೆಳೆದ ದಕ್ಷಿಣ ಭಾರತದ ಖ್ಯಾತ ನಟಿ ಸಾಹುಕಾರ್ ಜಾನಕಿ
13
VIEWS
WhatsappTelegramShare on FacebookShare on Twitter

ಚೆನ್ನೈ : ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಹಿರಿಯ ನಟಿ, ಕನ್ನಡ ಸೇರಿದಂತೆ 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಸಾಹುಕಾರ್​ ಜಾನಕಿ ಅವರು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದರು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಚೆನ್ನೈನ ಅಲ್ವಾರ್‌ಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನವನ್ನು ನಾಡಿಗರ್ ಸಂಗಮ್ ಅಧ್ಯಕ್ಷ ಮತ್ತು ನಟ ನಾಸರ್ ಅವರಿಂದು ದೃಢಪಡಿಸಿದ್ದಾರೆ.

ಸಾಹುಕಾರ್ ಜಾನಕಿ ಮಧ್ಯಾಹ್ನ 1:59ಕ್ಕೆ ನಿಧನರಾದರೆಂದು ನಾಸರ್ ತಿಳಿಸಿದ್ದಾರೆ. ಅವರ ಪಾರ್ಥೀವ ಶರೀರವನ್ನು ಸಂಜೆ 5 ಗಂಟೆಯಿಂದ ತೇನಾಂಪೇಟೆಯ ಸೆಂಟೋಫ್ ರಸ್ತೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು.

ಬಣ್ಣದ ಲೋಕದ ಸುದೀರ್ಘ ಪಯಣ: ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಶಂಕರಮಂಚಿ ಜಾನಕಿಯಾಗಿ ಜನಿಸಿದ ಜಾನಕಿ, ಮಹಿಳೆಯರಿಗೆ ಸಿನಿಮಾದಲ್ಲಿ ಅವಕಾಶಗಳು ಸೀಮಿತವಾಗಿದ್ದ ಯುಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು, ಅವರು ಈಗ ಆಲ್ ಇಂಡಿಯಾ ರೇಡಿಯೋ ಎಂದು ಕರೆಯಲ್ಪಡುವ ಆಕಾಶವಾಣಿ ಮದ್ರಾಸ್‌ನಲ್ಲಿ ರೇಡಿಯೋ ಜಾಕಿಯಾಗಿ ಕೆಲಸ ಮಾಡಿದರು. 1950ರಲ್ಲಿ ಎಲ್.ವಿ. ಪ್ರಸಾದ್ ನಿರ್ದೇಶನದ ತೆಲುಗು ಚಿತ್ರ ಸಾಹುಕಾರು ಮೂಲಕ ಅವರು ತಮ್ಮ ನಟನೆಯನ್ನು ಪ್ರಾರಂಭಿಸಿದರು. ಈ ಚಿತ್ರ ಅಂತಿಮವಾಗಿ ಅವರಿಗೆ ಜನಪ್ರಿಯ ಹೆಸರನ್ನು ತಂದುಕೊಟ್ಟಿತು. ಅದುವೇ ಸಾಹುಕಾರ್ ಜಾನಕಿ. ನಂತರ 1952ರಲ್ಲಿ ‘ವಳಯಾಪತಿ’ ತಮಿಳು ಚಿತ್ರರಂಗವನ್ನು ಪ್ರವೇಶಿಸಿದರು. ಬಳಿಕ ತಮಿಳಿನ ಖ್ಯಾತ ನಟಿಯಾಗಿ ಗುರುತಿಸಿಕೊಂಡರು.

ಕನ್ನಡ ಚಿತ್ರರಂಗದ ಜೊತೆಗಿನ ನಂಟು: ಕನ್ನಡ ಚಿತ್ರರಂಗಕ್ಕೂ ಸಾಹುಕಾರ್ ಜಾನಕಿ ಅವರ ಕೊಡುಗೆ ಅಪಾರ. 1954ರ ‘ದೇವಕನ್ನಿಕಾ’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಅವರು, 1959ರಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ಅಭಿನಯಿಸಿದ ‘ಮಹಿಷಾಸುರ ಮರ್ದಿನಿ’ ಚಿತ್ರವು ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ತಮ್ಮ ಅದ್ಭುತ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದರು.

ಸಾಹುಕಾರ್ ಜಾನಕಿ ಅವರ ಸುದೀರ್ಘ ಕಲಾ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2022ರಲ್ಲಿ ದೇಶದ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

1988ರಲ್ಲಿ ನಡೆದ ಕೊಲೆ ಪ್ರಕರಣ ಮುಕ್ತಾಯಗೊಳಿಸಿರುವ ಸುಪ್ರೀಂ ಕೋರ್ಟ್, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 105 ವರ್ಷದ ವೃದ್ಧನಿಗೆ ​ಸೆರೆವಾಸದಿಂದ ಮುಕ್ತಿ

Next Post

ಬೆಳ್ತಂಗಡಿ: ಸುಮಂತ್ ಸಂಶಯಾಸ್ಪದ ಸಾವಿನ ಪ್ರಕರಣ: ಸತ್ಯ ಬಯಲಿಗೆಳೆಯಲು ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್ ಪರೀಕ್ಷೆ

Related Posts

13 ವರ್ಷಗಳ ದುನಿಯಾ ವಿಜಯ್-ನಾಗರತ್ನ ಕಾನೂನು ಸಮರ ಅಂತ್ಯ: ಪತ್ನಿಗೆ 2 ಕೋಟಿ ರೂ ಜೀವನಾಂಶ ನೀಡಲು ಹೈಕೋರ್ಟ್ ಆದೇಶ
ಸಿನಿಮಾ

13 ವರ್ಷಗಳ ದುನಿಯಾ ವಿಜಯ್-ನಾಗರತ್ನ ಕಾನೂನು ಸಮರ ಅಂತ್ಯ: ಪತ್ನಿಗೆ 2 ಕೋಟಿ ರೂ ಜೀವನಾಂಶ ನೀಡಲು ಹೈಕೋರ್ಟ್ ಆದೇಶ

September 3, 2026
49
ಗೋಲ್ಡನ್ ಮೂವಿಸ್​ನಿಂದ ನಿರ್ಮಾಣವಾಗಿರುವ ‘ಪಿಚ್ಚರ್’ ಇದೇ ಆಗಸ್ಟ್ 7ರಂದು ರಾಜ್ಯಾದ್ಯಂತ ತೆರೆಗೆ
ಸಿನಿಮಾ

ಗೋಲ್ಡನ್ ಮೂವಿಸ್​ನಿಂದ ನಿರ್ಮಾಣವಾಗಿರುವ ‘ಪಿಚ್ಚರ್’ ಇದೇ ಆಗಸ್ಟ್ 7ರಂದು ರಾಜ್ಯಾದ್ಯಂತ ತೆರೆಗೆ

August 5, 2026
41
Next Post
ಬೆಳ್ತಂಗಡಿ: ಸುಮಂತ್ ಸಂಶಯಾಸ್ಪದ ಸಾವಿನ ಪ್ರಕರಣ: ಸತ್ಯ ಬಯಲಿಗೆಳೆಯಲು ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್ ಪರೀಕ್ಷೆ

ಬೆಳ್ತಂಗಡಿ: ಸುಮಂತ್ ಸಂಶಯಾಸ್ಪದ ಸಾವಿನ ಪ್ರಕರಣ: ಸತ್ಯ ಬಯಲಿಗೆಳೆಯಲು ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್ ಪರೀಕ್ಷೆ

Discussion about this post

Recent News

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

September 7, 2026
35
ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

September 7, 2026
20
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

September 7, 2026
ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

September 7, 2026
ಮಂಗಳೂರು-ಗೋವಾ ಕ್ರೂಸ್ ಸೇವೆ, ಹೌಸ್ ಬೋಟ್ ಆರಂಭಕ್ಕೆ ಚಿಂತನೆ, ಕ್ಯಾಸಿನೊ ತೆರೆಯುವ ಪ್ರಸ್ತಾವನೆ ಇಲ್ಲ – ಸಚಿವ ಕೆ.ಜೆ. ಜಾರ್ಜ್

ಮಂಗಳೂರು-ಗೋವಾ ಕ್ರೂಸ್ ಸೇವೆ, ಹೌಸ್ ಬೋಟ್ ಆರಂಭಕ್ಕೆ ಚಿಂತನೆ, ಕ್ಯಾಸಿನೊ ತೆರೆಯುವ ಪ್ರಸ್ತಾವನೆ ಇಲ್ಲ – ಸಚಿವ ಕೆ.ಜೆ. ಜಾರ್ಜ್

September 7, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d