• About us
  • Contact us
  • Disclaimer
Monday, October 5, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪೈಲಟ್​ಗಳ ಹೊಡೆದಾಟದ ವೇಳೆ 34 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಫ್ಲೈದುಬೈ ವಿಮಾನ ಭೂಮಿಯತ್ತ ಬೀಳುತ್ತಿದ್ದಾಗ ಅದನ್ನು ನಿಯಂತ್ರಣಕ್ಕೆ ಪಡೆದು ಸೇಫ್​​ ಲ್ಯಾಂಡ್​ ಮಾಡಿದವರು ಯಾರು?

Coastal Times by Coastal Times
October 5, 2026
in ರಾಷ್ಟ್ರೀಯ ಸುದ್ದಿ
ಪೈಲಟ್​ಗಳ ಹೊಡೆದಾಟದ ವೇಳೆ 34 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಫ್ಲೈದುಬೈ ವಿಮಾನ ಭೂಮಿಯತ್ತ ಬೀಳುತ್ತಿದ್ದಾಗ ಅದನ್ನು ನಿಯಂತ್ರಣಕ್ಕೆ ಪಡೆದು ಸೇಫ್​​ ಲ್ಯಾಂಡ್​ ಮಾಡಿದವರು ಯಾರು?
39
VIEWS
WhatsappTelegramShare on FacebookShare on Twitter

ಇಸ್ರೇಲ್​: ಪೈಲಟ್​ಗಳ ಹೊಡೆದಾಟದ ವೇಳೆ 34 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಫ್ಲೈದುಬೈ ವಿಮಾನ ಭೂಮಿಯತ್ತ ಬೀಳುತ್ತಿದ್ದಾಗ ಅದನ್ನು ನಿಯಂತ್ರಣಕ್ಕೆ ಪಡೆದು ತುರ್ತು ಭೂಸ್ಪರ್ಶ ಮಾಡಿದ ನಿಗೂಢ ವ್ಯಕ್ತಿಗಳು ಯಾರು?.

ಈ ಪ್ರಶ್ನೆ ಎಲ್ಲರದ್ದಾಗಿದೆ. ಇಸ್ರೇಲ್‌ಗೆ ತೆರಳುತ್ತಿದ್ದ ಮತ್ತು 182 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನವು ಇದ್ದಕ್ಕಿದ್ದಂತೆ ತಲೆಕೆಳಗಾಗಿ ಬೀಳುತ್ತಿದ್ದಾಗ ಕಾಕ್‌ಪಿಟ್‌ಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಅದನ್ನು ನಿಯಂತ್ರಣಕ್ಕೆ ಪಡೆದಿದ್ದರು. ಘಟನೆ ನಡೆದು ಮೂರು ದಿನಗಳಾದರೂ ಅವರ ಗುರುತು ಮಾತ್ರ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿಲ್ಲ. ಫ್ಲೈದುಬೈ ಸಂಸ್ಥೆಯು ಅವರನ್ನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕರ್ತವ್ಯನಿರತ ಸಿಬ್ಬಂದಿ ಎಂದು ಮಾತ್ರ ಉಲ್ಲೇಖಿಸಿದೆ. ವಿಮಾನಯಾನ ಸಂಸ್ಥೆಯು ಈ ಬಗ್ಗೆ ಹೆಚ್ಚಿನ ವಿವರಗಳನ್ನು ಏಕೆ ನೀಡಿಲ್ಲ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ವಿಮಾನದ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕ ಡೇನಿಯಲ್ ಷ್ಲಿಕ್ಟರ್ ಎಂಬಾತ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆ ವ್ಯಕ್ತಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವಿಮಾನದಲ್ಲಿದ್ದ ಇಬ್ಬರು ಹೆಚ್ಚುವರಿ ಪೈಲಟ್​​ಗಳಿದ್ದರು: “ಅದು ನಿಜಕ್ಕೂ ಒಂದು ಪವಾಡ. ಪ್ರತಿ ವಿಮಾನದಲ್ಲೂ ಇಬ್ಬರು ಹೆಚ್ಚುವರಿ ಪೈಲಟ್‌ಗಳನ್ನು ಕರೆದೊಯ್ಯುವುದಿಲ್ಲ. ಆದರೆ, ಅಂದಿನ ಘಟನೆಯ ವೇಳೆ ಇಬ್ಬರು ಹೆಚ್ಚುವರಿ ಪೈಲಟ್​​ಗಳಿದ್ದರು. ಏಕೆಂದರೆ, ಅವರು ವಿಮಾನವನ್ನು ಟೆಲ್ ಅವಿವ್‌ನಿಂದ ಮರಳಿ ದುಬೈಗೆ ತರಬೇಕಿತ್ತು. ಅವರು ಅಲ್ಲಿರಲು ಇದೊಂದೇ ಕಾರಣವಾಗಿತ್ತು. ಈ ಪದ್ಧತಿಯನ್ನು ‘ಡೆಡ್‌ಹೆಡಿಂಗ್’ ಎಂದು ಕರೆಯಲಾಗುತ್ತದೆ” ಎಂದು ತಿಳಿಸಿದ್ದಾರೆ.

“ಕಾಕ್‌ಪಿಟ್‌ನಲ್ಲಿ ಏನಾಗುತ್ತಿದೆ ಎಂಬುದನ್ನು ಅರಿತ ಪ್ರಯಾಣಿಕರು ಕಿರುಚಾಡಿದಾಗ ಆ ಇಬ್ಬರು ವ್ಯಕ್ತಿಗಳು ತಕ್ಷಣವೇ ಅಲ್ಲಿಗೆ ಆಗಮಿಸಿದರು. ಸಹ ಪೈಲಟ್ ಕ್ಯಾಪ್ಟನ್ ಮೇಲೆ ಹಲ್ಲೆ ನಡೆಸುತ್ತಿದ್ದರು. ಎಲ್ಲೆಡೆ ರಕ್ತ ಚೆಲ್ಲಿತ್ತು. ತೀವ್ರವಾಗಿ ಗಾಯಗೊಂಡಿದ್ದರೂ, ಕ್ಯಾಪ್ಟನ್ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದ” ಎಂದಿದ್ದಾರೆ.

“ಒಬ್ಬ ಪ್ರಯಾಣಿಕ ಸಹ-ಪೈಲಟ್‌ನನ್ನು ಹಿಡಿದು ಹೊರಗೆ ಎಳೆದುಕೊಂಡು ಹೋದ. ನಂತರ ವಿಮಾನದಲ್ಲಿ ಹೆಚ್ಚುವರಿ ಪೈಲಟ್‌ಗಳಲ್ಲಿ ಒಬ್ಬರು ಆ ಗುಂಪಿನ ನಡುವೆಯೇ ಹಾದು ಹೋಗಿ ಕಾಕ್‌ಪಿಟ್‌ ಪ್ರವೇಶಿಸಿ ವಿಮಾನವನ್ನು ನಿಯಂತ್ರಣಕ್ಕೆ ಪಡೆದರು. ನಂತರ ಇನ್ನೊಬ್ಬ ಪೈಲಟ್ ಕೂಡ ಅವರೊಂದಿಗೆ ಸೇರಿಕೊಂಡರು” ಎಂದು ಷ್ಲಿಕ್ಟರ್ ವಿವರಿಸಿದ್ದಾರೆ.

ಇತರರಂತೆ ಅವರೂ ವೀರರೇ: “ಆ ಇಬ್ಬರು ವ್ಯಕ್ತಿಗಳು ಎಲ್ಲಿಂದ ಬಂದರು ಎಂಬುದು ಮೊದಲು ಖಚಿತವಿರಲಿಲ್ಲ. ಮೊದಲ ವ್ಯಕ್ತಿ (ಪೈಲಟ್​) ಅತ್ಯಂತ ವೇಗವಾಗಿ ಪ್ರತಿಕ್ರಿಯಿಸಿದ. ಆತ ನಿಜವಾಗಿಯೂ ಚಾಣಾಕ್ಷ್ಯ. ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡರು. ಆ ವಿಮಾನದಲ್ಲಿದ್ದ ಇತರ ವೀರರಷ್ಟೇ ಇವರೂ ಕೂಡ ನಮ್ಮ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು” ಎಂದು ಹೇಳಿದ್ದಾರೆ.

“ಅವರಿಬ್ಬರು ಒಳಹೋಗಿ ಕಾಕ್​​ಪಿಟ್​ ಬಾಗಿಲನ್ನು ಮುಚ್ಚಿದರು. ಇದರಿಂದ ಹೊರಗಿದ್ದ ಪ್ರಯಾಣಿಕರಲ್ಲಿ ಭೀತಿ ಮೂಡಿತು. ಅಲ್ಲಿ ಯಾರನ್ನೂ ನಂಬುವ ಹಾಗೆ ಇರಲಿಲ್ಲ. ಅವರು 10 ನಿಮಿಷದಲ್ಲಿ ವಿಮಾನವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದು, ತುರ್ತು ಭೂಸ್ಪರ್ಶಕ್ಕಾಗಿ ಮೇ- ಡೇ (ತುರ್ತು ಸಹಾಯ) ಬಟನ್​ ಒತ್ತಿದರು. ಇಷ್ಟಾದರೂ ನಾವು ಅನುಮಾನದಲ್ಲೇ ಇದ್ದೆವು. ಅವರು ವಿಮಾನವನ್ನು ಇರಾನ್​ ಅಥವಾ ಬೇರೆಡೆ ಅಪಹರಿಸಿಕೊಂಡು ಒಯ್ದರೆ ಹೇಗೆ? ಎಂಬ ಭೀತಿಯಲ್ಲಿದ್ದೆವು” ಎಂದು ತಿಳಿಸಿದ್ದಾರೆ.

“ಸುಮಾರು 45 ನಿಮಿಷಗಳ ನಂತರ, ಸೌದಿ ಅರೇಬಿಯಾದ ತಬುಕ್‌ನಲ್ಲಿ ವಿಮಾನವನ್ನು ಇಳಿಸುವುದಾಗಿ ಮತ್ತು ಎಲ್ಲವೂ ಸರಿಯಾಗಲಿದೆ ಎಂದು ಘೋಷಿಸಿದರು. ಆ ಘೋಷಣೆಯ ನಂತರ ನನ್ನನ್ನೂ ಸೇರಿದಂತೆ ಎಲ್ಲ ಪ್ರಯಾಣಿಕರಲ್ಲಿ ನಂಬಿಕೆ ಬಂದಿತು” ಎಂದು ಅಂದಿನ ಘಟನೆಯನ್ನು ವಿವರಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಹಣೆಗೆ ಮುತ್ತಿಟ್ಟು, ಸ್ಮಿತ್ ಮಚ್ಚರ್ ಆರೋಗ್ಯ ವಿಚಾರಿಸಿದ ಯುಎಇ ಉಪಪ್ರಧಾನಿ, ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

Related Posts

ಹಣೆಗೆ ಮುತ್ತಿಟ್ಟು, ಸ್ಮಿತ್ ಮಚ್ಚರ್ ಆರೋಗ್ಯ ವಿಚಾರಿಸಿದ ಯುಎಇ ಉಪಪ್ರಧಾನಿ, ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ರಾಷ್ಟ್ರೀಯ ಸುದ್ದಿ

ಹಣೆಗೆ ಮುತ್ತಿಟ್ಟು, ಸ್ಮಿತ್ ಮಚ್ಚರ್ ಆರೋಗ್ಯ ವಿಚಾರಿಸಿದ ಯುಎಇ ಉಪಪ್ರಧಾನಿ, ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

October 4, 2026
58
ಬ್ರಿಕ್ಸ್ 2026 ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮನ; ಇಂದು ಪ್ರಧಾನಿ ಮೋದಿ ಜೊತೆ ಸಭೆ
ರಾಷ್ಟ್ರೀಯ ಸುದ್ದಿ

ಬ್ರಿಕ್ಸ್ 2026 ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮನ; ಇಂದು ಪ್ರಧಾನಿ ಮೋದಿ ಜೊತೆ ಸಭೆ

September 11, 2026
13

Discussion about this post

Recent News

ಪೈಲಟ್​ಗಳ ಹೊಡೆದಾಟದ ವೇಳೆ 34 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಫ್ಲೈದುಬೈ ವಿಮಾನ ಭೂಮಿಯತ್ತ ಬೀಳುತ್ತಿದ್ದಾಗ ಅದನ್ನು ನಿಯಂತ್ರಣಕ್ಕೆ ಪಡೆದು ಸೇಫ್​​ ಲ್ಯಾಂಡ್​ ಮಾಡಿದವರು ಯಾರು?

ಪೈಲಟ್​ಗಳ ಹೊಡೆದಾಟದ ವೇಳೆ 34 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಫ್ಲೈದುಬೈ ವಿಮಾನ ಭೂಮಿಯತ್ತ ಬೀಳುತ್ತಿದ್ದಾಗ ಅದನ್ನು ನಿಯಂತ್ರಣಕ್ಕೆ ಪಡೆದು ಸೇಫ್​​ ಲ್ಯಾಂಡ್​ ಮಾಡಿದವರು ಯಾರು?

October 5, 2026
39
ಹಣೆಗೆ ಮುತ್ತಿಟ್ಟು, ಸ್ಮಿತ್ ಮಚ್ಚರ್ ಆರೋಗ್ಯ ವಿಚಾರಿಸಿದ ಯುಎಇ ಉಪಪ್ರಧಾನಿ, ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಹಣೆಗೆ ಮುತ್ತಿಟ್ಟು, ಸ್ಮಿತ್ ಮಚ್ಚರ್ ಆರೋಗ್ಯ ವಿಚಾರಿಸಿದ ಯುಎಇ ಉಪಪ್ರಧಾನಿ, ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

October 4, 2026
58
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಪೈಲಟ್​ಗಳ ಹೊಡೆದಾಟದ ವೇಳೆ 34 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಫ್ಲೈದುಬೈ ವಿಮಾನ ಭೂಮಿಯತ್ತ ಬೀಳುತ್ತಿದ್ದಾಗ ಅದನ್ನು ನಿಯಂತ್ರಣಕ್ಕೆ ಪಡೆದು ಸೇಫ್​​ ಲ್ಯಾಂಡ್​ ಮಾಡಿದವರು ಯಾರು?

ಪೈಲಟ್​ಗಳ ಹೊಡೆದಾಟದ ವೇಳೆ 34 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಫ್ಲೈದುಬೈ ವಿಮಾನ ಭೂಮಿಯತ್ತ ಬೀಳುತ್ತಿದ್ದಾಗ ಅದನ್ನು ನಿಯಂತ್ರಣಕ್ಕೆ ಪಡೆದು ಸೇಫ್​​ ಲ್ಯಾಂಡ್​ ಮಾಡಿದವರು ಯಾರು?

October 5, 2026
ಹಣೆಗೆ ಮುತ್ತಿಟ್ಟು, ಸ್ಮಿತ್ ಮಚ್ಚರ್ ಆರೋಗ್ಯ ವಿಚಾರಿಸಿದ ಯುಎಇ ಉಪಪ್ರಧಾನಿ, ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಹಣೆಗೆ ಮುತ್ತಿಟ್ಟು, ಸ್ಮಿತ್ ಮಚ್ಚರ್ ಆರೋಗ್ಯ ವಿಚಾರಿಸಿದ ಯುಎಇ ಉಪಪ್ರಧಾನಿ, ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

October 4, 2026
ಮಂಗಳೂರು: ಏಷ್ಯನ್ ಗೇಮ್ಸ್‌ನ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಬಿಜೆಪಿಯಿಂದ ಅಭಿನಂದನೆ

ಮಂಗಳೂರು: ಏಷ್ಯನ್ ಗೇಮ್ಸ್‌ನ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಬಿಜೆಪಿಯಿಂದ ಅಭಿನಂದನೆ

October 3, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d