• About us
  • Contact us
  • Disclaimer
Thursday, October 15, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉಳ್ಳಾಲದ ಮಂಜನಾಡಿ ಗ್ರಾಮದ ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಅಜ್ಜಿ‌-ಇಬ್ಬರು ಮೊಮ್ಮಕ್ಕಳು ಸಾವು, ನಾಲ್ವರ ರಕ್ಷಣೆ

Coastal Times by Coastal Times
May 30, 2025
in ಕರಾವಳಿ
ಉಳ್ಳಾಲದ ಮಂಜನಾಡಿ ಗ್ರಾಮದ ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಅಜ್ಜಿ‌-ಇಬ್ಬರು ಮೊಮ್ಮಕ್ಕಳು ಸಾವು, ನಾಲ್ವರ ರಕ್ಷಣೆ
84
VIEWS
WhatsappTelegramShare on FacebookShare on Twitter

ಕೊಣಾಜೆ: ಉಳ್ಳಾಲದ ಮಂಜನಾಡಿ ಗ್ರಾಮದ ಮೊಂಟೆಪದವು ಕೋಡಿಯಲ್ಲಿ ಗುಡ್ಡ ಜರಿದು ಸೀತಾರಾಂ ಮನೆಯವರು ಅವಶೇಷಗಳಡಿ ಸಿಲುಕಿಕೊಂಡ ಘಟನೆ ನಡೆದಿದೆ. ಮಣ್ಣಿನಡಿ ಸಿಲುಕಿ ಸೀತಾರಾಂ ತಾಯಿ ಪ್ರೇಮ (50) ಹಾಗೂ ಮಗ ಆರ್ಯನ್(2) ಮೃತಪಟ್ಟಿದ್ದಾರೆ. ಇವರ ತಂದೆ ಕಾಂತಪ್ಪ ಪೂಜಾರಿ ಅವರ ಕಾಲು ಮುರಿದಿದೆ. ಸೀತಾರಾಂ ಅವರ 2ನೇ ಮಗನನ್ನು ರಕ್ಷಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ. ಇನ್ನು ಪತ್ನಿ ಅಶ್ವಿನಿ ಅದೇ ಅವಶೇಷಗಳಡಿ ಸಿಲುಕಿದ್ದು, ಸ್ಥಳೀಯರು, ಎನ್​ಡಿಆರ್​ಎಫ್​ ಹಾಗೂ ಎಸ್​ಡಿಆರ್​ಎಫ್​, ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಭಾರಿ ಮಳೆಗೆ ತಡರಾತ್ರಿ ಕುಸಿದು ಬಿತ್ತು ಗುಡ್ಡ: ಮನೆಯೇ ಸರ್ವನಾಶ: ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಮಳೆಯಿಂದ ಗುಡ್ಡ ಕುಸಿದು, ಪಕ್ಕದಲ್ಲೇ ಇದ್ದ ಕಾಂತಪ್ಪ ಪುಜಾರಿ ಅನ್ನೋರ ಮನೆಮೇಲೆ ಬಿದ್ದಿದೆ. ಗುಡ್ಡ ಕುಸಿಯುವ ದೊಡ್ಡ ಶಬ್ಧ ಕೇಳಿ ಕಾಂತಪ್ಪ ಪೂಜಾರಿ ಎದ್ದು ಹೊರಗೆ ಓಡಿ ಬಂದಿದ್ದಾರೆ. ಅಷ್ಟರಲ್ಲೇ ಗುಡ್ಡದ ಹೊಡೆತಕ್ಕೆ ಇಡೀ ಮನೆಯೇ ಕುಸಿದು ಬಿದ್ದಿದೆ. ಕಾಂತಪ್ಪ ಪೂಜಾರಿ ಹೊರಗೆ ಓಡಿ ಬರುಷ್ಟರಲ್ಲಿ ಅವರ ಮೇಲೂ ಮನೆಯ ಸ್ಲ್ಯಾಬ್ ಬಿದ್ದಿದೆ. ಸದ್ಯ ಕಾಂತಪ್ಪ ಪೂಜಾರಿ ಕಾಲು ಮುರಿದಿದ್ದು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮನೆ ಕುಸಿದು ಕಾಂತಪ್ಪ ಪೂಜಾರಿ ಪತ್ನಿ ಪ್ರೇಮಾ ಮೃತಪಟ್ಟಿದ್ದಾರೆ.

ನನ್ನನ್ನ ಬಿಡಿ, ಮಕ್ಕಳನ್ನ ಉಳಿಸಿ ಅಂತಾ ಅಂಗಲಾಚಿದ ತಾಯಿ : ಇನ್ನು ವಿಷ್ಯ ತಿಳಿದು ಆಸೀಫ್ ಅನ್ನೋ ಸ್ಥಳೀಯರು ತಾಯಿ ಮಗು ಸಿಲುಕಿದ ಸ್ಥಳಕ್ಕೆ ಕಷ್ಟ ಪಟ್ಟು ತೆರಳಿದ್ದಾರೆ. ಈ ವೇಳೆ ತಾಯಿ ಅಶ್ವಿನಿಗೆ ನೀರು ಕೊಟ್ಟು ಸಂತೈಸಿದ್ದಾರೆ. ಆದರೆ ಮನೆಯೇ ಆಕೆ ಮೇಲೆ ಕುಸಿದು ಅರ್ಧ ಮಾತ್ರ ಹೊರಗೆ ಇದ್ದಿದ್ರಿಂದ ಆಕೆಯನ್ನ ಹೊರಗೆ ತೆಗೆಯಲು ಆಗಲಿಲ್ಲ. ಈ ವೇಳೆ ಈ ತಾಯಿ ನನ್ನನ್ನ ಬಿಟ್ಟು ಬಿಡಿ, ಮಕ್ಕಳನ್ನ ರಕ್ಷಿಸಿ ಅಂತಾ ಅಂಗಲಾಚಿದ್ದರು.

ದುರಂತ ಅಂದರೆ ಮನೆ ಕುಸಿದು ಅಸ್ವಸ್ಥಗೊಂಡಿದ್ದ ಅಶ್ವಿನಿಯ ಪುತ್ರ ಆರ್ಯನ್ ಕೊನೆಯುಸಿರು ಎಳೆದಿದ್ದ. ನಿರಂತರ ಕಾರ್ಯಾಚರಣೆ ನಡೆಸಿ, ಆರ್ಯನ್ ಮೃತದೇಹವನ್ನ ಹೊರಗೆ ತೆಗೆಯಲಾಗಿತ್ತು. ಬಳಿಕ ಕೆಲವೇ ಹೊತ್ತಿನಲ್ಲಿ ಅಶ್ವಿನಿ ತೋಳಿನಲ್ಲಿದ್ದ ಮತ್ತೊಂದು ಮಗು ಆರುಷ್​ನನ್ನ ಎಸ್​ಡಿಆರ್​ಎಫ್​, ಎನ್​ಡಿಆರ್​​ಎಫ್​​ ಸಿಬ್ಬಂದಿ ರಕ್ಷಣೆ ಮಾಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದೆ.

ಈ ಬಗ್ಗೆ ರಕ್ಷಣಾ ತಂಡದ ಭಾಗವಾಗಿರುವ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯ ಡಾ.ವಿಕ್ರಂ ಶೆಟ್ಟಿ ಮಾಹಿತಿ ನೀಡಿದ್ದು, ಒಂದು ಮಗು ಮೃತಪಟ್ಟಿದೆ. ಅವಶೇಷಗಳಡಿ ಸಿಲುಕಿರುವ ಇನ್ನೊಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಮಕ್ಕಳ ತಾಯಿ ಅಶ್ವಿನಿ ಉಸಿರಾಡುತ್ತಿದ್ದು, ಕೈಗಳನ್ನು ಅಲ್ಲಾಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

‘ನಿನ್ನನ್ನು ಹೇಗೆ ಕೊಲ್ಲುತ್ತೇವೆಂದು ಅಲ್ಲಾನಿಗೂ ಗೊತ್ತಿಲ್ಲ’ ಹಿಂದೂ ಮುಖಂಡನಿಗೆ ಜೈಷ್ ಉಗ್ರ ಸಂಘಟನೆ ಹೆಸರಿನಲ್ಲಿ ಬೆದರಿಕೆ

Next Post

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ( ರಿ,) ಮೆಸ್ಕಾಂ ಉಪಾಧ್ಯಕ್ಷ ಶ್ರೀ ಹೆಚ್. ಎಸ್. ಗುರುಮೂರ್ತಿಯವರಿಗೆ ಬೀಳ್ಕೊಡುಗೆ

Related Posts

ಛಾಯಾಗ್ರಾಹಕರ ಬಗ್ಗೆ ಅವಹೇಳನಕಾರಿ ಪೋಸ್ಟ್: ಮಂಗಳೂರಿನ ಯುಟ್ಯೂಬರ್ ವಿರುದ್ಧ ಕ್ರಮಕ್ಕೆ ಆಗ್ರಹ!!
ಕರಾವಳಿ

ಛಾಯಾಗ್ರಾಹಕರ ಬಗ್ಗೆ ಅವಹೇಳನಕಾರಿ ಪೋಸ್ಟ್: ಮಂಗಳೂರಿನ ಯುಟ್ಯೂಬರ್ ವಿರುದ್ಧ ಕ್ರಮಕ್ಕೆ ಆಗ್ರಹ!!

October 14, 2026
127
ಮಂಗಳೂರು ಏರ್ ಪೋರ್ಟ್ ನಲ್ಲಿ ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ ವಸೂಲಿ: ಟ್ಯಾಕ್ಸಿ ಚಾಲಕರಿಂದ 10 ದಿನಗಳ ಗಡುವು, ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ
ಕರಾವಳಿ

ಮಂಗಳೂರು ಏರ್ ಪೋರ್ಟ್ ನಲ್ಲಿ ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ ವಸೂಲಿ: ಟ್ಯಾಕ್ಸಿ ಚಾಲಕರಿಂದ 10 ದಿನಗಳ ಗಡುವು, ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ

October 14, 2026
34
Next Post
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ( ರಿ,) ಮೆಸ್ಕಾಂ ಉಪಾಧ್ಯಕ್ಷ  ಶ್ರೀ ಹೆಚ್. ಎಸ್. ಗುರುಮೂರ್ತಿಯವರಿಗೆ ಬೀಳ್ಕೊಡುಗೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ( ರಿ,) ಮೆಸ್ಕಾಂ ಉಪಾಧ್ಯಕ್ಷ ಶ್ರೀ ಹೆಚ್. ಎಸ್. ಗುರುಮೂರ್ತಿಯವರಿಗೆ ಬೀಳ್ಕೊಡುಗೆ

Discussion about this post

Recent News

ಮಂಗಳೂರು: ಚರ್ಚ್ ಪಾದ್ರಿ ವಿರುದ್ಧ 50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಆರೋಪ ; ಒಡನಾಡಿ ಸಂಸ್ಥೆಯಿಂದ ಮಂಗಳೂರು ಕಮಿಷನರಿಗೆ ದೂರು

ಮಂಗಳೂರು: ಚರ್ಚ್ ಪಾದ್ರಿ ವಿರುದ್ಧ 50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಆರೋಪ ; ಒಡನಾಡಿ ಸಂಸ್ಥೆಯಿಂದ ಮಂಗಳೂರು ಕಮಿಷನರಿಗೆ ದೂರು

October 15, 2026
141
ಛಾಯಾಗ್ರಾಹಕರ ಬಗ್ಗೆ ಅವಹೇಳನಕಾರಿ ಪೋಸ್ಟ್: ಮಂಗಳೂರಿನ ಯುಟ್ಯೂಬರ್ ವಿರುದ್ಧ ಕ್ರಮಕ್ಕೆ ಆಗ್ರಹ!!

ಛಾಯಾಗ್ರಾಹಕರ ಬಗ್ಗೆ ಅವಹೇಳನಕಾರಿ ಪೋಸ್ಟ್: ಮಂಗಳೂರಿನ ಯುಟ್ಯೂಬರ್ ವಿರುದ್ಧ ಕ್ರಮಕ್ಕೆ ಆಗ್ರಹ!!

October 14, 2026
127
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಚರ್ಚ್ ಪಾದ್ರಿ ವಿರುದ್ಧ 50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಆರೋಪ ; ಒಡನಾಡಿ ಸಂಸ್ಥೆಯಿಂದ ಮಂಗಳೂರು ಕಮಿಷನರಿಗೆ ದೂರು

ಮಂಗಳೂರು: ಚರ್ಚ್ ಪಾದ್ರಿ ವಿರುದ್ಧ 50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಆರೋಪ ; ಒಡನಾಡಿ ಸಂಸ್ಥೆಯಿಂದ ಮಂಗಳೂರು ಕಮಿಷನರಿಗೆ ದೂರು

October 15, 2026
ಛಾಯಾಗ್ರಾಹಕರ ಬಗ್ಗೆ ಅವಹೇಳನಕಾರಿ ಪೋಸ್ಟ್: ಮಂಗಳೂರಿನ ಯುಟ್ಯೂಬರ್ ವಿರುದ್ಧ ಕ್ರಮಕ್ಕೆ ಆಗ್ರಹ!!

ಛಾಯಾಗ್ರಾಹಕರ ಬಗ್ಗೆ ಅವಹೇಳನಕಾರಿ ಪೋಸ್ಟ್: ಮಂಗಳೂರಿನ ಯುಟ್ಯೂಬರ್ ವಿರುದ್ಧ ಕ್ರಮಕ್ಕೆ ಆಗ್ರಹ!!

October 14, 2026
ಮಂಗಳೂರು ಏರ್ ಪೋರ್ಟ್ ನಲ್ಲಿ ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ ವಸೂಲಿ: ಟ್ಯಾಕ್ಸಿ ಚಾಲಕರಿಂದ 10 ದಿನಗಳ ಗಡುವು, ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ

ಮಂಗಳೂರು ಏರ್ ಪೋರ್ಟ್ ನಲ್ಲಿ ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ ವಸೂಲಿ: ಟ್ಯಾಕ್ಸಿ ಚಾಲಕರಿಂದ 10 ದಿನಗಳ ಗಡುವು, ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ

October 14, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d