ತಿರುವನಂತಪುರ: ಕೇರಳದಲ್ಲಿ ಸತತ ನಾಲ್ಕನೇ ದಿನವೂ 20,000 ಕ್ಕೂ ಹೆಚ್ಚು ಹೊಸ ಕೋವಿಡ್–19 ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ಕಳೆದ 24 ಗಂಟೆಗಳಲ್ಲಿ 116 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದ ಪಾಸಿಟಿವಿಟಿ ದರ ಶೇ. 13.61ಕ್ಕೆ ಏರಿಕೆಯಾಗಿದೆ.
0,772 ಹೊಸ ಪ್ರಕರಣಗಳೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 33,70,137ಕ್ಕೆ ತಲುಪಿದೆ. ಕೇರಳದಲ್ಲಿ ಈ ವರೆಗೆ ಕೋವಿಡ್‌ನಿಂದಾಗಿ 16,701 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ತಿಳಿಸಿದೆ.
14,651 ಸೋಂಕಿತರು ಶುಕ್ರವಾರ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಅದರೊಂದಿಗೆ, ಕೇರಳದಲ್ಲಿ ಈ ವರೆಗೆ ಕೋವಿಡ್‌ನಿಂದ ಚೇತರಿಸಿಕೊಂಡವರ ಸಂಖ್ಯೆ 31,92,104ಕ್ಕೆ ತಲುಪಿದೆ. ಸದ್ಯ ಅಲ್ಲಿ 1,60,824 ಸಕ್ರಿಯ ಪ್ರಕರಣಗಳಿವೆ.
ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಜಿಲ್ಲೆಗಳು
ಮಲಪ್ಪುರಂ ;3670,
ಕೋಯಿಕ್ಕೋಡ್ ;2470,
ಎರ್ನಾಕುಲಂ; 2306,
ತ್ರಿಶೂರ್; 2287,
ಪಾಲಕ್ಕಾಡ್; 2070,
ಕೊಲ್ಲಂ; 1415,
ಆಲಪ್ಪುಳ;1214,
ಕಣ್ಣೂರು; 1123,
ತಿರುವನಂತಪುರ ;1082
ಮತ್ತು ಕೊಟ್ಟಾಯಂ ;1030.
Discover more from Coastal Times Kannada
Subscribe to get the latest posts sent to your email.
Discussion about this post