ಬೆಂಗಳೂರು, ನ 30: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ವಿಶೇಷ ನ್ಯಾಯಾಲಯಕ್ಕೆ ಅಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶಾರಿಕ್ ಹಾಗೂ ಸಯ್ಯದ್ ಯಾಸೀನ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದು, ಇದರಲ್ಲಿ ಶಂಕಿತ ಉಗ್ರರು ಕುಕ್ಕರ್ನಲ್ಲಿ ಬಾಂಬ್ ತೆಗೆದುಕೊಂಡು, ನಂತರ ಆಟೋದಲ್ಲಿ ಹೋಗಿ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿದ್ದರು ಎನ್ನಲಾಗಿದ್ದು, ಆದರೆ ಕಡಿಮೆ ಒತ್ತಡದಿಂದ ಆಟೋ ರಿಕ್ಷಾದಲ್ಲೇ ಕುಕ್ಕರ್ ಬಾಂಬ್ ಸ್ಫೋಟವಾಗಿತ್ತು ಎಂದು ತಿಳಿಸಲಾಗಿದೆ.
ಕುಕ್ಕರ್ ಬಾಂಬ್ ತಯಾರಿಕೆಗೆ ಸೈಯದ್ ಯಾಸೀನ್ ಸ್ಫೋಟಕ ವಸ್ತುಗಳ ಪೂರೈಕೆ ಮಾಡಿದ್ದ. ಮಹಮ್ಮದ್ ಶಾರೀಕ್ ದಾಳಿ ನಂತರ ಐಸಿಸ್ ಸೇರಲು ತೀರ್ಮಾನ ಮಾಡಿದ್ದ ಎನ್ನುವ ಸತ್ಯವೊಂದು ಬಯಲಾಗಿದೆ. ಇನ್ನು ಮಂಗಳೂರು ಗೋಡೆ ಬರಹ ಪ್ರಕರಣ, ಶಿವಮೊಗ್ ಟ್ರಯಲ್ ಬಾಂಬ್ ಪ್ರಕರಣದಲ್ಲಿಯೂ ಶಾರೀ ಭಾಗಿಯಾಗಿದ್ದ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನು ಈ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಬೆಯುತ್ತಾ ಹೋದಂತೆಲ್ಲ ಮತ್ತಷ್ಟು ಭಯಾನಕ ಸತ್ಯಗಳು ಬಯಲಾಗುತ್ತಲೇ ಇವೆ. ಅದರಂತೆಯೇ ಇದೀಗ ಮಂಗಳೂರಿನ ಪ್ರಸಿದ್ದ ದೇವಸ್ಥಾನಗಳಲ್ಲಿ ಒಂದಾದ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಆರೋಪಿಗಳು ಬಾಂಬ್ ಹಾಕಿ, ಸಮಾಜದಲ್ಲಿ ಶಾಂತಿ ಭಂಗಕ್ಕೆ ಯತ್ನ ಮಾಡಿದ್ದರು ಎನ್ನಲಾಗಿದೆ. ಈ ಮೂಲಕ ಪ್ರಪಂಚವನ್ನು ಇಸ್ಲಾಂಕರಣ ಮಾಡುವ ಉದ್ದೇಶ ಆರೋಪಿಗಳದ್ದಾಗಿತ್ತು. ಆದರೆ, ಮಂಗಳೂರಿನಲ್ಲಿ ದಾರಿ ಮಧ್ಯೆಯಲ್ಲಿಯೇ ಈ ಕುಕ್ಕರ್ ಬ್ಲಾಸ್ಟ್ ಆಗಿತ್ತು ಎನ್ನಲಾಗಿದೆ.
ಇದಕ್ಕೂ ಮೊದಲು ಶಂಕಿತರ ವಿರುದ್ಧ ಮಂಗಳೂರಿನಲ್ಲಿ ಉಗ್ರರ ಕೃತ್ಯಕ್ಕೆ ಸಂಬಂಧಿಸಿದ ಗೋಡೆ ಬರಹ ಪ್ರಕರಣ ದಾಖಲಾಗಿತ್ತು.ಇಸ್ಲಾಮಿಕ್ ಸ್ಟೇ ಟ್ ಬೆಂಬಲಿಸಲು ಗೋಡೆಬರಹ ಬರೆದಿದ್ದರು. ಜತೆಗೆ ಶಿವಮೊಗ್ಗದ ತುಂಗಾ ತೀರದಲ್ಲಿ ಪ್ರಾಯೋಗಿಕ ಸ್ಫೋಟಿಸುವ ಪ್ರಯೋಗ ನಡೆದಿತ್ತು. ಈ ಪ್ರಕರಣದಲ್ಲಿ 10 ಮಂದಿಯನ್ನು ಬಂಧಿಸಿದ್ದು, ಸೈಯದ್ ಹಾಗೂ ಶಾರುಕ್ ಪಾತ್ರದ ಬಗ್ಗೆಯೂ ಜುಲೈನಲ್ಲೇ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಉಲ್ಲೇ ಖೀಸಲಾಗಿದೆ ಎಂದು ಎನ್ಐಎ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post