• About us
  • Contact us
  • Disclaimer
Thursday, September 17, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬೆಳ್ತಂಗಡಿ : ದುಬೈಗೆ ಹೋಗಬೇಕಾದವ ಗಾಂಜಾ ಮತ್ತು MDMA ಮಾರಾಟ ಮಾಡಲು ಯತ್ನಿಸಿ ಜೈಲಿಗೆ

Coastal Times by Coastal Times
July 31, 2026
in ಕ್ರೈಮ್ ನ್ಯೂಸ್
ಬೆಳ್ತಂಗಡಿ : ದುಬೈಗೆ ಹೋಗಬೇಕಾದವ ಗಾಂಜಾ ಮತ್ತು MDMA ಮಾರಾಟ ಮಾಡಲು ಯತ್ನಿಸಿ ಜೈಲಿಗೆ
73
VIEWS
WhatsappTelegramShare on FacebookShare on Twitter

ಬೆಳ್ತಂಗಡಿ : ಬುಧವಾರ ಸಂಜೆ ಉದ್ಯೋಗಕ್ಕಾಗಿ ದುಬೈಗೆ ಹೋಗಲು ಸಿದ್ಧನಾಗಿದ್ದ 21 ವರ್ಷದ ಯುವಕನೊಬ್ಬ ಜೈಲುಪಾಲಾಗಿದ್ದಾನೆ. ಮಾದಕ ದ್ರವ್ಯ ಜಾಲಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಆತನನ್ನು ಬಂಧಿಸಿ MDMA, ಗಾಂಜಾ ಮತ್ತು 15.41 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಕುವೆಟ್ಟು ಗ್ರಾಮದ ಅನ್ಸಾರ್(21) ಎಂದು ಪೊಲೀಸರು ತಿಳಿಸಿದ್ದಾರೆ. ಬೆಳ್ತಂಗಡಿ ಪೊಲೀಸರು ಜುಲೈ 29ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಪಿಲಿಚಂಡಿಕಲ್ಲು ಪ್ರದೇಶದ ಖಾಸಗಿ ಕಟ್ಟಡದ ಮುಂಭಾಗದಲ್ಲಿ ಆಟೋ ರಿಕ್ಷಾ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯೊಬ್ಬ ಪೊಲೀಸ್ ಜೀಪನ್ನು ಕಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಹಿಡಿದು ವಿಚಾರಣೆ ನಡೆಸಿದಾಗ ತನ್ನ ಹೆಸರು ಅನ್ಸಾರ್ ಎಂದು ತಿಳಿಸಿದ್ದು, ಬಳಿಕ ಮತ್ತಷ್ಟು ವಿಚಾರಣೆ ನಡೆಸಿದಾಗ ಕುವೆಟ್ಟು ಗ್ರಾಮದ ಆಲಾದಿಕೊಟ್ಟಿಗೆ ನಿವಾಸಿ ಹಮ್ಜತ್ ಕರಾರ್ (31) ಎಂಬಾತನಿಗೆ 20 ಸಾವಿರ ರೂ. ಮುಂಗಡ ಹಣ ನೀಡಿ ಗಾಂಜಾ ಖರೀದಿಸಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ತಿಳಿಸಿದ್ದಾನೆ. ಹಮ್ಜತ್ ಕರಾರ್ ಕಾರಿನಲ್ಲಿ ಬಂದು 500 ಗ್ರಾಂ ಗಾಂಜಾವನ್ನು ನೀಡಿದ್ದು, ಪೊಲೀಸರು ಬರುತ್ತಿರುವುದನ್ನು ಕಂಡು ಕಾರನ್ನು ಬಿಟ್ಟು ಪರಾರಿಯಾಗಿರುವುದಾಗಿ ತಿಳಿಸಿದ್ದಾನೆ. ಬಳಿಕ ಕಾರನ್ನು ತಪಾಸಣೆ ನಡೆಸಿದಾಗ ಕಾರಿನೊಳಗೆ 7.60 ಲಕ್ಷ ರೂ. ಮೌಲ್ಯದ ಎಮ್.ಡಿ.ಎಮ್.ಎ ಪತ್ತೆಯಾಗಿದೆ.

ಆರೋಪಿ ಅನ್ಸಾರ್‌ ನನ್ನು ತಪಾಸಣೆ ಮಾಡಿದಾಗ ಆತನ ಬಳಿ ಸುಮಾರು 1,498 ರೂ. ಮೌಲ್ಯದ 20 ಗ್ರಾಂ ಗಾಂಜಾ, 30 ಸಾವಿರ ಮೌಲ್ಯದ ಒಂದು ಮೊಬೈಲ್, 200 ರೂಪಾಯಿ ಮೌಲ್ಯದ ಇತರ ವಸ್ತುಗಳು ಪತ್ತೆಯಾಗಿದೆ. ಪೊಲೀಸರು ಗಾಂಜಾ, MDMA, ಕಾರು, ಆಟೋ ರಿಕ್ಷಾ, ಮೊಬೈಲ್ ಫೋನ್ ಸೇರಿ ಒಟ್ಟು 15 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(C), 20(b)(ii)(A) ಹಾಗೂ 27Aರ ಅಡಿಯಲ್ಲಿ ಹಮ್ಜತ್ ಕರಾರ್ ಮತ್ತು ಅನ್ಸಾರ್ ವಿರುದ್ಧ ಜು.29 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿ ಅನ್ಸಾರ್ ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮನೆಗೆ ಜು.30 ರಂದು ಸಂಜೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ದುಬೈಗೆ ಹೋಗಬೇಕಾದವ ಜೈಲಿಗೆ: ಗಾಂಜಾ ಮತ್ತು ಎಮ್.ಡಿ.ಎಮ್.ಎ ಮಾರಾಟ ಮಾಡಲು ಯತ್ನಿಸಿ ಬೆಳ್ತಂಗಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ ಅನ್ಸಾರ್ ಜು.30 (ಇಂದು) ಸಂಜೆ ದುಬೈ ಉದ್ಯೋಗಕ್ಕಾಗಿ ಹೊಗಲು ತಯಾರಿ ಮಾಡಿದ್ದ ಎಂದು ತಿಳಿದು ಬಂದಿದೆ. ಆದರೆ ಮಾದಕವಸ್ತು ಪ್ರಕರಣದಲ್ಲಿ ಸಿಕ್ಕಿಬಿದ್ದು ಸಂಜೆ ಜೈಲು ಪಾಲಾಗುವಂತಾಗಿದೆ.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ಮಾರ್ಗದರ್ಶನ ದಲ್ಲಿ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಂ ಮತ್ತು ಸಿಕಂದರ್ ಪಾಷ ನೇತೃತ್ವದಲ್ಲಿ ಸಿಬ್ಬಂದಿ ಸತೀಶ್ ನಾಯ್ಕ್, ಪ್ರಕಾಶ್ ಪೂಜಾರಿ, ಶ್ರೀನಿವಾಸ್ , ಹನುಮಂತ, ನಂದ, ಜಗದೀಶ್ ಅತ್ತಾಜೆ, ಪ್ರಮೋದ್, ದುಂಡಪ್ಪ ಪೂಜಾರಿ, ಶ್ರೀನಿವಾಸ್, ಚಾಲಕ ಸತೀಶ್ ಹಾಗೂ ಸೋಕೋ ತಂಡದ ಕಾವ್ಯಶ್ರೀ, ಅರ್ಪಿತಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ ಅಸ್ಥಿಪಂಜರ ಸಿಕ್ಕಿರುವ ಪ್ರಕರಣ; DNA ಪರೀಕ್ಷೆಯಲ್ಲಿ ಬಯಲಾಯ್ತು 3 ಅಸ್ಥಿಪಂಜರಗಳ ರಹಸ್ಯ!

Next Post

ಕುಂದಾಪುರ; ಬೆಳ್ಳಂಬೆಳಗ್ಗೆ ಹೋಲಿ ರೋಸರಿ ಚರ್ಚ್ ಎದುರು ವ್ಯಕ್ತಿಯ ಗುಂಡಿಕ್ಕಿ ಹತ್ಯೆ; ಆರೋಪಿಯ ಪತ್ತೆಗೆ 3 ಪೊಲೀಸ್ ತಂಡ ರಚನೆ

Related Posts

ಬೆಳ್ತಂಗಡಿ: ಮನೆಗೆ ನುಗ್ಗಿ 15.82 ಲಕ್ಷ ಮೌಲ್ಯದ ಚಿನ್ನಾಭರಣ, 1.80 ಲಕ್ಷ ನಗದು ಕಳವು
ಕ್ರೈಮ್ ನ್ಯೂಸ್

ಬೆಳ್ತಂಗಡಿ: ಮನೆಗೆ ನುಗ್ಗಿ 15.82 ಲಕ್ಷ ಮೌಲ್ಯದ ಚಿನ್ನಾಭರಣ, 1.80 ಲಕ್ಷ ನಗದು ಕಳವು

September 16, 2026
44
ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ
ಕ್ರೈಮ್ ನ್ಯೂಸ್

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
50
Next Post
ಕುಂದಾಪುರ; ಬೆಳ್ಳಂಬೆಳಗ್ಗೆ ಹೋಲಿ ರೋಸರಿ ಚರ್ಚ್ ಎದುರು ವ್ಯಕ್ತಿಯ ಗುಂಡಿಕ್ಕಿ ಹತ್ಯೆ; ಆರೋಪಿಯ ಪತ್ತೆಗೆ 3 ಪೊಲೀಸ್ ತಂಡ ರಚನೆ

ಕುಂದಾಪುರ; ಬೆಳ್ಳಂಬೆಳಗ್ಗೆ ಹೋಲಿ ರೋಸರಿ ಚರ್ಚ್ ಎದುರು ವ್ಯಕ್ತಿಯ ಗುಂಡಿಕ್ಕಿ ಹತ್ಯೆ; ಆರೋಪಿಯ ಪತ್ತೆಗೆ 3 ಪೊಲೀಸ್ ತಂಡ ರಚನೆ

Discussion about this post

Recent News

ಬೆಳ್ತಂಗಡಿ: ಮನೆಗೆ ನುಗ್ಗಿ 15.82 ಲಕ್ಷ ಮೌಲ್ಯದ ಚಿನ್ನಾಭರಣ, 1.80 ಲಕ್ಷ ನಗದು ಕಳವು

ಬೆಳ್ತಂಗಡಿ: ಮನೆಗೆ ನುಗ್ಗಿ 15.82 ಲಕ್ಷ ಮೌಲ್ಯದ ಚಿನ್ನಾಭರಣ, 1.80 ಲಕ್ಷ ನಗದು ಕಳವು

September 16, 2026
44
ಬಂಟ್ಸ್ ಹಾಸ್ಟೇಲ್ ಗಣೇಶೋತ್ಸವ: ಬಂಟರು ನಾಯಕತ್ವ ಗುಣ ಉಳ್ಳವರು, ಎಲ್ಲಾ ರಂಗಗಳ ಸಾಧಕರು : ಇನಾಯತ್ ಆಲಿ

ಬಂಟ್ಸ್ ಹಾಸ್ಟೇಲ್ ಗಣೇಶೋತ್ಸವ: ಬಂಟರು ನಾಯಕತ್ವ ಗುಣ ಉಳ್ಳವರು, ಎಲ್ಲಾ ರಂಗಗಳ ಸಾಧಕರು : ಇನಾಯತ್ ಆಲಿ

September 15, 2026
20
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬೆಳ್ತಂಗಡಿ: ಮನೆಗೆ ನುಗ್ಗಿ 15.82 ಲಕ್ಷ ಮೌಲ್ಯದ ಚಿನ್ನಾಭರಣ, 1.80 ಲಕ್ಷ ನಗದು ಕಳವು

ಬೆಳ್ತಂಗಡಿ: ಮನೆಗೆ ನುಗ್ಗಿ 15.82 ಲಕ್ಷ ಮೌಲ್ಯದ ಚಿನ್ನಾಭರಣ, 1.80 ಲಕ್ಷ ನಗದು ಕಳವು

September 16, 2026
ಬಂಟ್ಸ್ ಹಾಸ್ಟೇಲ್ ಗಣೇಶೋತ್ಸವ: ಬಂಟರು ನಾಯಕತ್ವ ಗುಣ ಉಳ್ಳವರು, ಎಲ್ಲಾ ರಂಗಗಳ ಸಾಧಕರು : ಇನಾಯತ್ ಆಲಿ

ಬಂಟ್ಸ್ ಹಾಸ್ಟೇಲ್ ಗಣೇಶೋತ್ಸವ: ಬಂಟರು ನಾಯಕತ್ವ ಗುಣ ಉಳ್ಳವರು, ಎಲ್ಲಾ ರಂಗಗಳ ಸಾಧಕರು : ಇನಾಯತ್ ಆಲಿ

September 15, 2026
ಬಂಟ್ಸ್ ಹಾಸ್ಟೇಲ್: ಓಂಕಾರ ನಗರಕ್ಕೆ ಶ್ರೀ ಸಿದ್ದಿವಿನಾಯಕ ದೇವರ ವಿಗ್ರಹ

ಬಂಟ್ಸ್ ಹಾಸ್ಟೇಲ್: ಓಂಕಾರ ನಗರಕ್ಕೆ ಶ್ರೀ ಸಿದ್ದಿವಿನಾಯಕ ದೇವರ ವಿಗ್ರಹ

September 14, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d