ದಾವಣಗೆರೆ: ಕ್ಯಾಕ್ಯಾನ್ಸರ್ನಿಂದ ಮೃತಪಟ್ಟಿದ್ದ ಮಗಳ ಪುಣ್ಯಸ್ಮರಣೆಗೆ ತಾಯಿಯೊಬ್ಬರು ಮೇಣದ ಪ್ರತಿಮೆ ಮಾಡಿಸಿದ್ದಾರೆ. ದಾವಣಗೆರೆಯ ಸರಸ್ವತಿ ಬಡಾವಣೆಯಲ್ಲಿ ವಾಸವಿರುವ ತಾಯಿ ಕಮಲಮ್ಮ ನಿವೃತ್ತ ಶಿಕ್ಷಕಿ. ತಮ್ಮ ಮಗಳ ನೆನಪಿಗಾಗಿ ಮೇಣದ ಪ್ರತಿಮೆ ಮಾಡಿಸಿ, ಮನೆಯಲ್ಲಿಟ್ಟುಕೊಂಡಿದ್ದಾರೆ.
ಹೌದು. ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಗ್ಯಾರಹಳ್ಳಿಯ ಕಮಲಮ್ಮ ಮುಖ್ಯ ಶಿಕ್ಷಕಿಯಾಗಿ ನಿವೃತ್ತಿ ಪಡೆದಿದ್ದು, ತಮ್ಮ ಮಗಳ ಆಸೆಯನ್ನು ಈಡೇರಿಸುವ ಸಲುವಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಮಗಳು 12 ದಿವಸದ ಮಗುವಾಗಿದ್ದ ಪತಿಯನ್ನು ಕಳೆದುಕೊಂಡ ಕಮಲಮ್ಮ ಅವರಿಗೆ ಮಗಳೇ ಜೀವ. ಆದರೆ ದುರದೃಷ್ಟವಶಾತ್ 26 ವರ್ಷದಲ್ಲಿ ಮಗಳು ಕ್ಯಾನ್ಸರ್ ಖಾಯಿಲೆಗೆ ತುತ್ತಾಗುತ್ತಾಳೆ. 4 ವರ್ಷಗಳ ಕಾಲ ಕ್ಯಾನ್ಸರ್ನಿಂದ ಬಳಲಿ, 2022ರ ಡಿಸೆಂಬರ್ನಲ್ಲಿ ಕಾವ್ಯಾ ನಿಧನರಾದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕಾವ್ಯಾ ಯೂಟ್ಯೂಬ್ನಲ್ಲಿ ಪಿಒಪಿಯಿಂದ ಮಾಡಿದ ಮೂರ್ತಿ ತೋರಿಸಿ ಸಮಾಧಿಯ ಪಕ್ಕದಲ್ಲಿ ಉದ್ಯಾನ ನಿರ್ಮಿಸಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾಳೆ.
ಮಗಳ ಆಸೆಯಂತೆ ಬೆಂಗಳೂರಿನ ಕಲಾವಿದ ವಿಶ್ವನಾಥ ಎಂಬುವವರಿಂದ 4 ಅಡಿ ಎತ್ತರ 25 ಕೆಜಿ ತೂಕದ ಮೂರ್ತಿ ಮಾಡಿಸಿದ್ದಾರೆ. 3.30 ಲಕ್ಷ ಖರ್ಚು ಮಾಡಿ, 25 ಕೆಜಿ ತೂಕದ ಸಿಲಿಕಾನ್ ವ್ಯಾಕ್ಸ್ನಿಂದ ಪ್ರತಿಮೆ ನಿರ್ಮಿಸಿ ಸರಸ್ವತಿನಗರದ ತಮ್ಮ ನಿವಾಸದಲ್ಲಿ ಇಟ್ಟಿದ್ದಾರೆ. ಮತ್ತೊಂದೆಡೆ ಸಮಾಧಿ ನಿರ್ಮಿಸಿ ಸುತ್ತಲು ಉದ್ಯಾನ ನಿರ್ಮಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಸಾಮಾಜಿಕ ಸೇವೆಯ ಮೂಲಕ ಮಗಳ ಆಸೆಯನ್ನು ಈಡೇರಿಸಲು ಕಮಲ್ಲಮ್ಮ ಶ್ರಮಿಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post