• About us
  • Contact us
  • Disclaimer
Friday, March 27, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಅದೃಷ್ಟದ ಬೆನ್ನಲ್ಲೇ ಕಚ್ಚಾ ಬಾದಾಮ್​ ಗಾಯಕನಿಗೆ ದುರಾದೃಷ್ಟ

Coastal Times by Coastal Times
March 1, 2022
in ರಾಷ್ಟ್ರೀಯ ಸುದ್ದಿ
ಅದೃಷ್ಟದ ಬೆನ್ನಲ್ಲೇ ಕಚ್ಚಾ ಬಾದಾಮ್​ ಗಾಯಕನಿಗೆ ದುರಾದೃಷ್ಟ
161
VIEWS
WhatsappTelegramShare on FacebookShare on Twitter

ಕೋಲ್ಕತ: ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ಕಚ್ಚಾ ಬಾದಾಮ್ ಖ್ಯಾತಿಯ ಗಾಯಕ ಭುವನ್​ ಬದ್ಯಕರ್​​ ಸೋಮವಾರ (ಫೆ.28) ರಾತ್ರಿ ಕಾರು ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಚ್ಚಾ ಬಾದಾಮ್​ ಹಾಡಿನ ಮೂಲಕ ಗಳಿಸಿದ ಹಣದಲ್ಲಿ ಭುವನ್​ ಇತ್ತೀಚೆಗಷ್ಟೇ ಸೆಕೆಂಡ್​ ಹ್ಯಾಂಡ್​ ಕಾರು ಖರಿದೀಸಿದ್ದಾರೆ. ನಿನ್ನೆ ಕಾರು ಓಡಿಸುವುದನ್ನು ಕಲಿಯುವಾಗ ಅಪಘಾತವಾಗಿದ್ದು, ಎದೆಗೆ ನೋವಾಗಿದೆ. ಹೀಗಾಗಿ ಭುವನ್​ ಅವರು ಸುರಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಶೀಘ್ರ ಗುಣಮುಖರಾಗಲು ಅಭಿಮಾನಿಗಳು ಮತ್ತು ಕುಟುಂಬಸ್ಥರು ಪ್ರಾರ್ಥಿಸಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್​ ಎಬ್ಬಿಸಿದ ಹಾಡೆಂದರೆ ಅದು ಕಚ್ಚಾ ಬಾದಾಮ್. ಫೇಸ್​ಬುಕ್​, ಟ್ವಿಟರ್​, ಯೂಟ್ಯೂಬ್​ ಮತ್ತು ಇನ್​ಸ್ಟಾಗ್ರಾಂ ಎಲ್ಲಿ ನೋಡಿದರೂ ಬರೀ ಕಚ್ಚಾ ಬಾದಾಮ್​ ರೀಮಿಕ್ಸ್​ ಹಾಡೇ ಕಣ್ಣು ಮುಂದೆ ಮೊದಲು ಬರುತ್ತಿದೆ. ಇದೇ ಹಾಡನ್ನು ಕೇಳಿ ಕೇಳಿ ಸುಸ್ತಾದ ಎಷ್ಟೋ ಮಂದಿ ಸಿಕ್ಕಾಪಟ್ಟೆ ಟ್ರೋಲ್​ ಕೂಡ ಮಾಡಿದ್ದಾರೆ. ಎಷ್ಟರಮಟ್ಟಿಗೆ ಈ ಹಾಡು ಹಿಟ್​ ಆಗಿದೆ ಅಂದರೆ, ಯೂಟ್ಯೂಬ್​ನಲ್ಲಿ ಬರೋಬ್ಬರಿ 50 ಮಿಲಿಯನ್​ ವೀಕ್ಷಣೆ ಪಡೆದುಕೊಂಡಿದೆ. ಈ ಹಾಡಿನಿಂದ ಭುವನ್​ ರಾತ್ರೋರಾತ್ರಿ ಸೋಶಿಯಲ್​ ಮೀಡಿಯಾ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದಾರೆ.

ಪಶ್ಚಿಮ ಬಂಗಾಳದ ಬಿರ್​ಭಮ್​ ಜಿಲ್ಲೆಯ ನಿವಾಸಿ ಆಗಿರುವ ಭುವನ್​ ಕಚ್ಚಾ ಬಾದಾಮ್​ ಹಾಡು ಹೇಳಿಕೊಂಡು ಊರೂರು ತಿರುಗುತ್ತಾ ಕಡಲೆಕಾಯಿ ಮಾರಾಟ ಮಾಡಿ ಒಂದೆರೆಡು ಕಾಸು ಸಂಪಾದನೆ ಮಾಡುತ್ತಿದ್ದರು. ಅವರ ಹಾಡನ್ನು ಗುರುತಿಸಿದ ಗೋಧುಲಿಬೆಲಾ ಮ್ಯೂಸಿಕ್​ ಕಂಪನಿ ರೀಮಿಕ್ಸ್​ ಮಾಡಿ, ಭುವನ್​ ಕೈಯಲ್ಲೇ ಹಾಡಿಸಿದ್ದಾರೆ. ಇದಾದ ಬಳಿಕ ಭುವನ್​ ಬದುಕೇ ಬದಲಾಗಿದೆ.

ಕಚ್ಚಾ ಬಾದಾಮ್​ ಒರಿಜಿನಲ್​ ಸಾಂಗ್​ ಅನ್ನು ರೀಮಿಕ್ಸ್​ ಮಾಡಲು ಸಂಭಾವನೆಯಾಗಿ ಭುವನ್​ಗೆ 3 ಲಕ್ಷ ರೂ. ನೀಡಲಾಗಿದೆ ಎಂದು ತಿಳಿದುಬಂದಿದೆ. ಕಡಲೆಕಾಯಿ ಮಾರಾಟ ಮಾಡಿ ದಿನದೂಡುತ್ತಿದ್ದ ಭುವನ್​ ಇದೀಗ ಕಚ್ಚಾ ಬಾದಾಮ್​ ಮೂಲಕ ಖ್ಯಾತಿಯಾಗಿದ್ದು, ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಲಕ್​ ಬದಲಾಗಿದೆ. ಆದರೆ, ಇದೀಗ ಅಪಘಾತವಾಗಿರುವುದು ಕುಟುಂಬಸ್ಥರಿಗೆ ಆಘಾತವಾಗಿದ್ದು, ಸದ್ಯ ಭುವನ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ದೇಶಕ್ಕೆ ಕೀರ್ತಿ ತಂದುಕೊಟ್ಟ 64 ವರ್ಷದ ಮಂಗಳೂರಿನ ಮಹಿಳಾ ಕ್ರೀಡಾಪಟು ಭವಾನಿ ಜೋಗಿ!

Next Post

ರಷ್ಯಾ-ಉಕ್ರೇನ್ ಯುದ್ಧ: ರಷ್ಯಾದ ಶೆಲ್‌ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಸಾವು

Related Posts

ಲ್ಯಾಂಡಿಂಗ್​ ವೇಳೆ ರನ್​ವೇನಲ್ಲಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ ; 100ಕ್ಕೂ ಹೆಚ್ಚು ಜನರಿಗೆ ಗಾಯ
ರಾಷ್ಟ್ರೀಯ ಸುದ್ದಿ

ಲ್ಯಾಂಡಿಂಗ್​ ವೇಳೆ ರನ್​ವೇನಲ್ಲಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ ; 100ಕ್ಕೂ ಹೆಚ್ಚು ಜನರಿಗೆ ಗಾಯ

March 24, 2026
41
LPG ಹೊತ್ತ 2 ಹಡಗುಗಳು ಹಾರ್ಮುಜ್ ಜಲಸಂಧಿ ದಾಟಿದ್ದು, ಇದೇ 16ರಂದು ಭಾರತ ತಲುಪಲಿವೆ ಕೇಂದ್ರ ಸರ್ಕಾರ
ರಾಷ್ಟ್ರೀಯ ಸುದ್ದಿ

LPG ಹೊತ್ತ 2 ಹಡಗುಗಳು ಹಾರ್ಮುಜ್ ಜಲಸಂಧಿ ದಾಟಿದ್ದು, ಇದೇ 16ರಂದು ಭಾರತ ತಲುಪಲಿವೆ ಕೇಂದ್ರ ಸರ್ಕಾರ

March 15, 2026
60
Next Post
ರಷ್ಯಾ-ಉಕ್ರೇನ್ ಯುದ್ಧ: ರಷ್ಯಾದ ಶೆಲ್‌ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಸಾವು

ರಷ್ಯಾ-ಉಕ್ರೇನ್ ಯುದ್ಧ: ರಷ್ಯಾದ ಶೆಲ್‌ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಸಾವು

Discussion about this post

Recent News

ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ, ಮಂಚಕ್ಕೆ ಬರುವಂತೆ ನಿರಂತರ ಕಿರುಕುಳ, ಅಶ್ಲೀಲ ಸಂದೇಶ !

ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ, ಮಂಚಕ್ಕೆ ಬರುವಂತೆ ನಿರಂತರ ಕಿರುಕುಳ, ಅಶ್ಲೀಲ ಸಂದೇಶ !

March 26, 2026
40
ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

March 26, 2026
14
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ, ಮಂಚಕ್ಕೆ ಬರುವಂತೆ ನಿರಂತರ ಕಿರುಕುಳ, ಅಶ್ಲೀಲ ಸಂದೇಶ !

ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ, ಮಂಚಕ್ಕೆ ಬರುವಂತೆ ನಿರಂತರ ಕಿರುಕುಳ, ಅಶ್ಲೀಲ ಸಂದೇಶ !

March 26, 2026
ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

March 26, 2026
ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಪೋಸ್ಟ್ ಹಾಕಿದ ಆರೋಪಿಯ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಪೋಸ್ಟ್ ಹಾಕಿದ ಆರೋಪಿಯ ಬಂಧನ

March 26, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d