• About us
  • Contact us
  • Disclaimer
Wednesday, August 12, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪ್ರಿ ಸ್ಕೂಲ್​ಗೆ ಬರುತ್ತಿದ್ದ ಮಕ್ಕಳ ತಂದೆಗೆ ಮುತ್ತು ಕೊಟ್ಟು ಹನಿಟ್ರ್ಯಾಪ್: ಟೀಚರ್ ಸಹಿತ ಮೂವರ ಬಂಧನ

Coastal Times by Coastal Times
April 1, 2025
in ಕ್ರೈಮ್ ನ್ಯೂಸ್
ಪ್ರಿ ಸ್ಕೂಲ್​ಗೆ ಬರುತ್ತಿದ್ದ ಮಕ್ಕಳ ತಂದೆಗೆ ಮುತ್ತು ಕೊಟ್ಟು ಹನಿಟ್ರ್ಯಾಪ್: ಟೀಚರ್ ಸಹಿತ ಮೂವರ ಬಂಧನ
129
VIEWS
WhatsappTelegramShare on FacebookShare on Twitter

ಬೆಂಗಳೂರು: ಉದ್ಯಮಿಯನ್ನು ಸುಲಿಗೆಗೈದಿದ್ದ ಖಾಸಗಿ ಶಾಲೆಯ ಶಿಕ್ಷಕಿ, ರೌಡಿಶೀಟರ್‌ ಸಹಿತ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 34 ವರ್ಷದ ಉದ್ಯಮಿ ನೀಡಿದ್ದ ದೂರಿನನ್ವಯ ಖಾಸಗಿ ಶಾಲೆಯ ಶಿಕ್ಷಕಿ ಶ್ರೀದೇವಿ ರೂಡಗಿ (25), ಅವರ ಪ್ರಿಯಕರ ಸಾಗರ್ ಮೋರೆ (28) ಮತ್ತು ರೌಡಿ ಶೀಟರ್‌ ಗಣೇಶ್ ಕಾಳೆ (38) ಅವರನ್ನು ಬಂಧಿಸಲಾಗಿದೆ. ಗಣೇಶ್ ಕಾಳೆಯ ವಿರುದ್ಧ ವಿವಿಧ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ ಟೀಚರ್ ಅಂತಿಥ ಮಹಿಳೆಯಲ್ಲ. ಪ್ರಿ ಸ್ಕೂಲ್​ಗೆ ಬರುತ್ತಿದ್ದ ಮಕ್ಕಳ ತಂದೆಗೇ ಮುತ್ತು ಕೊಟ್ಟು ಹನಿಟ್ರ್ಯಾಪ್ ಮಾಡಿದ್ದಲ್ಲದೆ, 50 ಸಾವಿರ ರೂ. ಸುಲಿಗೆ ಮಾಡಿದ್ದಾಳೆ. ಮತ್ತೆ ಬೆದರಿಕೆಯೊಡ್ಡಿ ಒಂದು ಲಕ್ಷ ರೂಪಾಯಿಗೂ ಹೆಚ್ಚು ಹಣ ವಸೂಲಿ ಮಾಡಿದ್ದಲ್ಲದೆ, ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಮತ್ತಷ್ಟು ಹಣ ವಸೂಲಿ ಮಾಡಲು ಮುಂದಾದ ಟೀಚರ್ ಹಾಗೂ ಗ್ಯಾಂಗ್ ಈಗ ಪೊಲೀಸ್ ಬಲೆಗೆ ಬಿದ್ದಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ನಲ್ಲಿ ಖಾಸಗಿ ಪ್ರೀಸ್ಕೂಲ್ ನಡೆಸುತ್ತಿದ್ದ ಶ್ರೀದೇವಿ ರುಡಿಗಿ ಎಂಬಾಕೆಯೇ ಹನಿಟ್ರ್ಯಾಪ್ ಎಸಗಿದ ಶಿಕ್ಷಕಿ.

ಶಿಕ್ಷಕಿಯ ಹನಿಟ್ರ್ಯಾಪ್ ಬಲೆಗೆ ಬಿದ್ದ ಪೋಷಕ : ಆರೋಪಿ ಶ್ರೀದೇವಿ ರುಡಿಗಿಗೆ 2023 ರಲ್ಲಿ ರಾಕೇಶ್ ಎಂಬ ಪೋಷಕನ ಪರಿಚಯವಾಗಿತ್ತು. ರಾಕೇಶ್​​ನಿಂದ ಶಾಲೆ ನಿರ್ವಹಣೆ, ತಂದೆಯ ಚಿಕಿತ್ಸೆಗೆಂದು ಶ್ರೀದೇವಿ 4 ಲಕ್ಷ ರೂ. ಸಾಲ ಪಡೆದಿದ್ದಳು. 2024ರ ಮಾರ್ಚ್​ನಲ್ಲಿ ವಾಪಸ್ ಕೊಡುವುದಾಗಿ ತಿಳಿಸಿದ್ದಳು. ಆದರೆ, ಹಣ ವಾಪಸ್ ಕೇಳಿದಾಗ ಕೊಟ್ಟಿರಲಿಲ್ಲ. ‘ತುಂಬಾ ಕಷ್ಟವಿದೆ. ಹಣ ಈಗ ಕೊಡಲು ಆಗುವುದಿಲ್ಲ. ನೀವು ಶಾಲೆಯ ಪಾರ್ಟನರ್ ಆಗಿ’ ಎಂದಿದ್ದಳು. ನಂತರ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಇಬ್ಬರೂ ಹಲವೆಡೆ ಜತೆಯಾಗಿ ಸುತ್ತಾಟ ನಡೆಸಿದ್ದಾರೆ. ಶ್ರೀದೇವಿ‌ ಜೊತೆ ಮಾತನಾಡಲೆಂದೇ ರಾಕೇಶ್ ಹೊಸ ಸಿಮ್ ಹಾಗೂ ಪೋನ್ ಖರೀದಿಸಿದ್ದರು. ಶಾಲೆಯ ನಿರ್ವಹಣೆಯ ಕಾರಣ ನೀಡಿ 2023ರಿಂದ ದೂರುದಾರರ ಬಳಿ ಆಗಾಗ್ಗೆ ಶ್ರೀದೇವಿ ಹಣ ಪಡೆದಿದ್ದರು. ನಂತರ ಜನವರಿ ಮೊದಲ ವಾರದಲ್ಲಿ ಹಣ ವಾಪಸ್ ಕೇಳಿದ್ದರು. ಹಣ ವಾಪಸ್ ಕೇಳಿದ್ದ ರಾಕೇಶ್​ಗೆ, ‘ನಿನ್ನ ಜೊತೆ ರಿಲೇಶನ್ ಶಿಪ್​​ನಲ್ಲಿ ಇರುತ್ತೇನೆ’ ಎಂದು ಹೇಳಿದ್ದ ಶ್ರೀದೇವಿ 15 ಲಕ್ಷ ರೂ. ಹಣ ಕೇಳಿದ್ದಳು. ಇದಕ್ಕೆ ರಾಕೇಶ್ ಒಪ್ಪಿರಲಿಲ್ಲ.

ನಂತರ ಶ್ರೀದೇದಿ ಪೋಷಕ ರಾಕೇಶ್ ಮನೆಗೆ ತೆರಳಿ ಆತನಿಗೆ ಮುತ್ತುಕೊಟ್ಟಿದ್ದಳು. ಬಳಿಕ ಬ್ಲ್ಯಾಕ್​ಮೇಲ್ ಮಾಡಿ 50 ಸಾವಿರ ರೂ. ಪಡೆದಿದ್ದಳು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆ ಬಳಿಕ, ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಆಕೆ ಜತೆ ಸಂಪರ್ಕಕ್ಕೆ ಇಟ್ಟುಕೊಂಡಿದ್ದ ಸಿಮ್ ಕಾರ್ಡ್ ಅನ್ನು ರಾಕೇಶ್ ಮುರಿದು ಬಿಸಾಡಿದ್ದರು.

ಮಾರ್ಚ್ 12 ರಂದು ರಾಕೇಶ್ ಪತ್ನಿಗೆ ಕರೆ ಮಾಡಿದ್ದ ಶ್ರೀದೇವಿ , ಮಕ್ಕಳ ಸ್ಕೂಲ್ ಟಿಸಿ ಕಳುಹಿಸಿಕೊಡುತ್ತೇನೆ, ನಿಮ್ಮ ಪತಿಯನ್ನು ಕಳುಹಿಸಿ ಎಂದಿದ್ದಳು. ಅದರಂತೆ ಶ್ರೀದೇವಿಯ ಪ್ರೀ ಸ್ಕೂಲ್​​ಗೆ ರಾಕೇಶ್ ತೆರಳಿದ್ದರು. ಆಗ ಅಲ್ಲಿ ಶ್ರೀದೇವಿ ಜೊತೆ ಹಾಜರಿದ್ದ ಇತರೆ ಆರೋಪಿಗಳಾದ ಸಾಗರ್ ಹಾಗೂ ಗಣೇಶ್ ಬೆದರಿಕೆ ಹಾಕಿದ್ದರು. ‘‘ಸಾಗರ್ ಜೊತೆ ಶ್ರೀದೇವಿಗೆ ನಿಶ್ಚಿತಾರ್ಥ ಆಗಿದೆ. ಆದರೆ ನೀನು ಆಕೆ ಜೊತೆ ಮಜಾ ಮಾಡುತ್ತಿದ್ದಿ’’ ಎಂದು ಆರೋಪಿ ಗಣೇಶ್ ಬೆದರಿಕೆ ಹಾಕಿದ್ದ. ಬಳಿಕ ಕಾರಿನಲ್ಲಿ‌ ಕೂರಿಸಿಕೊಂಡು, ‘‘ಯಾರಿಗೂ ವಿಚಾರ ಹೇಳಬಾರದು ಎಂದರೆ 1 ಕೋಟಿ‌ ರೂ. ಕೊಡು’’ ಎಂದು ಬ್ಲ್ಯಾಕ್​ಮೇಲ್ ಮಾಡಿದ್ದ. ಕೊನೆಯದಾಗಿ ಆರೋಪಿಗಳು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಮಾರ್ಚ್ 18 ರಂದು 1.90 ಲಕ್ಷ ಪಡೆದು, ಉಳಿದ ಹಣವನ್ನು ಆರು ದಿನದಲ್ಲಿ ನೀಡುವಂತೆ ಬೆದರಿಸಿ ದೂರುದಾರನನ್ನು ಬಿಟ್ಟು ಕಳುಹಿಸಿದ್ದರು ಎಂದು ಪೊಲೀಸರು ಹೇಳಿದರು.

ಹೀಗಾಗಿ ರಾಕೇಶ್ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಶ್ರೀದೇವಿ, ಅರುಣ್ ಮತ್ತು ಸಾಗರ್​ರನ್ನು ಬಂಧಿಸಲಾಗಿದೆ. ಸದ್ಯ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಮೂವರು ಆರೋಪಿಗಳು ಕೂಡ ವಿಜಯಪುರ ಮೂಲದವರಾಗಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಮುಡಾ ಆಯುಕ್ತರಿಗೆ ಮಧ್ಯವರ್ತಿಗಳಿಂದ ಬ್ಲಾಕ್ಮೇಲ್, ಜೀವ ಬೆದರಿಕೆ : ಎಫ್ಐಆರ್ ದಾಖಲು

Next Post

ಬಜಪೆ:16 ಕ್ಯಾಮೆರಾ, 8 ನಾಯಿಗಳಿದ್ದರೂ ಮನೆಯ ಲಾಕರಿನಲ್ಲಿಟ್ಟಿದ್ದ ಕೋಟಿ ಮೌಲ್ಯದ ಕೇಜಿಯಷ್ಟು ಚಿನ್ನಾಭರಣ ದೋಚಿದ ಖದೀಮರು!

Related Posts

ಆಪರೇಷನ್ ತೂಫಾನ್: ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಎಂಡಿಎಂಎ ಸಾಗಿಸಲು ಯತ್ನಿಸಿದ ಯುವಕ-ಯುವತಿಯ ಬಂಧನ
ಕ್ರೈಮ್ ನ್ಯೂಸ್

ಆಪರೇಷನ್ ತೂಫಾನ್: ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಎಂಡಿಎಂಎ ಸಾಗಿಸಲು ಯತ್ನಿಸಿದ ಯುವಕ-ಯುವತಿಯ ಬಂಧನ

August 12, 2026
50
ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ನೊಂದು ಹಾಸ್ಟೆಲ್‌ನಲ್ಲಿ ತಂಗಿ ಆತ್ಮಹತ್ಯೆ ; ದುಬೈನಲ್ಲಿ ಇಂಜಿನಿಯರ್ ಆಗಿದ್ದ ಅಣ್ಣನೂ ಮಂಗಳೂರಿಗೆ ಬಂದು ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣು !
ಕ್ರೈಮ್ ನ್ಯೂಸ್

ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ನೊಂದು ಹಾಸ್ಟೆಲ್‌ನಲ್ಲಿ ತಂಗಿ ಆತ್ಮಹತ್ಯೆ ; ದುಬೈನಲ್ಲಿ ಇಂಜಿನಿಯರ್ ಆಗಿದ್ದ ಅಣ್ಣನೂ ಮಂಗಳೂರಿಗೆ ಬಂದು ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣು !

August 11, 2026
73
Next Post
ಬಜಪೆ:16 ಕ್ಯಾಮೆರಾ, 8 ನಾಯಿಗಳಿದ್ದರೂ ಮನೆಯ ಲಾಕರಿನಲ್ಲಿಟ್ಟಿದ್ದ ಕೋಟಿ ಮೌಲ್ಯದ ಕೇಜಿಯಷ್ಟು ಚಿನ್ನಾಭರಣ ದೋಚಿದ ಖದೀಮರು!

ಬಜಪೆ:16 ಕ್ಯಾಮೆರಾ, 8 ನಾಯಿಗಳಿದ್ದರೂ ಮನೆಯ ಲಾಕರಿನಲ್ಲಿಟ್ಟಿದ್ದ ಕೋಟಿ ಮೌಲ್ಯದ ಕೇಜಿಯಷ್ಟು ಚಿನ್ನಾಭರಣ ದೋಚಿದ ಖದೀಮರು!

Discussion about this post

Recent News

ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

August 12, 2026
23
ಆಪರೇಷನ್ ತೂಫಾನ್: ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಎಂಡಿಎಂಎ ಸಾಗಿಸಲು ಯತ್ನಿಸಿದ ಯುವಕ-ಯುವತಿಯ ಬಂಧನ

ಆಪರೇಷನ್ ತೂಫಾನ್: ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಎಂಡಿಎಂಎ ಸಾಗಿಸಲು ಯತ್ನಿಸಿದ ಯುವಕ-ಯುವತಿಯ ಬಂಧನ

August 12, 2026
50
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

August 12, 2026
ಆಪರೇಷನ್ ತೂಫಾನ್: ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಎಂಡಿಎಂಎ ಸಾಗಿಸಲು ಯತ್ನಿಸಿದ ಯುವಕ-ಯುವತಿಯ ಬಂಧನ

ಆಪರೇಷನ್ ತೂಫಾನ್: ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಎಂಡಿಎಂಎ ಸಾಗಿಸಲು ಯತ್ನಿಸಿದ ಯುವಕ-ಯುವತಿಯ ಬಂಧನ

August 12, 2026
ಸಾಮಾಜಿಕ ಭದ್ರತಾ ಪಿಂಚಣಿಗೆ ರೂ.32,000 ಆದಾಯ ಮಿತಿ : ಬಡವರ ಮೇಲೆ ಅನ್ಯಾಯ ದಾಖಲೆಗಳ ಹೆಸರಿನಲ್ಲಿ ಫಲಾನುಭವಿಗಳಿಗೆ ಕಿರುಕುಳ ನಿಲ್ಲಿಸಬೇಕು -ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

ಸಾಮಾಜಿಕ ಭದ್ರತಾ ಪಿಂಚಣಿಗೆ ರೂ.32,000 ಆದಾಯ ಮಿತಿ : ಬಡವರ ಮೇಲೆ ಅನ್ಯಾಯ ದಾಖಲೆಗಳ ಹೆಸರಿನಲ್ಲಿ ಫಲಾನುಭವಿಗಳಿಗೆ ಕಿರುಕುಳ ನಿಲ್ಲಿಸಬೇಕು -ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

August 11, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d