• About us
  • Contact us
  • Disclaimer
Sunday, December 10, 2023
  • Login
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

ಹಾಸನ| ಶಾರ್ಪ್ ಶೂಟರ್ ವೆಂಕಟೇಶ್ ನನ್ನು ತುಳಿದು ಸಾಯಿಸಿದ ಆನೆ; ಮೃತನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ

Coastal Times by Coastal Times
September 1, 2023
in ರಾಜ್ಯ
ಹಾಸನ| ಶಾರ್ಪ್ ಶೂಟರ್ ವೆಂಕಟೇಶ್ ನನ್ನು ತುಳಿದು ಸಾಯಿಸಿದ ಆನೆ; ಮೃತನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ
100
VIEWS
WhatsappTelegramShare on FacebookShare on Twitterinstagram

ಹಾಸನ: ಹಾಸನ ಜಿಲ್ಲೆಯ ಆಲೂರು ಮತ್ತು ಸಕಲೇಶಪುರ ತಾಲೂಕಿನಲ್ಲಿ 50ಕ್ಕೂ ಹೆಚ್ಚು ರಾಕ್ಷಸ ಆನೆಗಳಿಗೆ ಅರವಳಿಕೆ ಮದ್ದು ನೀಡಿದ್ದ ಶಾರ್ಪ್ ಶೂಟರ್ ವೆಂಕಟೇಶ್(64) ಅವರನ್ನು ಗುರುವಾರ ಗಾಯಗೊಂಡ ಆನೆಯೊಂದು ತುಳಿದು ಕೊಂದು ಹಾಕಿದೆ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹುಲಿಯೂರು ಗ್ರಾಮದಲ್ಲಿ ಗಾಯಗೊಂಡಿದ್ದ ಕಾಡಾನೆಗೆ ಚಿಕಿತ್ಸೆ ನೀಡಲು ತೆರಳಿದ್ದ ಅರವಳಿಕೆ ತಜ್ಞ ವೆಂಕಟೇಶ್ ಅವರ ಮೇಲೆ ಆನೆ ದಾಳಿ ಮಾಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ವೆಂಕಟೇಶ್ ಅವರು ಆನೆಯತ್ತ ಟ್ರ್ಯಾಂಕ್ವಿಲೈಸರ್ ಡಾರ್ಟ್ ಅನ್ನು ಹಾರಿಸಿದ್ದರು. ಅದು ಆನೆ ಹಿಂತಿರುಗಿ ಅವರ ಕಡೆಗೆ ಓಡುವಂತೆ ಪ್ರೇರೇಪಿಸಿತು. ಇದರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ವೆಂಕಟೇಶ್ ಅವರು ನೆಲಕ್ಕೆ ಬಿದ್ದಿದ್ದಾರೆ. ಆನೆ ಅವರನ್ನು ತುಳಿದು ಹಾಕಿತು. ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ಹೇಗೋ ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೂ ಅವರು ಬದುಕುಳಿಯಲಿಲ್ಲ’ ಎಂದು ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮೋಹನ್‌ಕುಮಾರ್‌ ಅವರು ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳು ಮೃತ ವೆಂಕಟೇಶ್ ಅವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರವನ್ನು ಸ್ಥಳದಲ್ಲಿಯೇ ನೀಡಿದ್ದಾರೆ. ಶುಕ್ರವಾರ ಅವರ ಹುಟ್ಟೂರಾದ ನಾಗಲಾಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ವೆಂಕಟೇಶನನ್ನು ತುಳಿದ ಆನೆ ಭೀಮನ ಬೆನ್ನಿನ ಭಾಗದಲ್ಲಿ ಗಾಯಗಳಾಗಿವೆ. ಜುಲೈನಲ್ಲಿ ಕಾಡಿನಲ್ಲಿ ಮತ್ತೊಂದು ಆನೆಯೊಂದಿಗೆ ನಡೆದ ಕಾದಾಟದ ಸಂದರ್ಭದಲ್ಲಿ ಭೀಮ ಗಾಯಗೊಂಡಿತ್ತು. ವೈದ್ಯರ ತಂಡ ಎರಡು ದಿನಗಳ ಹಿಂದೆ ಎರಡು ಪಳಗಿದ ಆನೆಗಳ ಸಹಾಯದಿಂದ ಗಾಯಗೊಂಡ ಆನೆಗೆ ಚಿಕಿತ್ಸೆ ನೀಡಿತ್ತು. ಇಂದು ಹೆಚ್ಚಿನ ಚಿಕಿತ್ಸೆ ನೀಡಲು ಮುಂದಾದಾಗ ಈ ಅವಘಡ ಸಂಭವಿಸಿದೆ.

ಆನೆ ವೆಂಕಟೇಶ್ ಎಂದೇ ಖ್ಯಾತಿ ಪಡೆದಿದ್ದ ವೆಂಕಟೇಶ್ ಅವರು ಅರಣ್ಯ ಇಲಾಖೆಯಲ್ಲಿ ಹೆಚ್ಚು ಜನಪ್ರಿಯರಾಗಿದ್ದರು. ಎರಡೂವರೆ ದಶಕಗಳಿಂದ ದಿನಗೂಲಿ ಆಧಾರದಲ್ಲಿ ಶಾರ್ಪ್ ಶೂಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ವೆಂಕಟೇಶ್ ಅವರನ್ನು ತಾಂತ್ರಿಕ ಕಾರಣ ನೀಡಿ ಅರಣ್ಯ ಇಲಾಖೆ ಕಾಯಂಗೊಳಿಸಿಲ್ಲ. ವಯಸ್ಸು 60 ದಾಟಿದರೂ ಗೌರವಧನದಲ್ಲಿ ವೃತ್ತಿ ಮುಂದುವರಿಸಿದ್ದರು. ವೆಂಕಟೇಶ್ ಅವರು ಕರ್ನಾಟಕ ಮತ್ತು ನೆರೆಯ ರಾಜ್ಯಗಳ ವಿವಿಧ ಭಾಗಗಳಲ್ಲಿ ಚಿರತೆ ಸೇರಿದಂತೆ ಅನೇಕ ಕಾಡು ಪ್ರಾಣಿಗಳನ್ನು ಓಡಿಸಿದ್ದರು.

ವೆಂಕಟೇಶ್ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Sharp shooter and noted darter Venkatesh attacked by tusker in Hassan. Is undergoing treatment@NewIndianXpress @XpressBengaluru @KannadaPrabha @Cloudnirad @AmitSUpadhye @aranya_kfd @moefcc @KumarPushkarifs pic.twitter.com/ZyEx0Je167

— Bosky Khanna (@BoskyKhanna) August 31, 2023

Previous Post

ಡಿಸೆಂಬರ್‌ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಟಿಬೆಟಿಯನ್ ಧಾರ್ಮಿಕ ಮುಖ್ಯಸ್ಥ ದಲೈಲಾಮಾ ಮಂಡ್ಯಕ್ಕೆ ಭೇಟಿ

Next Post

ಮಗುವಿನ ಫೋಟೋ ಮುಂದಿಟ್ಟು ಬ್ಲಾಕ್ಮೇಲ್ ! ಲೋನ್ ಆ್ಯಪ್ ಕಾಟಕ್ಕೆ ರಾಜ್ಯ ಮಟ್ಟದ ಕಬ್ಬಡಿ ಆಟಗಾರ ಬಲಿ

Related Posts

ಬೆಂಗಳೂರು ಕಂಬಳ ವೀಕ್ಷಿಸಿ ಹಿಂದಿರುಗುವಾಗ ಭೀಕರ ಅಪಘಾತ-ಮಂಗಳೂರಿನ ಇಬ್ಬರು ಮೃತ್ಯು..!
ರಾಜ್ಯ

ಬೆಂಗಳೂರು ಕಂಬಳ ವೀಕ್ಷಿಸಿ ಹಿಂದಿರುಗುವಾಗ ಭೀಕರ ಅಪಘಾತ-ಮಂಗಳೂರಿನ ಇಬ್ಬರು ಮೃತ್ಯು..!

November 26, 2023
180
ಬೆಂಗಳೂರು ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರೋಧ ವ್ಯಕ್ತವಾಗುತ್ತಿದ್ದಂತೆ ಕಂಬಳದಿಂದ ಆಹ್ವಾನ ರದ್ದು
ರಾಜ್ಯ

ಬೆಂಗಳೂರು ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರೋಧ ವ್ಯಕ್ತವಾಗುತ್ತಿದ್ದಂತೆ ಕಂಬಳದಿಂದ ಆಹ್ವಾನ ರದ್ದು

November 22, 2023
71
Next Post
ಮಗುವಿನ ಫೋಟೋ ಮುಂದಿಟ್ಟು ಬ್ಲಾಕ್ಮೇಲ್ !  ಲೋನ್ ಆ್ಯಪ್ ಕಾಟಕ್ಕೆ ರಾಜ್ಯ ಮಟ್ಟದ ಕಬ್ಬಡಿ ಆಟಗಾರ ಬಲಿ

ಮಗುವಿನ ಫೋಟೋ ಮುಂದಿಟ್ಟು ಬ್ಲಾಕ್ಮೇಲ್ ! ಲೋನ್ ಆ್ಯಪ್ ಕಾಟಕ್ಕೆ ರಾಜ್ಯ ಮಟ್ಟದ ಕಬ್ಬಡಿ ಆಟಗಾರ ಬಲಿ

Discussion about this post

Recent News

ಎಂಆರ್ ಪಿಎಲ್ ಟ್ಯಾಂಕರ್ ನಿಂದ ಡಾಮರು ಕಳ್ಳತನ ; ಬಂಟ್ವಾಳದಲ್ಲಿ ಹತ್ತು ಮಂದಿ ಬಂಧನ

ಎಂಆರ್ ಪಿಎಲ್ ಟ್ಯಾಂಕರ್ ನಿಂದ ಡಾಮರು ಕಳ್ಳತನ ; ಬಂಟ್ವಾಳದಲ್ಲಿ ಹತ್ತು ಮಂದಿ ಬಂಧನ

December 10, 2023
124
ಮಂಗಳೂರು: 6 ಲ.ರೂ. ಮೌಲ್ಯದ ಎಮ್ ಡಿಎಮ್ ಎ ಸಹಿತ ಆರೋಪಿಗಳಿಬ್ಬರ ಸೆರೆ

ಮಂಗಳೂರು: 6 ಲ.ರೂ. ಮೌಲ್ಯದ ಎಮ್ ಡಿಎಮ್ ಎ ಸಹಿತ ಆರೋಪಿಗಳಿಬ್ಬರ ಸೆರೆ

December 9, 2023
22
Coastal Times Kannada

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಎಂಆರ್ ಪಿಎಲ್ ಟ್ಯಾಂಕರ್ ನಿಂದ ಡಾಮರು ಕಳ್ಳತನ ; ಬಂಟ್ವಾಳದಲ್ಲಿ ಹತ್ತು ಮಂದಿ ಬಂಧನ

ಎಂಆರ್ ಪಿಎಲ್ ಟ್ಯಾಂಕರ್ ನಿಂದ ಡಾಮರು ಕಳ್ಳತನ ; ಬಂಟ್ವಾಳದಲ್ಲಿ ಹತ್ತು ಮಂದಿ ಬಂಧನ

December 10, 2023
ಮಂಗಳೂರು: 6 ಲ.ರೂ. ಮೌಲ್ಯದ ಎಮ್ ಡಿಎಮ್ ಎ ಸಹಿತ ಆರೋಪಿಗಳಿಬ್ಬರ ಸೆರೆ

ಮಂಗಳೂರು: 6 ಲ.ರೂ. ಮೌಲ್ಯದ ಎಮ್ ಡಿಎಮ್ ಎ ಸಹಿತ ಆರೋಪಿಗಳಿಬ್ಬರ ಸೆರೆ

December 9, 2023
‘ಮಾಸ್ಟರ್ ಶೆಫ್ ಇಂಡಿಯಾ’ ಗೆದ್ದ ಮಂಗಳೂರಿನ ಮುಹಮ್ಮದ್ ಆಶಿಕ್

‘ಮಾಸ್ಟರ್ ಶೆಫ್ ಇಂಡಿಯಾ’ ಗೆದ್ದ ಮಂಗಳೂರಿನ ಮುಹಮ್ಮದ್ ಆಶಿಕ್

December 9, 2023
  • About
  • Advertise
  • Privacy & Policy
  • Contact

Copyright ©2023. All Rights Reserved. Coastaltimeskannada.com | Design and Developed By Bluechip Infosystem

No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2023. All Rights Reserved. Coastaltimeskannada.com | Design and Developed By Bluechip Infosystem

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In