• About us
  • Contact us
  • Disclaimer
Friday, June 26, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಸಂವಾದ ಆಯೋಜಿಸಿದ ಮಂಗಳೂರು ಪೊಲೀಸ್ ಕಮೀಷನರ್

Coastal Times by Coastal Times
October 1, 2021
in ಕರಾವಳಿ
ಮಂಗಳೂರು ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಸಂವಾದ ಆಯೋಜಿಸಿದ ಮಂಗಳೂರು ಪೊಲೀಸ್ ಕಮೀಷನರ್
32
VIEWS
WhatsappTelegramShare on FacebookShare on Twitter

ಮಂಗಳೂರು: ಮೊದಲ ಬಾರಿಗೆ ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಂವಾದವನ್ನು ಆಯೋಜಿಸುವ ಮೂಲಕ ಆಯುಕ್ತ ಎನ್‌. ಶಶಿಕುಮಾರ್, ಜನಸ್ನೇಹಿ ಪೊಲೀಸ್‌ಗಾಗಿ ಸಿಬ್ಬಂದಿ ಆತ್ಮಸ್ಥೈರ್ಯ ವೃದ್ಧಿಸುವ ಹೆಜ್ಜೆ ಇಟ್ಟರು.

ಎಸ್‍ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ನಿಮ್ಮ ಕೆಳ ಹಂತದ ಸಿಬ್ಬಂದಿಯಲ್ಲಿನ ವಿಶೇಷ ಕೌಶಲಗಳನ್ನು ಅರಿತುಕೊಂಡು ಕರ್ತವ್ಯಕ್ಕೆ ನಿಯೋಜಿಸಿ. ಕೆಲವರಲ್ಲಿ ಸಂವಹನ ಕೌಶಲ, ಅಪರಾಧ ಪತ್ತೆ, ಸಾರ್ವಜನಿಕ ಸಂಪರ್ಕ, ವಿಶಿಷ್ಟ ಬುದ್ಧಿಮತ್ತೆ ಇರುತ್ತದೆ. ಅವರನ್ನು ವಿಶ್ವಾಸಕ್ಕೆ ಪಡೆಯುವ ಮೂಲಕ ಜನಸ್ನೇಹಿ ಪೊಲೀಸ್‌ ರೂಪಿಸಿ’ ಎಂದರು.

ಬೆಂಗಳೂರಿನ ಕಾನ್‌ಸ್ಟೆಬಲ್‌ಗಳು ಕೊಲೆ ಪ್ರಕರಣವೊಂದನ್ನು ಭೇದಿಸುವಲ್ಲಿ ಪಟ್ಟ ಪ್ರಯತ್ನವನ್ನು ವಿವರಿಸಿದ ಅವರು, ‘ಕಾನೂನು ಸಾಧಕ–ಬಾಧಕಗಳ ಕುರಿತು ತಳಹಂತದಿಂದ ಹಿರಿಯ ಅಧಿಕಾರಿಗಳ ತನಕ ಎಲ್ಲರೂ ಸ್ಪಷ್ಟತೆ ಹೊಂದಿರಬೇಕು. ಆಗ, ಸಿಬ್ಬಂದಿ ಕೌಶಲ ಹಾಗೂ ಸಾಮರ್ಥ್ಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದು. ಕೌಶಲಕ್ಕೆ ಬೆಲೆ ಸಿಕ್ಕಾಗ ಸಿಬ್ಬಂದಿಯೂ ಸಂಭ್ರಮ ಪಡುತ್ತಾರೆ’ ಎಂದು ಸಂತಸ ವ್ಯಕ್ತಪಡಿಸಿದರು. ಬಳಿಕ ಆಯುಕ್ತರು ಪೊಲೀಸರ ಅಹವಾಲುಗಳನ್ನೂ ಆಲಿಸಿದರು.

ಅನೈತಿಕ ಪೊಲೀಸ್‌ ಗಿರಿ, ಮಾದಕ ದ್ರವ್ಯ ದಂಧೆ, ಅಪರಾಧ ಪ್ರಕರಣಗಳು ಸೇರಿದಂತೆ ನಗರದಲ್ಲಿ ನಡೆಯುವ ಪ್ರಮುಖ ಅಪರಾಧ ಲಕ್ಷಣಗಳ ಬಗ್ಗೆ ಚರ್ಚೆ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮುಖ್ಯ ಅತಿಥಿಯಾಗಿದ್ದರು. ಡಿಸಿಪಿ ಚನ್ನವೀರಪ್ಪ ಹಡಪದ್, ಎಸಿಪಿ ರಂಜಿತ್ ಕುಮಾರ್ ಬಂಡಾರು, ಸಂಚಾರ ವಿಭಾಗದ ಎಸಿಪಿ ನಟರಾಜ್ ಉಪಸ್ಥಿತರಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮೋದಿಗೆ ಕುಡ್ಲ ಹುಡುಗಿ ಆತಿಥ್ಯ : ನಿರ್ವಹಣಾ ತಂಡದ ನೇತೃತ್ವ ವಹಿಸಿದ್ದ ಸುಮಲ್

Next Post

ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ಕನ್ನಡ ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ

Related Posts

ಮಂಗಳೂರು: ರೋಹನ್ ಕಾರ್ಪೊರೇಶನ್‌ನ ‘‘ಆನ್ ಈವನಿಂಗ್ ವಿತ್ ಶಾರುಖ್ ಖಾನ್’’ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್
ಕರಾವಳಿ

ಮಂಗಳೂರು: ರೋಹನ್ ಕಾರ್ಪೊರೇಶನ್‌ನ ‘‘ಆನ್ ಈವನಿಂಗ್ ವಿತ್ ಶಾರುಖ್ ಖಾನ್’’ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್

June 26, 2026
58
ಜೂ.28: ಎಂಸಿಸಿ ಬ್ಯಾಂಕಿನ 22 ನೇ ಶಾಖೆ ದೇರಳಕಟ್ಟೆ ಮತ್ತು ಆಗಸ್ಟ್ 2 ರಂದು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ
ಕರಾವಳಿ

ಜೂ.28: ಎಂಸಿಸಿ ಬ್ಯಾಂಕಿನ 22 ನೇ ಶಾಖೆ ದೇರಳಕಟ್ಟೆ ಮತ್ತು ಆಗಸ್ಟ್ 2 ರಂದು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

June 25, 2026
32
Next Post
ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ಕನ್ನಡ ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ

ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ಕನ್ನಡ ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ

Discussion about this post

Recent News

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.10 ಲಕ್ಷ ರೂ. ಮೌಲ್ಯದ ಎಂಡಿಎಂಎ ಜಪ್ತಿ ಆರೋಪಿ ಅರೆಸ್ಟ್

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.10 ಲಕ್ಷ ರೂ. ಮೌಲ್ಯದ ಎಂಡಿಎಂಎ ಜಪ್ತಿ ಆರೋಪಿ ಅರೆಸ್ಟ್

June 26, 2026
29
ಮಂಗಳೂರು: ರೋಹನ್ ಕಾರ್ಪೊರೇಶನ್‌ನ ‘‘ಆನ್ ಈವನಿಂಗ್ ವಿತ್ ಶಾರುಖ್ ಖಾನ್’’ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್

ಮಂಗಳೂರು: ರೋಹನ್ ಕಾರ್ಪೊರೇಶನ್‌ನ ‘‘ಆನ್ ಈವನಿಂಗ್ ವಿತ್ ಶಾರುಖ್ ಖಾನ್’’ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್

June 26, 2026
58
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.10 ಲಕ್ಷ ರೂ. ಮೌಲ್ಯದ ಎಂಡಿಎಂಎ ಜಪ್ತಿ ಆರೋಪಿ ಅರೆಸ್ಟ್

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.10 ಲಕ್ಷ ರೂ. ಮೌಲ್ಯದ ಎಂಡಿಎಂಎ ಜಪ್ತಿ ಆರೋಪಿ ಅರೆಸ್ಟ್

June 26, 2026
ಮಂಗಳೂರು: ರೋಹನ್ ಕಾರ್ಪೊರೇಶನ್‌ನ ‘‘ಆನ್ ಈವನಿಂಗ್ ವಿತ್ ಶಾರುಖ್ ಖಾನ್’’ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್

ಮಂಗಳೂರು: ರೋಹನ್ ಕಾರ್ಪೊರೇಶನ್‌ನ ‘‘ಆನ್ ಈವನಿಂಗ್ ವಿತ್ ಶಾರುಖ್ ಖಾನ್’’ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್

June 26, 2026
ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!

ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!

June 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d