• About us
  • Contact us
  • Disclaimer
Thursday, October 1, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಎಂಆರ್‌‌ಪಿಎಲ್ ಸ್ಫೋಟದ ತೀವ್ರತೆಗೆ 54 ಮನೆಗಳು, 8 ಧಾರ್ಮಿಕ ಕ್ಷೇತ್ರಗಳಿಗೆ ಹಾನಿ; ಎಫ್​ಐಆರ್​ ದಾಖಲು

Coastal Times by Coastal Times
October 1, 2026
in ಕರಾವಳಿ, ಕ್ರೈಮ್ ನ್ಯೂಸ್
ಎಂಆರ್‌‌ಪಿಎಲ್ ಸ್ಫೋಟದ ತೀವ್ರತೆಗೆ 54 ಮನೆಗಳು, 8 ಧಾರ್ಮಿಕ ಕ್ಷೇತ್ರಗಳಿಗೆ ಹಾನಿ; ಎಫ್​ಐಆರ್​ ದಾಖಲು
10
VIEWS
WhatsappTelegramShare on FacebookShare on Twitter

ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಕೀರ್ಣದ ಒಳಗೆ ಬುಧವಾರ ಸಂಭವಿಸಿದ ಭೀಕರ ಸ್ಫೋಟದ ತೀವ್ರತೆಯು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಹಾನಿ ಉಂಟುಮಾಡಿದೆ. ಅಲ್ಲದೆ, ಘಟನೆಗೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಪ್​ಐಆರ್ ದಾಖಲಾಗಿದೆ.

ಸ್ಫೋಟದ ರಭಸಕ್ಕೆ ನೆರೆಯ ಬಾಳ, ಕಳವಾರು ಹಾಗೂ ತೋಕೂರು ಗ್ರಾಮಗಳಲ್ಲಿ ಒಟ್ಟು 54 ಮನೆಗಳು ಹಾಗೂ ಮಸೀದಿ, ಚರ್ಚ್, ದೇವಸ್ಥಾನ ಸೇರಿದಂತೆ 8 ಧಾರ್ಮಿಕ ಮತ್ತು ಸಾರ್ವಜನಿಕ ಕಟ್ಟಡಗಳು ಭಾಗಶಃ ಹಾನಿಗೊಳಗಾಗಿವೆ ಎಂದು ದ.ಕ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಘಟನೆಯಲ್ಲಿ ಮೂಲ್ಕಿ ತಾಲೂಕಿನ ಐಕಳ ಗ್ರಾಮದ ಮನೀಶ್ ಕರ್ಕೇರ (ಅಂದಾಜು 30) ಎಂಬ ಗುತ್ತಿಗೆ ಕಾರ್ಮಿಕ ಮೃತಪಟ್ಟಿದ್ದು, ಗಂಭೀರ ಸುಟ್ಟ ಗಾಯಗಳಾಗಿರುವ ರಾಜೇಶ್ ಎಂಬವರನ್ನು ನಗರದ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಸಣ್ಣಪುಟ್ಟ ಗಾಯಗಳಾಗಿರುವ 8ಕ್ಕೂ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸ್ಫೋಟದ ತರಂಗಗಳು ಮತ್ತು ಕಂಪನದಿಂದ ಮೂರು ಕಂದಾಯ ಗ್ರಾಮಗಳ ವ್ಯಾಪ್ತಿಯಲ್ಲಿ ಕಟ್ಟಡಗಳಿಗೆ ಹಾನಿಯಾಗಿದೆ. ಇದರಲ್ಲಿ ಬಾಳ ಗ್ರಾಮದಲ್ಲಿ 10 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಕಳವಾರು ಗ್ರಾಮ ವ್ಯಾಪ್ತಿಯಲ್ಲಿ 19 ಮನೆಗಳು ಹಾಗೂ 1 ಚರ್ಚ್, 1 ಮಸೀದಿ ಮತ್ತು 1 ದೇವಸ್ಥಾನ ಸೇರಿದಂತೆ ಒಟ್ಟು 3 ಧಾರ್ಮಿಕ ಕಟ್ಟಡಗಳಿಗೆ ಹಾನಿ ಸಂಭವಿಸಿದೆ. ಅದೇ ರೀತಿ ತೋಕೂರು ಗ್ರಾಮದಲ್ಲಿ 25 ಮನೆಗಳು ಮತ್ತು 5 ಧಾರ್ಮಿಕ ಕ್ಷೇತ್ರಗಳು ಭಾಗಶಃ ಹಾನಿಗೊಳಗಾಗಿವೆ. ಹೀಗೆ ಒಟ್ಟಾರೆಯಾಗಿ ಬಾಳ, ಕಳವಾರು ಹಾಗೂ ತೋಕೂರು ವ್ಯಾಪ್ತಿಯಲ್ಲಿ 54 ಮನೆಗಳು ಹಾಗೂ 8 ಮಸೀದಿ, ಚರ್ಚ್ ಮತ್ತು ದೇವಸ್ಥಾನಗಳು ಜಖಂಗೊಂಡಿವೆ ಎಂದು ದ.ಕ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಇದಲ್ಲದೆ, ಜೋಕಟ್ಟೆ ಗ್ರಾಮ ಪಂಚಾಯತ್ ಕಚೇರಿ, ಸ್ಥಳೀಯ ಸಾರ್ವಜನಿಕ ಗ್ರಂಥಾಲಯ ಹಾಗೂ ಅಂಗನವಾಡಿ ಕೇಂದ್ರದ ಕಿಟಕಿ ಗಾಜುಗಳು ಪೂರ್ಣವಾಗಿ ಪುಡಿಯಾಗಿ ಬಿದ್ದಿದ್ದು, ಗೋಡೆಗಳು ಬಿರುಕು ಬಿಟ್ಟಿವೆ.

ಭೂಕಂಪದಂತೆ ಅಲುಗಾಡಿತು, 5 ಸಾವಿರ ಹಂಚುಗಳು ಪುಡಿಪುಡಿಯಾದವು – ಫಾದರ್ ಮೈಕಲ್: ಸ್ಫೋಟದ ತೀವ್ರತೆಗೆ ಹಾನಿಗೊಳಗಾದ ಕಳವಾರು ಸಂತ ಜೋಸೆಫ್ ಚರ್ಚ್‌ನ ಧರ್ಮಗುರು ಫಾದರ್ ಮೈಕಲ್ ಅವರು ಘಟನೆಯ ಭೀಕರತೆಯನ್ನು ವಿವರಿಸಿದ್ದು, ಮಧ್ಯಾಹ್ನ 12 ರಿಂದ 12:15ರ ಸುಮಾರಿಗೆ ಕಿವಿಗಡಚಿಕ್ಕುವ ಶಬ್ದ ಕೇಳಿಸಿತು. ಇಡೀ ಭೂಮಿ ನಡುಗಿ, ಭೂಕಂಪವೇ ಆಯಿತೇನೋ ಎನ್ನುವಂತೆ ಕಟ್ಟಡ ಅಲುಗಾಡಿತು. ಮುಚ್ಚಿದ್ದ ಕಿಟಕಿ-ಬಾಗಿಲುಗಳು ಬಡಿದುಕೊಂಡು ತೆರೆದುಕೊಂಡವು. ಭಯದಿಂದ ಹೊರಬಂದು ನೋಡಿದಾಗ ಎಂಆರ್‌ಪಿಎಲ್ ಕಡೆಯಿಂದ ದಟ್ಟ ಕಪ್ಪು ಹೊಗೆ ಆಕಾಶಕ್ಕೆ ಏರುತ್ತಿತ್ತು. ನಮ್ಮ ಚರ್ಚ್ ಹಾಗೂ ನಿವಾಸದ ಮೇಲ್ಛಾವಣಿಯ ಸುಮಾರು 4,000 ದಿಂದ 5,000 ಹಂಚುಗಳು ಹೊಡೆದು ಕೆಳಗೆ ಬಿದ್ದಿವೆ, ಕಿಟಕಿ ಗಾಜುಗಳು ಚೂರಾಗಿವೆ. ಮಧ್ಯಾಹ್ನದ ವೇಳೆ ಪ್ರಾರ್ಥನೆ ಇರದ ಕಾರಣ ಜನರಿರಲಿಲ್ಲ, ಹೀಗಾಗಿ ದೊಡ್ಡ ಅಪಾಯ ತಪ್ಪಿದೆ. ನಮ್ಮದು ಸಣ್ಣ ಚರ್ಚ್ ಆಗಿದ್ದು, ಆದಷ್ಟು ಬೇಗ ತಪ್ಪಿತಸ್ಥ ಸಂಸ್ಥೆ ಅಥವಾ ಸರ್ಕಾರವೇ ಹಾನಿಗೆ ಸಂಪೂರ್ಣ ಪರಿಹಾರ ಒದಗಿಸಬೇಕು ಎಂದು ಹೇಳಿದ್ದಾರೆ.

ಸ್ಥಳೀಯರಲ್ಲಿ ಆತಂಕ, ಪರಿಹಾರಕ್ಕೆ ಹೆಚ್ಚಿದ ಆಗ್ರಹ: ಸ್ಫೋಟದ ತೀವ್ರತೆಯಿಂದ ನೂರಾರು ಮನೆಗಳು, ಅಂಗನವಾಡಿ, ಶಾಲೆ ಹಾಗೂ ಧಾರ್ಮಿಕ ಕ್ಷೇತ್ರಗಳು ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ ಹಾನಿಯ ವರದಿ ಸಿದ್ಧಪಡಿಸಿದ್ದು, ಜಿಲ್ಲಾಡಳಿತ ಹಾಗೂ ಎಂಆರ್‌ಪಿಎಲ್ ಆಡಳಿತ ಮಂಡಳಿಯು ಸಂತ್ರಸ್ತ ಕುಟುಂಬಗಳಿಗೆ ಹಾಗೂ ಹಾನಿಗೀಡಾದ ಸಂಸ್ಥೆಗಳಿಗೆ ತುರ್ತಾಗಿ ಪರಿಹಾರ ವಿತರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಎಫ್​ಐಆರ್ ದಾಖಲು: ಭೀಕರ ಸ್ಫೋಟ ಹಾಗೂ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕಡ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ಘಟಕದ ನಿರ್ವಹಣೆಯಲ್ಲಿ ತೋರಿದ ನಿರ್ಲಕ್ಷ್ಯ ಹಾಗೂ ಪ್ರಾಣಹಾನಿಗೆ ಕಾರಣವಾದ ಆರೋಪದಡಿ ಕೋಕರ್ ಹೈಡ್ರೋಟ್ರೀಟರ್ ಘಟಕ (CHT Unit) ಹಾಗೂ ಎಂಆರ್‌ಪಿಎಲ್ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಕೋಕರ್ ಹೈಡ್ರೋಟ್ರೀಟರ್ ಘಟಕದ ಮುಖ್ಯಸ್ಥರು (Head of Coker Hydrotreater Unit, Phase-3, MRPL, Bala, Katipalla) ಮತ್ತು ಎಂಆರ್‌ಪಿಎಲ್ ಸಂಸ್ಥೆಯ ಮುಖ್ಯಸ್ಥರು (Head of MRPL, Surathkal) ವಿರುದ್ದ ಎಫ್​​ಐಆರ್ ದಾಖಲಾಗಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಎಂಆರ್ ಪಿಎಲ್ ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ

Next Post

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

Related Posts

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು
ಕ್ರೈಮ್ ನ್ಯೂಸ್

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

October 1, 2026
13
ಎಂಆರ್ ಪಿಎಲ್ ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ
ಕ್ರೈಮ್ ನ್ಯೂಸ್

ಎಂಆರ್ ಪಿಎಲ್ ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ

September 30, 2026
56
Next Post
ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

Discussion about this post

Recent News

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

October 1, 2026
13
ಎಂಆರ್‌‌ಪಿಎಲ್ ಸ್ಫೋಟದ ತೀವ್ರತೆಗೆ 54 ಮನೆಗಳು, 8 ಧಾರ್ಮಿಕ ಕ್ಷೇತ್ರಗಳಿಗೆ ಹಾನಿ; ಎಫ್​ಐಆರ್​ ದಾಖಲು

ಎಂಆರ್‌‌ಪಿಎಲ್ ಸ್ಫೋಟದ ತೀವ್ರತೆಗೆ 54 ಮನೆಗಳು, 8 ಧಾರ್ಮಿಕ ಕ್ಷೇತ್ರಗಳಿಗೆ ಹಾನಿ; ಎಫ್​ಐಆರ್​ ದಾಖಲು

October 1, 2026
10
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

October 1, 2026
ಎಂಆರ್‌‌ಪಿಎಲ್ ಸ್ಫೋಟದ ತೀವ್ರತೆಗೆ 54 ಮನೆಗಳು, 8 ಧಾರ್ಮಿಕ ಕ್ಷೇತ್ರಗಳಿಗೆ ಹಾನಿ; ಎಫ್​ಐಆರ್​ ದಾಖಲು

ಎಂಆರ್‌‌ಪಿಎಲ್ ಸ್ಫೋಟದ ತೀವ್ರತೆಗೆ 54 ಮನೆಗಳು, 8 ಧಾರ್ಮಿಕ ಕ್ಷೇತ್ರಗಳಿಗೆ ಹಾನಿ; ಎಫ್​ಐಆರ್​ ದಾಖಲು

October 1, 2026
ಎಂಆರ್ ಪಿಎಲ್ ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ

ಎಂಆರ್ ಪಿಎಲ್ ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ

September 30, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d