• About us
  • Contact us
  • Disclaimer
Tuesday, July 1, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮನಪಾ: ಆಸ್ತಿ ತೆರಿಗೆ ಆನ್‌ಲೈನ್ ಪಾವತಿ ಅಪ್ಲಿಕೇಶನ್‌ಗೆ ಚಾಲನೆ, www.mccpropertytax.in.

Coastal Times by Coastal Times
November 1, 2021
in ಕರಾವಳಿ
ಮನಪಾ: ಆಸ್ತಿ ತೆರಿಗೆ ಆನ್‌ಲೈನ್ ಪಾವತಿ ಅಪ್ಲಿಕೇಶನ್‌ಗೆ ಚಾಲನೆ, www.mccpropertytax.in.
18
VIEWS
WhatsappTelegramShare on FacebookShare on Twitter

ಮಂಗಳೂರು, ನ.1: ಸಾರ್ವಜನಿಕರಿಗೆ ಆಸ್ತಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸಲು ಮತ್ತು ಆಸ್ತಿಗಳ ಹಾಗೂ ಪಾವತಿಗಳ ವಿವರ ತಿಳಿಯಲು ವೆಬ್ ಅಪ್ಲಿಕೇಶನ್ ಸಿದ್ದಪಡಿಸಲಾಗಿದ್ದು, ಮೇಯರ್ ಪ್ರೇಮಾನಂದ ಶೆಟ್ಟಿ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ ಸೋಮವಾರ ಚಾಲನೆ ನೀಡಿದರು.

ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಪಾಲಿಕೆ ವ್ಯಾಪ್ತಿಯಲ್ಲಿ 2008ರ ಎ.1ರಿಂದ ಸ್ವಯಂಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಯಲ್ಲಿದೆ. ಈವರೆಗೆ ತೆರಿಗೆದಾರರು ನಿಗದಿತ ನಮೂನೆಗಳಲ್ಲಿ ವಿವರಗಳನ್ನು ಭರ್ತಿ ಮಾಡುವ ಮೂಲಕ ಸೇವಾ ಕೇಂದ್ರ ಹಾಗೂ ಬ್ಯಾಂಕ್‌ಗಳಲ್ಲಿ ಪಾವತಿ ಮಾಡಬೇಕಿತ್ತು. ಇದೀಗ ಡಿಜಿಟಲ್ ತಂತ್ರಜ್ಞಾನ ವ್ಯವಸ್ಥೆ ಬಳಸಿಕೊಳ್ಳಲಾಗುತ್ತಿದ್ದು, ಆನ್‌ಲೈನ್ ಮುಖೇನ ಬಳಸಿಕೊಳ್ಳಲು ವೆಬ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ ಎಂದರು.

ಇದರಿಂದ ಸಾರ್ವಜನಿಕ ಮತ್ತು ಕಚೇರಿಯ ಬಹುತೇಕ ಸಮಯದ ಉಳಿತಾಯವಾಗಲಿದ್ದು, ಇದು ಜನಸ್ನೇಹಿ ತಂತ್ರಾಂಶವಾಗ ಲಿದೆ. ನ. 2ರಿಂದ ಆನ್‌ಲೈನ್ ವ್ಯವಸ್ಥೆ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಲಿದೆ ಎಂದರು.

ಆನ್‌ಲೈನ್ ಪಾವತಿ ಅತಿ ಸರಳ ಆನ್‌ಲೈನ್ ಆಸ್ತಿ ತೆರಿಗೆ ಮಾಡುವಾಗ www.mccpropertytax.in ಲಿಂಕ್‌ಗೆ ಕ್ಲಿಕ್ ಮಾಡಬೇಕು. ಆಗ ತೆರೆಯುವ ಪುಟದಲ್ಲಿ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಆ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ದಾಖಲಿಸಿ, ಬಳಿಕ ನಿಮ್ಮ ಆಸ್ತಿಯು ಭೂಪರಿವರ್ತನೆ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಭೂ ಪರಿವರ್ತನೆ ಆದಲ್ಲಿ ರಸ್ತೆ ವಿಸ್ತೀರ್ಣಕ್ಕೆ ಮಾಡಿರುವ ದಾನ ಪತ್ರದ ಬಗ್ಗೆ ವಿಸ್ತೀರ್ಣವನ್ನು ಸರಿಯಾಗಿ ನಮೂದಿಸಬೇಕು. ಕಟ್ಟಡ ಸಂಖ್ಯೆ, ಖಾತಾ ಸಂಖ್ಯೆ, ಪ್ರಾಪರ್ಟಿ ಐಡಿ (ಪಿಐಡಿ), ಆಸ್ತಿದಾರರ ವಿಳಾಸ ಸರಿಯಾಗಿ ಇದೆಯೇ ಎಂದು ಪರಿಶೀಲಿಸಿ, ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಬೇಕು. ನಿಮ್ಮ ಆಸ್ತಿಯಲ್ಲಿ ಬಾಡಿಗೆದಾರರು ಇದ್ದರೆ ಅವರ ಹೆಸರು ಮತ್ತು ಇತರೇ ವಿವರಗಳನ್ನು ದಾಖಲು ಮಾಡಬೇಕು. ನಿಮ್ಮ ಆಸ್ತಿ ಬರುವ ರಸ್ತೆಯನ್ನು ಸರಿಯಾಗಿ ಆಯ್ಕೆ ಮಾಡಿ,  ಮತ್ತು ಕೇಳಿರುವ ಮಾಹಿತಿಗಳಿಗೆ ಅನುಗುಣವಾಗಿ ವಿವರಗಳನ್ನು ದಾಖಲಿಸಿ, ಪಾವತಿಸಬೇಕಾದ ತೆರಿಗೆ ಮೊತ್ತವನ್ನು ಪರಿಶೀಲಿಸಬೇಕು. ನೆಟ್‌ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಗೂಗಲ್ ಪೇ, ಫೋನ್ ಪೇ, ಬ್ಯಾಂಕ್ ಮೂಲಕ ನಿಮ್ಮ ಪಾವತಿಯನ್ನು ಪೂರ್ಣಗೋಳಿಸಬಹುದು. ಆಪ್‌ಲೈನ್‌ನಲ್ಲಿ ಪಾವತಿ ಮಾಡಬಹುದಾದರೆ ಚಲನ್ ಪಡೆದುಕೊಂಡು ನಿಮಗೆ ಅನುಕೂಲವಾಗುವ ಯಾವುದೇ ಬ್ಯಾಂಕ್‌ನಲ್ಲಿ ಪಾವತಿ ಮಾಡಬಹುದು.

ಸುದ್ದಿಗೋಷ್ಠಿಯಲ್ಲಿ: ಡಿ. ವೇದವ್ಯಾಸ ಕಾಮತ್, ಶಾಸಕರು, ಉಪಮೇಯರ್ ಸುಮಂಗಳಾ ರಾವ್, ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದೀಪ್ ಗರೋಡಿ, ಶೋಭಾ ರಾಜೇಶ್, ಲೀಲಾವತಿ ಪ್ರಕಾಶ್, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಮನಪಾ ಆಯುಕ್ತ ಅಕ್ಷಿ ಶ್ರೀಧರ್ ಉಪಸ್ಥಿತರಿದ್ದರು.

Share this:

  • Facebook
  • X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮೂಡಬಿದಿರೆ: ಫಾಲ್ಸ್ ವೀಕ್ಷಿಸಲು ತೆರಳಿದ ಯುವಕರ ಮೇಲೆ ಸಿಡಿಲು ಬಡಿದು ಇಬ್ಬರು ಸಾವು , ಮೂವರು ಅಸ್ವಸ್ಥ

Next Post

ಕೇರಳ ಭೀಕರ ರಸ್ತೆ ಅಪಘಾತ: ಮಿಸ್ ಸೌತ್ ಇಂಡಿಯಾ – ಮಾಜಿ ಮಿಸ್ ಕೇರಳ ರನ್ನರ್ ಆಫ್ ಸ್ಥಳದಲ್ಲೇ ಸಾವು

Related Posts

ಶಮಾ ಐ ಎನ್ ಎಂ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ
ಕರಾವಳಿ

ಶಮಾ ಐ ಎನ್ ಎಂ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ

June 28, 2025
177
ಮಂಗಳೂರು: ತಾನು ಕೆಲಸ ನಿರ್ವಹಿಸಿದ್ದ ಬ್ಯಾಂಕ್​​ನಲ್ಲೇ ನಿವೃತ್ತ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆಗೆ ಶರಣು
ಕರಾವಳಿ

ಮಂಗಳೂರು: ತಾನು ಕೆಲಸ ನಿರ್ವಹಿಸಿದ್ದ ಬ್ಯಾಂಕ್​​ನಲ್ಲೇ ನಿವೃತ್ತ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆಗೆ ಶರಣು

June 27, 2025
92
Next Post
ಕೇರಳ ಭೀಕರ ರಸ್ತೆ ಅಪಘಾತ: ಮಿಸ್ ಸೌತ್ ಇಂಡಿಯಾ – ಮಾಜಿ ಮಿಸ್ ಕೇರಳ ರನ್ನರ್ ಆಫ್ ಸ್ಥಳದಲ್ಲೇ ಸಾವು

ಕೇರಳ ಭೀಕರ ರಸ್ತೆ ಅಪಘಾತ: ಮಿಸ್ ಸೌತ್ ಇಂಡಿಯಾ – ಮಾಜಿ ಮಿಸ್ ಕೇರಳ ರನ್ನರ್ ಆಫ್ ಸ್ಥಳದಲ್ಲೇ ಸಾವು

Discussion about this post

Recent News

ಬೆಂಗಳೂರು – ಉಡುಪಿ ರೈಲಿನಲ್ಲಿ ಮಹಿಳೆಯ ಪರ್ಸ್‌ನಲ್ಲಿದ್ದ 16.69 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು!

ಬೆಂಗಳೂರು – ಉಡುಪಿ ರೈಲಿನಲ್ಲಿ ಮಹಿಳೆಯ ಪರ್ಸ್‌ನಲ್ಲಿದ್ದ 16.69 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು!

June 30, 2025
32
ಶಮಾ ಐ ಎನ್ ಎಂ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ

ಶಮಾ ಐ ಎನ್ ಎಂ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ

June 28, 2025
177
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬೆಂಗಳೂರು – ಉಡುಪಿ ರೈಲಿನಲ್ಲಿ ಮಹಿಳೆಯ ಪರ್ಸ್‌ನಲ್ಲಿದ್ದ 16.69 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು!

ಬೆಂಗಳೂರು – ಉಡುಪಿ ರೈಲಿನಲ್ಲಿ ಮಹಿಳೆಯ ಪರ್ಸ್‌ನಲ್ಲಿದ್ದ 16.69 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು!

June 30, 2025
ಶಮಾ ಐ ಎನ್ ಎಂ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ

ಶಮಾ ಐ ಎನ್ ಎಂ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ

June 28, 2025
HERO VIDA VX2: ಮಾರುಕಟ್ಟೆಗೆ ಬರಲಿದೆ ‘ಹೀರೋ ವಿಡಾ ವಿಎಕ್ಸ್2’ ಎಲೆಕ್ಟ್ರಿಕ್ ಸ್ಕೂಟರ್

HERO VIDA VX2: ಮಾರುಕಟ್ಟೆಗೆ ಬರಲಿದೆ ‘ಹೀರೋ ವಿಡಾ ವಿಎಕ್ಸ್2’ ಎಲೆಕ್ಟ್ರಿಕ್ ಸ್ಕೂಟರ್

June 28, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d