• About us
  • Contact us
  • Disclaimer
Wednesday, September 30, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉಳ್ಳಾಲ: 7 ವರ್ಷದಲ್ಲೇ ತುಕ್ಕು ಹಿಡಿದ ಕಸ ಸಂಗ್ರಹ ವಾಹನಗಳು, ಚಾಲಕ ಪ್ರಾಣ ಒತ್ತೆ ಇಟ್ಟು ದುಡಿಯುವ ಅನಿವಾರ್ಯತೆ

Coastal Times by Coastal Times
December 1, 2023
in ಕರಾವಳಿ
ಉಳ್ಳಾಲ: 7 ವರ್ಷದಲ್ಲೇ ತುಕ್ಕು ಹಿಡಿದ ಕಸ ಸಂಗ್ರಹ ವಾಹನಗಳು, ಚಾಲಕ ಪ್ರಾಣ ಒತ್ತೆ ಇಟ್ಟು ದುಡಿಯುವ ಅನಿವಾರ್ಯತೆ
35
VIEWS
WhatsappTelegramShare on FacebookShare on Twitter

ಉಳ್ಳಾಲ, ಡಿ.1: ಡಕೋಟಾ ವಾಹನಗಳನ್ನು ನೋಡಬೇಕಾದರೆ ದೂರದ ಆಫ್ರೀಕಾಗೆ ಹೋಗಬೇಕಾಗಿಲ್ಲ. ಮಂಗಳೂರಿನ ಉಳ್ಳಾಲದಲ್ಲೇ ಡಕೋಟಾ ವಾಹನಗಳಿವೆ. ಬಾಗಿಲನ್ನು ಹಗ್ಗದಿಂದ ಕಟ್ಟಿ, ಚಾಲಕ ಕಿಟಕಿ ಮೂಲಕ ನುಸುಳಿ ವಾಹನಕ್ಕೆ ಹೋಗುತ್ತಾನೆ. ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಉಳ್ಳಾಲ ನಗರದಾದ್ಯಂತ ಕಸ ಸಂಗ್ರಹ ಮಾಡುವ ಡಕೋಟ ವಾಹನದ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಉಳ್ಳಾಲ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಗರಂ ಆಗಿದ್ದಾರೆ.

ನ.29ರಂದು ಉಳ್ಳಾಲ ನಗರಸಭೆಯ ವಾರ್ಡ್‌ ಸಂಖ್ಯೆ 15 ಹಿದಾಯತ್ ನಗರದ ಕಲ್ಲಾಪು ಪರಿಸರದಲ್ಲಿ ವಾಹನ ಕಸ ಸಂಗ್ರಹಕ್ಕೆ ಬಂದಾಗ ಚಾಲಕ, ವಾಹನ ಚಲಾಯಿಸಲು ವಾಹನದ ಒಳಗಡೆ ಹೋಗಬೇಕಾದರೆ ವಾಹನದ ಬಾಗಿಲನ್ನು ತೆರೆದು ಹೋಗುವ ಬದಲು, ಕಿಟಕಿಯ ಮೂಲಕ ಹೋಗಿದ್ದರು. ಈ ದೃಶ್ಯವನ್ನು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಘಟಕದ ರಾಜ್ಯ ಘಟಕದ ಕೋಶಾಧಿಕಾರಿ ಅಬ್ದುಸ್ಸಲಾಂ ಸಿ.ಎಚ್. ಎಂಬುವವರು ಸೆರೆ ಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದರು.

ಉಳ್ಳಾಲ ನಗರಸಭೆ ಅಂದರೆ ಅದು ಭ್ರಷ್ಟಾಚಾರದ ಕೂಪ ಇದ್ದಂತೆ. ಇಲ್ಲಿ ತ್ಯಾಜ್ಯ ಸಂಗ್ರಹಕ್ಕೆ ತುಕ್ಕು ಹಿಡಿದು ನಲುಗಿದ ವಾಹನವನ್ನ ಬಳಸುತ್ತಿದ್ದು ಅದರ ಎರಡೂ ಬಾಗಿಲುಗಳು ಜೋತು ಬಿದ್ದು ಓಪನ್ ಮಾಡಲೂ ಆಗುತ್ತಿಲ್ಲ. ಈ ವಾಹನವನ್ನ ಚಲಾಯಿಸುವ ಚಾಲಕ ಪ್ರಾಣ ಒತ್ತೆ ಇಟ್ಟು ದುಡಿಯುವ ಅನಿವಾರ್ಯತೆ. ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಪ್ರತಿನಿಧಿಸುವ ಕ್ಷೇತ್ರದ ಉಳ್ಳಾಲ ನಗರಸಭೆಗೆ ಕನಿಷ್ಟ ಕಸ ಸಂಗ್ರಹಕ್ಕೂ ಸರಿಯಾದ ವಾಹನ ಒದಗಿಸಲು ಸಾಧ್ಯವಿಲ್ಲವೇ.?ವಾಹನ ಚಾಲಕನಿಗೂ ಸಂಸಾರ ಇಲ್ಲವೇ.. ಈ ವಾಹನದಲ್ಲಿ ಅವಘಡ ಆದರೆ ಅವರ ಪಾಡೇನು ಎಂದು ಪ್ರಶ್ನಿಸಿದ್ದಾರೆ.

ಇನ್ನು ಈ ಬಗ್ಗೆ ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತೆ ವಾಣಿ ವಿ ಆಳ್ವ ಪ್ರತಿಕ್ರಿಯೆ ನೀಡಿದ್ದು, ಈ ವಾಹನ ಏಳು ವರ್ಷ ಹಳೆಯದ್ದಾಗಿದ್ದು, ದುರಸ್ಥಿ ಮಾಡಲು ಅಸಾಧ್ಯವಾಗಿದೆ. ಹೊಸ ಆಟೋ ಟಿಪ್ಪರ್ ವಾಹನ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಬಗ್ಗೆ ಶಾಸಕ ಖಾದರ್ ಗಮನಕ್ಕೂ ತರಲಾಗಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ವಿಧಾನಸಭೆಯ ಸಭಾಧ್ಯಕ್ಷರ ತವರು ಕ್ಷೇತ್ರದಲ್ಲೇ ಆಡಳಿತ ವ್ಯವಸ್ಥೆ ಅವ್ಯವಸ್ಥೆಯ ಗೂಡಾಗಿದ್ದು, ಜನ ಛೀಮಾರಿ ಹಾಕುತ್ತಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಕಸ್ಟಮ್ಸ್ ಅಧಿಕಾರಿಗಳಿಂದ ಗುದನಾಳದಲ್ಲಿದ್ದ 35 ಲಕ್ಷ ರೂ. ಮೌಲ್ಯದ ಚಿನ್ನ ವಶ

Next Post

ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ಅವಶ್ಯ: ಸಚಿವ ದಿನೇಶ್ ಗುಂಡೂರಾವ್

Related Posts

‘ದಕ್ಷಿಣ ಕನ್ನಡ’ ಎಂಬ ಐತಿಹಾಸಿಕ ಹೆಸರನ್ನೇ ಉಳಿಸಿ: ಸರ್ಕಾರಕ್ಕೆ ಮನವಿ
ಕರಾವಳಿ

‘ದಕ್ಷಿಣ ಕನ್ನಡ’ ಎಂಬ ಐತಿಹಾಸಿಕ ಹೆಸರನ್ನೇ ಉಳಿಸಿ: ಸರ್ಕಾರಕ್ಕೆ ಮನವಿ

September 29, 2026
36
ಕಾನ್ವೆಂಟ್ ಸ್ಕೂಲ್ ಗಳಲ್ಲಿ ದಸರಾಗೆ ರಜೆ ಯಾಕಿಲ್ಲ, ರಜೆ ಕಡಿತ ಮಾಡಿದರೆ ಪ್ರತಿಭಟನೆ ; ಪ್ರಮೋದ್ ಮುತಾಲಿಕ್
ಕರಾವಳಿ

ಕಾನ್ವೆಂಟ್ ಸ್ಕೂಲ್ ಗಳಲ್ಲಿ ದಸರಾಗೆ ರಜೆ ಯಾಕಿಲ್ಲ, ರಜೆ ಕಡಿತ ಮಾಡಿದರೆ ಪ್ರತಿಭಟನೆ ; ಪ್ರಮೋದ್ ಮುತಾಲಿಕ್

September 29, 2026
30
Next Post
ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ಅವಶ್ಯ: ಸಚಿವ ದಿನೇಶ್ ಗುಂಡೂರಾವ್

ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ಅವಶ್ಯ: ಸಚಿವ ದಿನೇಶ್ ಗುಂಡೂರಾವ್

Discussion about this post

Recent News

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ ; ತೀವ್ರ ಗಾಯಗೊಂಡಿದ್ದ ಆಟೋ ಚಾಲಕ ಮೃತ್ಯು

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ ; ತೀವ್ರ ಗಾಯಗೊಂಡಿದ್ದ ಆಟೋ ಚಾಲಕ ಮೃತ್ಯು

September 30, 2026
56
‘ದಕ್ಷಿಣ ಕನ್ನಡ’ ಎಂಬ ಐತಿಹಾಸಿಕ ಹೆಸರನ್ನೇ ಉಳಿಸಿ: ಸರ್ಕಾರಕ್ಕೆ ಮನವಿ

‘ದಕ್ಷಿಣ ಕನ್ನಡ’ ಎಂಬ ಐತಿಹಾಸಿಕ ಹೆಸರನ್ನೇ ಉಳಿಸಿ: ಸರ್ಕಾರಕ್ಕೆ ಮನವಿ

September 29, 2026
36
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ ; ತೀವ್ರ ಗಾಯಗೊಂಡಿದ್ದ ಆಟೋ ಚಾಲಕ ಮೃತ್ಯು

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ ; ತೀವ್ರ ಗಾಯಗೊಂಡಿದ್ದ ಆಟೋ ಚಾಲಕ ಮೃತ್ಯು

September 30, 2026
‘ದಕ್ಷಿಣ ಕನ್ನಡ’ ಎಂಬ ಐತಿಹಾಸಿಕ ಹೆಸರನ್ನೇ ಉಳಿಸಿ: ಸರ್ಕಾರಕ್ಕೆ ಮನವಿ

‘ದಕ್ಷಿಣ ಕನ್ನಡ’ ಎಂಬ ಐತಿಹಾಸಿಕ ಹೆಸರನ್ನೇ ಉಳಿಸಿ: ಸರ್ಕಾರಕ್ಕೆ ಮನವಿ

September 29, 2026
ಕರಂಗಲಪಾಡಿಯಲ್ಲಿ ಸರಣಿ ಅಪಘಾತ; ನ್ಯಾಯಾಧೀಶರಿದ್ದ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ, ಆಟೋ ಚಾಲಕ ಗಂಭೀರ, ಜಡ್ಜ್ ಸಹಿತ ಹಲವರಿಗೆ ಗಾಯ

ಕರಂಗಲಪಾಡಿಯಲ್ಲಿ ಸರಣಿ ಅಪಘಾತ; ನ್ಯಾಯಾಧೀಶರಿದ್ದ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ, ಆಟೋ ಚಾಲಕ ಗಂಭೀರ, ಜಡ್ಜ್ ಸಹಿತ ಹಲವರಿಗೆ ಗಾಯ

September 29, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d