ಬುಕಾರೆಸ್ಟ್ (ರೊಮೇನಿಯಾ): ಉಕ್ರೇನ್‌ನ ಗಡಿ ಭಾಗಗಳಿಗೆ ತೆರಳಲು ಭಾರತದ ರಾಷ್ಟ್ರ ಧ್ವಜವು ಭಾರತೀಯರಿಗಷ್ಟೇ ಅಲ್ಲದೆ ಪಾಕಿಸ್ತಾನ ಹಾಗೂ ಟರ್ಕಿಯ ಪ್ರಜೆಗಳಿಗೂ ನೆರವಾಗಿದೆ. ತ್ರಿವರ್ಣ ಧ್ವಜದ ಸಹಾಯದಿಂದಾಗಿ ಭಾರತೀಯರೊಂದಿಗೆ ಹಲವು ರಾಷ್ಟ್ರಗಳ ನಾಗರಿಕರು ರೊಮೇನಿಯಾ ತಲುಪಿದ್ದಾರೆ.
ರಷ್ಯಾ ದಾಳಿಗೆ ಒಳಗಾಗಿರುವ ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳಲು ಭಾರತೀಯ ವಿದ್ಯಾರ್ಥಿಗಳು ನಿರಂತರ ಪ್ರಯತ್ನದಲ್ಲಿದ್ದಾರೆ. ಉಕ್ರೇನ್ ಗಡಿ ಭಾಗಗಳಿಗೆ ತೆರಳಿ ಅಲ್ಲಿಂದ ರೊಮೇನಿಯಾದ ಬುಕರೆಸ್ಟ್ ಪ್ರವೇಶಿಸಿ ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ಮರಳುತ್ತಿದ್ದಾರೆ. ಆದರೆ, ಯುದ್ಧ ಪೀಡಿತ ಪ್ರದೇಶಗಳ ಹಲವು ಚೆಕ್‌ಪಾಯಿಂಟ್‌ಗಳನ್ನು ಸುರಕ್ಷಿತವಾಗಿ ದಾಟುವಲ್ಲಿ ದೇಶದ ತ್ರಿವರ್ಣ ಧ್ವಜವು ಪ್ರಮುಖ ಪಾತ್ರವಹಿಸಿದೆ. ಭಾರತದ ವಿದ್ಯಾರ್ಥಿಗಳೊಂದಿಗೆ ಪಾಕಿಸ್ತಾನ ಮತ್ತು ಟರ್ಕಿಯ ವಿದ್ಯಾರ್ಥಿಗಳೂ ಪ್ರಯಾಣಿಸಿದ್ದರು ಎಂದು ವರದಿಯಾಗಿದೆ.
ಭಾರತ ಸರ್ಕಾರವು ಉಕ್ರೇನ್‌ನ ನೆರೆಯ ರಾಷ್ಟ್ರಗಳ ಮೂಲಕ ಭಾರತೀಯರನ್ನು ಕರೆ ತರಲು ‘ಆಪರೇಷನ್ ಗಂಗಾ’ ಹೆಸರಿನಲ್ಲಿ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿದೆ. ಏರ್ ಇಂಡಿಯಾ, ಸ್ಪೈಸ್‌ಜೆಟ್ ಹಾಗೂ ಇಂಡಿಗೊ ವಿಮಾನಗಳು ಹಾರಾಟ ನಡೆಸುತ್ತಿವೆ.
ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಿಂದ ಹೊರಡುವುದಕ್ಕೂ ಮುನ್ನ ಸ್ಪ್ರೇ ಪೇಯಿಂಟ್‌ಗಳು ಮತ್ತು ಪರದೆಗಳನ್ನು ಖರೀದಿಸಿ ತಂದಿದ್ದರು. ಪರದೆಗಳನ್ನು ಕತ್ತರಿಸಿ, ಅವುಗಳ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಮೂಡಿಸಿದ್ದರು. ತ್ರಿವರ್ಣ ಧ್ವಜ ಹೊಂದಿರುವ ಪರದೆಗಳನ್ನು ಬಳಸಿ ಚೆಕ್‌ಪಾಯಿಂಟ್‌ಗಳಲ್ಲಿ ಯಾವುದೇ ಆತಂಕ ಇಲ್ಲದೆ ಮುಂದುವರಿದರು. ಅವರೊಂದಿಗೆ ಪಾಕಿಸ್ತಾನ ಮತ್ತು ಟರ್ಕಿಯ ವಿದ್ಯಾರ್ಥಿಗಳೂ ಇದ್ದರು. ‘ಅವರೂ ಸಹ ಭಾರತದ ಧ್ವಜದ ನೆರವಿನಿಂದ ಮುಂದೆ ಸಾಗಿದರು’ ಎಂದು ಭಾರತದ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
#WATCH | "We were easily given clearance due to the Indian flag; made the flag using a curtain & colour spray…Both Indian flag & Indians were of great help to the Pakistani, Turkish students," said Indians students after their arrival in Bucharest, Romania#UkraineCrisis pic.twitter.com/vag59CcPVf
— ANI (@ANI) March 2, 2022
Discover more from Coastal Times Kannada
Subscribe to get the latest posts sent to your email.
Discussion about this post